ಹಾಗೆ ಸುಮ್ಮನೆ
ಹನಿ ಹನಿ
ಹೊರಗೆ ಭೋರೆಂದು ಹೊಯ್ಯುತಿಹ ಮಳೆಯು
ಒಳಗೆ ಅರ್ಧರ್ಧ ಬರೆದಿಟ್ಟಿಹ ಸಾಲುಗಳನು
ನೋಡಿ ನಕ್ಕಂತೆ, ಅಟ್ಟಹಾಸದ ಗಾಳಿ ಬೀರುತಿದೆ
ಅದಕೆ ಪ್ರತೀಕಾರ ಗೈಯುಲು ಕುಳಿತಿರುವೆ ನಾನು
ಪ್ರಕೃತಿಯ ಎದುರು ನಾನೊಂದು ಹುಲು ಮಾನವ
ಬರೆದದ್ದು ಬರೀ ಹನಿ ಹನಿ!
ನಲ್ಲ ಹೇಳಿದ್ದು
ಅಗಲಗೊಳ್ಳುತ್ತಿರುವ ನಿನ್ನೂರ ರಸ್ತೆಗಳೆಲ್ಲಾ,
ನೀ ಕೈ ಅರಳಿಸಿ ಕರೆದಂತೆ ಸ್ವಾಗತ ನೀಡುತಿವೆ
ಕಾಮಗಾರಿ ನಡೆಯುತ್ತಾ ಏಳುತ್ತಿರುವ ಕೆಂಪು ಧೂಳು
ನಾಚಿದ ನಿನ್ನ ಕೆಂಪು ಕೆನ್ನೆಯ ನೆನಪ ತರುತ್ತಿವೆ
ಪ್ರಶ್ನೆ - ಉತ್ತರ
"ಯಾಕೆ ನನ್ನಿನಿಯ, ನಿನಗೆ
ತಲೆ ನೋವು, ಭಾರ?"
"ಏನು ಮಾಡಲಿ ಪ್ರಿಯೆ
ತಲೆಯ ತುಂಬೆಲ್ಲ
ನೀನೇ ಇರುವೆಯಲ್ಲಾ !"
Rating
Comments
ಉ: ಹಾಗೆ ಸುಮ್ಮನೆ
In reply to ಉ: ಹಾಗೆ ಸುಮ್ಮನೆ by ksraghavendranavada
ಉ: ಹಾಗೆ ಸುಮ್ಮನೆ
ಉ: ಹಾಗೆ ಸುಮ್ಮನೆ
In reply to ಉ: ಹಾಗೆ ಸುಮ್ಮನೆ by kavinagaraj
ಉ: ಹಾಗೆ ಸುಮ್ಮನೆ
ಉ: ಹಾಗೆ ಸುಮ್ಮನೆ
In reply to ಉ: ಹಾಗೆ ಸುಮ್ಮನೆ by gopinatha
ಉ: ಹಾಗೆ ಸುಮ್ಮನೆ