ಹಾವು, ಗುಬ್ಬಚ್ಚಿ, ಯಕ್ಷಗಾನ

ಹಾವು, ಗುಬ್ಬಚ್ಚಿ, ಯಕ್ಷಗಾನ

ಮತ್ತಷ್ಟು ಚಿತ್ರಗಳು. ಇಂದು ಸಮಯವಾಗಿದೆ ಎಂದು ಆದಷ್ಟು ಅಪ್ಲೋಡ್ ಮಾಡಿರುವೆ - ಇಲ್ಲವಾದರೆ ಎಂದಿನಂತೆ ಅದು ಕಂಪ್ಯೂಟರಿನಲ್ಲೇ ಉಳಿಯುವುದು.

ಪುತ್ತೂರಿನ ಹೋಟೆಲೊಂದರ ಪಾರ್ಕಿಂಗ್ ಏರಿಯ ಅದು - ಗುಬ್ಬಚ್ಚಿಗಳ ಚಿಲಿಪಿಲಿ ಗಲಾಟೆ ಅಲ್ಲಿ ನಡೆದಿತ್ತು. 

 

ನಾಗರಬನದ ಪಕ್ಕ ಇದ್ದ ರವೀಂದ್ರನಾಥ್ ಐತಾಳರ ನಿಜವಾದ 'ನಾಗರಬನ',

ಇನ್ನೂ ಪುಟ್ಟ ಹಾವು. ಆಗಲೇ ಕಚ್ಚಲು ಹೊರಟಿತ್ತು! 

ಈ ಚಿತ್ರ ಮುಂಚೆ ಅಪ್ಲೋಡ್ ಮಾಡಿದ್ದೆ. ನೀವೆಲ್ಲರೂ ನೋಡಿರುತ್ತೀರಿ.

ಆ ಹಾವು ಸುರುಳಿ ಸುತ್ತಿಕೊಂಡು ಕಚ್ಚಲು 'force' gather ಮಾಡಿಕೊಂಡದ್ದು ವಿಸ್ಮಯಗೊಳಿಸಿತ್ತು. 

ಪೆಪ್ಸೋಡೆಂಟ್ ಬ್ರಶ್ ಥರಾ ಸುರುಳಿಸುರುಳಿ.

ಮಡಿಕೆಯನ್ನು ಕೆದಕಿದ ಕೈಯನ್ನೇ ಗಮನಿಸುತ್ತ ಸುರುಳಿ ಸುತ್ತಿಕೊಂಡಿತ್ತು ಹಾವಿನ ಮರಿ.

ಕಾಳಿಂಗ ಸರ್ಪ.

ಅಲ್ಲೊಂದು ಗಿಡಗಳ ನರ್ಸರಿಯ ಬದಿಯಲ್ಲಿ ಕಟ್ಟಿ ಹಾಕಿದ್ದ ಹಸು. 

ಒಂದೇ ಎಲೆ, ಒಂದೆಲಗವಲ್ಲ.

ಎರಡು ತಲೆ ಹಾವು ಅನ್ನುತ್ತಾರಂತೆ ಈ ಹಾವಿಗೆ - ಅದರ ಬಾಲ ಕೂಡ ತಲೆಯಂತೆ ಇರುತ್ತದಂತೆ.

ಈ ಚಿತ್ರದಲ್ಲಿ ಮುಖ ಸ್ವಲ್ಪ ಕಾಣುತ್ತದೆ.

"ಪಾದರಕ್ಷೆ ಕಳಚಿ ಇಟ್ಟು ಬನ್ನಿ" :-) 

ಮರದ ಹಾವು - ರವೀಂದ್ರ ಐತಾಳರ ಆಫೀಸಿನ ಮುಂದೆ. 

ಬನದ ಎದುರು ಐತಾಳರು. 

ವಸಂತ್, ಕೈಯಲ್ಲಿ ಹಾವು ಹಿಡಿದು.

ಪುತ್ತೂರಲ್ಲಿ ಯಕ್ಷಗಾನ ನಡೆಯುತ್ತಿತ್ತು. ಅಲ್ಲಿ ಅಂದು ಹೌಸ್ ಫುಲ್!

ಇವು ಮತ್ತಷ್ಟು ಆಯ್ದ ಚಿತ್ರಗಳು. ಉಳಿದ ಚಿತ್ರಗಳು ಇನ್ನೊಮ್ಮೆ! 

ಈಗ ಅಪ್ಲೋಡ್ ಮಾಡಿದ್ದರಲ್ಲಿ ಯಾವುದೂ ಚಿತ್ರ ಬಿಟ್ಟುಹೋಗಿಲ್ಲ ಎಂದುಕೊಳ್ಳುತ್ತೇನೆ.  ಗಡಿಬಿಡಿಯಲ್ಲಿ ಅಪ್ಲೋಡ್ ಮಾಡಿರುವೆ, ಏನಾದರೂ ಹೆಚ್ಚುಕಡಿಮೆಯಾಗಿದ್ದರೆ ಬರೆದು ತಿಳಿಸುತ್ತೀರಲ್ವ?

Rating
No votes yet

Comments