ಹಿಂದೂ (ಇಂಡಿಯಾ) ವಿರೋಧಿ ಪಕ್ಷ
ಇದರಲ್ಲಿ ಮುಚ್ಚುಮರೆ ಇಲ್ಲ. ಜನತೆಯ ಪಕ್ಷ, ಬಡವರ ಪಕ್ಷ,ಭಾರತೀಯ ಜನತೆಯ ಪಕ್ಷ ಇತ್ಯಾದಿ ಎಲ್ಲಾ ಪಕ್ಷಗಳನ್ನು ನೋಡಿದ್ದೀರಿ. ಹೇಳುವುದು ಒಂದು, ಮಾಡುವುದು ಇನ್ನೊಂದು.. ನಮ್ಮದು ಅಕ್ಷರಶಃ ಹಿಂದೂ (ಇಂಡಿಯ) ವಿರೋಧಿ ಪಕ್ಷ.ಅಥವಾ HIV ಪಕ್ಷ. HIV ಯಂತೆ ದೇಶಾದ್ಯಂತ ಬೇಗನೆ ಹರಡುವುದು ಎಂಬ ಗ್ಯಾರಂಟಿ ನಮಗೆ ಇದೆ.
‘ಹಿಂದೂ’ ಎನ್ನಲು ಎಷ್ಟು ಜನ ನಾಚಿಕೊಳ್ಳುವರು, ‘ಹಿಂದೂ ವಿರೋಧಿ’ ಅಲೆ , ಎರಡನ್ನೂ ಗಮನಿಸಿಯೇ ಈ ಪಕ್ಷ ಕಟ್ಟಿದ್ದು. ಪಕ್ಷಕ್ಕೆ ಸೇರಿ, ಇಲ್ಲಾ ಬಿಡಿ..ನಮಗೆ ಕ್ಯಾರೇ ಇಲ್ಲ. ‘ಓಟು ಕೇಳಲು ಬರುತ್ತಾರಲ್ಲ, ಆಗ ನೋಡೋಣ’ ಅಂದ್ರಾ? ಹೆ.. ವೋಟಿನ ಭಿಕ್ಷೆ ಬೇಡುವ ಮಾಮೂಲಿ ರಾಜಕಾರಣಿಗಳಲ್ಲ ನಾವು. ಸುಮ್ಮ್ಸುಮ್ಮನೆ ಅಲ್ರೀ ಇಲಿ ವಾಯ್ಸ್ ವಿಶ್ವವಿದ್ಯಾಲಯ ನನಗೆ ಡಾಕ್ಟರೇಟು ಕೊಡಲು ಹೊರಟಿದ್ದು. ಯಾವ ರಾಜಕೀಯ ಧುರೀಣನಿಗೂ, ಆರ್ಥಿಕ ತಜ್ಞನಿಗೂ ಇದುವರೆವಿಗೂ ಗೊತ್ತಿಲ್ಲದ ತಂತ್ರಗಳು ನನಗೆ ಗೊತ್ತಿದೆ.
ಪ್ರತೀ ತಿಂಗಳ ೧ನೇ ತಾರೀಕಿಗೆ ನನ್ನ ಬರ್ತ್ಡೇ ಆಚರಿಸಲಾಗುವುದು. ಪ್ರತಿಯೊಬ್ಬರೂ ಆ ದಿನ ಪಕ್ಷಕ್ಕೆ ಮನಸಾರೆ, ಖುಷಿಯಿಂದ ದೇಣಿಗೆ ನೀಡಲೇ ಬೇಕು. ಹಿಂದೂ ವಿರೋಧಿಯಾದುದರಿಂದ ಲಿಂಗಾಯತ, ಬ್ರಾಹ್ಮಣ, ಕುರುಬ ಇತ್ಯಾದಿ ಜಾತಿ ರಾಜಕೀಯ ಇಲ್ಲವೇ ಇಲ್ಲ. ಆದರೂ ನಮ್ಮ ಪಕ್ಷದಲ್ಲಿ ‘ಮೀಸಲಾತಿ’ ಇದೆ. ೭೫%! ಹೌದು ೭೫% ಮೀಸಲಾತಿ- ರೌಡಿ (ಪಕ್ಷದ ನಿಷ್ಠಾವಂತ ಕಾರ್ಯಕರ್ತರು) ಗಳಿಗೆ. ದೇಣಿಗೆ ತಂದ ಹಣದಲ್ಲಿ ೫೦% ಹಣವನ್ನು ತಕ್ಷಣದಲ್ಲಿ ಅವರಿಗೆ ಹಂಚಲಾಗುವುದು.
