ಹಸುರು ಪಾಗಾರಗಳು

ಹಸುರು ಪಾಗಾರಗಳು

ನನಗೆ ಮಣ್ಣಿನ ಪಾಗಾರಗಳು ಯಾವಾಗಲೂ ಇಷ್ಟ.
ಮುರಕಲ್ಲಿನ (laterite stone) ಅಥವಾ ಮಣ್ಣಿನ ಪಾಗಾರಗಳ ಮೇಲೆ ನಡು ಮಳೆಗಾಲದ ಹೊತ್ತಿಗೆ ಪುಟ್ಟ ಪುಟ್ಟ ಝರಿಗಿಡಗಳು ಮೊಳೆತು ಸಾಲುಗಟ್ಟಿದರೆ ನೋಡಲು ಹಬ್ಬ. ಬೇಸಗೆಯಲ್ಲಿ ಬಿಸಿಲಿಗೆ ಸುಟ್ಟು ಕರಕಲಾಗಿ ಕಪ್ಪೇರಿದ ಪಾಗಾರದ ಮೇಲೆ ಮಳೆಗಾಲ ಆರಂಭವಾಗುತ್ತಿದ್ದ್ದ ಹಾಗೆ ಜೀವ ಬಂದು ತಿಳಿಹಸಿರು ನಳನಳಿಸಲು ಆರಂಭವಾಗುತ್ತದೆ. ನನಗೆ ಆಗ ಚಿತ್ರಗಳನ್ನು ತೆಗೆಯುವುದೆಂದರೆ ಬಹಳ ಸಂಭ್ರಮ.
ಸಿಮೆಂಟ್ ಬಳಿದು ವೈಟ್ವಾಶ್ ಮಾಡುವುದು ದಕ್ಷಿಣ ಕನ್ನಡದ compound wall ಗಳಿಗೆ ಖಂಡಿತ ಸೂಕ್ತವಲ್ಲ. ಸಿಮೆಂಟ್ ಪ್ಲಾಸ್ಟರಿಂಗ್ ಮಾಡಿದ ಶ್ರೀಮಂತ ಪಾಗಾರಗಳು ಮಳೆಗಾಲ ಸುರುವಾಗುತ್ತಿದ್ದ ಹಾಗೆ ಅಲ್ಲಲ್ಲಿ ಕಪ್ಪಾಗಿ ಚರ್ಮ ರೋಗ ಬಂದಂತೆ ಕಂಗೊಳಿಸುತಿರುತ್ತವೆ. ಮಣ್ಣಿನ/ಮುಳ್ಳು ಹೊದೆಸಿದ/laterite/granite ಪಾಗಾರಗಳು ಪ್ರಕೃತಿಯೊಂದಿಗೆ ಸಹಜವಾಗಿ ಹೊಂದಿಕೊಂಡು ಒಂದು continuity ಯನ್ನು ಕೊಡುತ್ತವೆ.
ಬೇಲಿಯ ಬಗ್ಗೆ ಚಿಕ್ಕಮಗಳೂರಿನ ಕಾಫಿ ಕೃಷಿಕರಿಗಂತೂ ವಿಶೇಷವಾದ ಅಭಿರುಚಿಯಿದೆ. ಅವರು ಬೇಲಿಗೆ ಒಳ್ಳೆಯ ಗಿಡಗಳನ್ನು ನೆಟ್ಟು, ಅವನ್ನು ಕಾಲಕಾಲಕ್ಕೆ ಕತ್ತರಿಸಿ, ಬೆಂಗಳೂರಿನಿಂದ ಬಂದು ಬೆಳಬೆಳಗ್ಗೆ ಘಾಟಿಯಲ್ಲಿ ಸಿಕ್ಕಿಹಾಕಿಕೊಳ್ಳುವ ನನ್ನಂಥವರಿಗೆ ನೋಡಲು ಅದ್ಭುತ ನೋಟವನ್ನೇ ಸೃಷ್ಟಿಸಿ ಬಿಡುತ್ತಾರೆ.
ನೀವು ಬೇಲಿಯ ಸೊಬಗಿಗೆ ಸ್ಪಂದಿಸುತ್ತೀರಾ?
 ವಸಂತ್ ಕಜೆ. 
Rating
No votes yet

Comments