ಹಾದಿಯಲಿ ನಡೆವಾಗ!!!
ಸಖೀ
ಹಾದಿಯಲಿ ನಡೆವಾಗ ದಿನವೂ
ನನಗೆ ಕಾಣ ಸಿಗುವ ಮುಖಗಳಲಿ
ಕಂಡು ಕೊಂಡಿದ್ದೇನೆ ನಾನು
ನಿಜವಾಗಿಯೂ ಹಲವಾರು ಬಗೆ;
ನಾನು ಹಾದಿಯಲಿ ಕಾಣ ಸಿಕ್ಕಿದ್ದೇ
ಭಾಗ್ಯವೆಂದು ಮುಖವೆಲ್ಲಾ ಅರಳಿಸಿ
ನಲಿವಿಂದ ನನ್ನೊಡನೆ ಮಾತಾಡ
ಬಯಸುವ ನಮ್ಮವರದೊಂದು ಬಗೆ;
ನೋಡಿದ ಮೇಲೆ ನಗಲೇ ಬೇಕಲ್ಲಾ
ಎಂದುಕೊಳ್ಳುತ್ತಾ ಒತ್ತಾಯದ
ದೇಶಾವರಿ ನಗೆ ಚೆಲ್ಲುವ ನಮ್ಮವರು
ಎನಿಸಿಕೊಂಡಿರುವವರದೊಂದು ಬಗೆ;
ನೋಡಿದ್ದು ಗೊತ್ತಾಗಬಾರದೆಂದು
ನೋಡಿಯೂ ನೋಡದವರಂತೆ
ನಟಿಸುತ್ತಾ ನನ್ನನ್ನು ಕದ್ದು ನೋಡಿ
ಆನಂದಿಸುವವರದೊಂದು ಬಗೆ;
'ಓ.. ನಾನೇನೂ ನೋಡಿಲ್ಲಪ್ಪಾ'
ಅಂತ ದೂರದ ಮೊದಲ
ನೋಟದಿಂದಲೇ ಮುಖ ಮರೆಸಿ
ಮುನ್ನಡೆವವರದೊಂದು ಬಗೆ;
'ಥೂ .. ಇವರೆಲ್ಲಿ ಸಿಕ್ಕಿದರಪ್ಪಾ'
ಎಂದು ಮನದೊಳಗೆ ಸಹಸ್ರ
ನಾಮ ಜಪಿಸುತ್ತಾ ಕಣ್ಣಲ್ಲಿ
ಕಿಡಿಕಾರುವವರದೊಂದು ಬಗೆ
'ಓ... ಅದು ಅವರಲ್ಲವೇ?
ಛೆ! .. ನಾನು ನೋಡಿಯೇ ಇಲ್ಲ,
ಏನಂದುಕೊಂಡರೋ' ಎಂದು
ಬೇಸರಿಸುವವರದೊಂದು ಬಗೆ;
ಇಷ್ಟಾದರೂ ನಾನು ನಾನೇ,
ನನ್ನ ಒಂಟಿ ವ್ಯಕ್ತಿತ್ವದ ದರುಶನ
ಆದಾಗ ವಿಭಿನ್ನ ಜನರ ಪ್ರತಿಕ್ರಿಯೆ
ನೋಡು ನೀ ಈ ಹಲವಾರು ಬಗೆ!
*-*-*-*-*-*-*-*-*-*
Comments
ಉ: ಹಾದಿಯಲಿ ನಡೆವಾಗ!!!
In reply to ಉ: ಹಾದಿಯಲಿ ನಡೆವಾಗ!!! by anil.ramesh
ಉ: ಹಾದಿಯಲಿ ನಡೆವಾಗ!!!
In reply to ಉ: ಹಾದಿಯಲಿ ನಡೆವಾಗ!!! by asuhegde
ಉ: ಹಾದಿಯಲಿ ನಡೆವಾಗ!!!
In reply to ಉ: ಹಾದಿಯಲಿ ನಡೆವಾಗ!!! by Divya Bhat Balekana
ಉ: ಹಾದಿಯಲಿ ನಡೆವಾಗ!!!
ಉ: ಹಾದಿಯಲಿ ನಡೆವಾಗ!!!
In reply to ಉ: ಹಾದಿಯಲಿ ನಡೆವಾಗ!!! by manjunathams
ಉ: ಹಾದಿಯಲಿ ನಡೆವಾಗ!!!
In reply to ಉ: ಹಾದಿಯಲಿ ನಡೆವಾಗ!!! by asuhegde
ಉ: ಹಾದಿಯಲಿ ನಡೆವಾಗ!!!
In reply to ಉ: ಹಾದಿಯಲಿ ನಡೆವಾಗ!!! by ambika
ಉ: ಹಾದಿಯಲಿ ನಡೆವಾಗ!!!
ಉ: ಹಾದಿಯಲಿ ನಡೆವಾಗ!!!
In reply to ಉ: ಹಾದಿಯಲಿ ನಡೆವಾಗ!!! by roopablrao
ಉ: ಹಾದಿಯಲಿ ನಡೆವಾಗ!!!