ಹಾಗೆಂದು ಯಾವುದೇ ಬೇರೆ ಪಕ್ಷದವರು/ ಪಕ್ಷದಿಂದ ಹೊರಹಾಕಲ್ಪಟ್ಟವರು ನನ್ನ ಕಡೆ ಆಸೆಯಿಂದ ನೋಡುವುದೇ ಬೇಡ. ‘ಹಿಂದೂ’ ವಿರೋಧಿ ಭಾಷಣ ಮಾಡುವವರು ಸಫಾರಿ ಹೊಲಿಸಿ ರೆಡಿಯಾಗುವುದೂ ಬೇಡ. ಯಾಕೆಂದರೆ ಗ್ರಾಮ ಪಂಚಾಯಿತಿಯಿಂದ ಹಿಡಿದು ಎಲ್ಲಾ ಎಮ್.ಎಲ್.ಎ., ಎಮ್.ಪಿ., ಸೀಟುಗಳಿಗೂ ನನ್ನ ರಿಲೇಟಿವ್ಗಳನ್ನೇ ನಿಲ್ಲಿಸುವುದು. ಗೊತ್ತಾಯಿತಾ? ಯಾರೂ ಸಂಪದದ ಗೆಳೆಯರ ಇನ್ಫ್ಲೂಯೆನ್ಸ್ ತೆಗೆದುಕೊಂಡು ಬರುವುದು ಬೇಡ. ನಾವು ಚುನಾವಣೆ ಸಮಯದಲ್ಲಿ ಹಣ, ಹೆಂಡ, ಸೀರೆ ಹಂಚುವ ಕೀಳು ರಾಜಕೀಯ ಮಾಡುವುದಿಲ್ಲ. ಹಳ್ಳಿಗಮಾರನಿಂದ ಹಿಡಿದು, ಐ.ಟಿಗಾರ್ರಿಗೂ ಪ್ರತೀ ವೀಕೆಂಡ್ನಲ್ಲಿ ಫ್ರೀ ಹೆಂಡ/ಮದ್ಯ!! ಎನ್ಜೋಯ್ ಮಾಡಲಿ. ಮನೆಗೆ ಹೋಗುವಾಗ ಹೆಂಡತಿಗೆ ಕೊಡಲು ಸೀರೆ, ಬಳೆ ಬಾರ್ನಲ್ಲೇ ಕೊಡಲಾಗುವುದು. ಎಲ್ಲಾ ವಿಷಯ ಈಗಲೇ ಹೇಳಿದರೆ ಹೇಗೆ? ಎಪ್ರಿಲ್ ಒಂದರವರೆಗೆ ಕಾದು ನೋಡಿ.
ಹೇಳಿ ಎಲ್ಲಾ ಹಿಂದೂ ಇಂಡಿಯಾ ವಿರೋಧಿ ಪಾರ್ಟಿಗೇ..ಜೈ (ಏ ಮಂಜಾ, ಆ ಅನಿಲ್,ಅಶೋಕ್ ಜೈ ಹೇಳಲಿಲ್ಲ. ಅವರ ಕಡೆ ಒಂದು ಕಣ್ಣಿಡು..)
-ಗಣೇಶ
Comments
ಉ: ಹಿಂದೂ (ಇಂಡಿಯಾ) ವಿರೋಧಿ ಪಕ್ಷ
In reply to ಉ: ಹಿಂದೂ (ಇಂಡಿಯಾ) ವಿರೋಧಿ ಪಕ್ಷ by hamsanandi
ಉ: ಹಿಂದೂ (ಇಂಡಿಯಾ) ವಿರೋಧಿ ಪಕ್ಷ
In reply to ಉ: ಹಿಂದೂ (ಇಂಡಿಯಾ) ವಿರೋಧಿ ಪಕ್ಷ by manjunath s reddy
ಉ: ಹಿಂದೂ (ಇಂಡಿಯಾ) ವಿರೋಧಿ ಪಕ್ಷ
In reply to ಉ: ಹಿಂದೂ (ಇಂಡಿಯಾ) ವಿರೋಧಿ ಪಕ್ಷ by Rakesh Shetty
ಉ: ಹಿಂದೂ (ಇಂಡಿಯಾ) ವಿರೋಧಿ ಪಕ್ಷ
In reply to ಉ: ಹಿಂದೂ (ಇಂಡಿಯಾ) ವಿರೋಧಿ ಪಕ್ಷ by hamsanandi
ಉ: ಹಿಂದೂ (ಇಂಡಿಯಾ) ವಿರೋಧಿ ಪಕ್ಷ
ಉ: ಹಿಂದೂ (ಇಂಡಿಯಾ) ವಿರೋಧಿ ಪಕ್ಷ
ಉ: ಹಿಂದೂ (ಇಂಡಿಯಾ) ವಿರೋಧಿ ಪಕ್ಷ
In reply to ಉ: ಹಿಂದೂ (ಇಂಡಿಯಾ) ವಿರೋಧಿ ಪಕ್ಷ by venkatb83
ಉ: ಹಿಂದೂ (ಇಂಡಿಯಾ) ವಿರೋಧಿ ಪಕ್ಷ