ಹಿಮ್ಮೇಳ - ಪಳಿಯುಳಿಕೆ ಒಂದರ ಉಳಿವಿಗೆ ಒಂದು ಪ್ರಯತ್ನ
http://shruti.hejje.com/pledge/
"ಹೋರಾಟ ಅಂದ್ರೆ ಹೊಡೆದಾಟ ಅಲ್ಲ ಕಾಣ್ರೋ" ಅಂತ ನಮ್ಮ ಮಾಸ್ತರು ಒಬ್ರು ಹೇಳ್ತಾ ಇದ್ರು. ನಮ್ಮ ಕನ್ನಡ ಸಂಸ್ಕೃತಿ ಉಳಿಬೇಕು ಅಂತ ನಾವು ಕಲ್ಲು ತೂರಾಡ್ಲೂ ಬಹುದು ಅಥವಾ ನಮ್ಮ ಸಂಸ್ಕೃತಿ ಯಾವುದು ನಾವು ದಿನನಿತ್ಯ ಅದನ್ನ ಪಾಲಿಸ್ತಾ ಇದೀವಾ ಅಂತ ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಲೂ ಬಹುದು. ಕನ್ನಡದಲ್ಲಿ ಬೋರ್ಡೇ ಹಾಕಲ್ಲ ಅನ್ನೋ ನಾವು ಹಾಕಿರೋ ಬೋರ್ಡಗಳಲ್ಲಿ ಎಷ್ಟು ಕೆಟ್ಟದಾಗಿ ಕನ್ನಡಬರಿತೀವಿ, ಎಷ್ಟು ತಪ್ಪು ತಪ್ಪಾಗಿ ಬರಿತೀವಿ ಅಂತ ನೋಡ್ತೀವಾ, ಪ್ರತಿಭಟಿಸ್ತೀವಾ? ಬೆಂಗಳೂರು ಬಸ್ ನಿಲ್ದಾಣಗಳಲ್ಲೇ ನೋಡಿ: ಅಲ್ಸಸೂರು, ಹೊಯ್ಸಸಳ, ವಟರ್ ಟ್ಯಾಂಕ್ ಇತ್ಯಾದಿ. ನಮ್ಮ ಕನ್ನಡದ ಕಲೆಗಳು ನಮ್ಮ ಸಂಸ್ಕೃತಿಯ ಮೂರ್ತರೂಪಗಳು. ಈ ಕಲೆ ರೂಪದಲ್ಲಾದ್ರು ನಮ್ಮ ಸಂಸ್ಕೃತಿ ಉಳಿಬಹುದು ಅಂದ್ಕೋಬಹುದು. ಆದ್ರೆ ನಮ್ಮದೇ ಆದ ಕಲೆಗಳು ನಾಶ ಆಗ್ತಾ ಇದ್ರೂ ನಾವು ಫಿಲ್ಮ್ ನೋಡ್ಕೊಂಡು ಅರಾಮಿದ್ರೆ ನಮ್ಮ ಸಂಸ್ಕೃತಿ ಉಳಿಯತ್ತಾ? ಉಳಿಯತ್ತೋ ಇಲ್ವೋ ಆದ್ರೆ ಎನ್ ಕಳ್ಕೊಳ್ತಾ ಇದೀವಿ ಎನಾದ್ರು ಮಾಡ್ಲಿಕ್ಕೆ ಸಾದ್ಯನಾ ಅಂತಾದ್ರೂ ನೋಡ್ಬೇಕಲ್ವಾ?
ಕಲೆಗಳು ಅಂದ ತಕ್ಷಣ ನಮ್ಮ ಕನ್ನಡದ ಕಲೆಗಳಲ್ಲಿ ಎದ್ದು ಕಾಣೋದು ಯಕ್ಷಗಾನ ಬಯಲಾಟ. ಯಕ್ಷಗಾನ ಬಯಲಾಟ ಕೇವಲ ಕಲೆಯಷ್ಟೇ ಅಲ್ಲ ಇದು ನಮ್ಮ ಸಂಸ್ಕೃತಿಯ ಪಳಿಯುಳಿಕೆನೂ ಹೌದು. ಯಕ್ಷಗಾನದಲ್ಲಿ ಮಾತಾಡೋ ತರಾನೇ ಬೇರೆ - ಒಂದು ರೀತಿ ಚಂದ, ಶೃತಿ ಬದ್ಧ. ಇವತ್ತಿಗೂ ಹಳ್ಳಿಕಡೆ ಹೋದ್ರೆ ನಮ್ಮ ಈಡಿಗ ಸಮುದಾಯದವರು, ಹವ್ಯಕರು ಎಲ್ಲರೂ ಒಂತರಾ ಹಾಡಿದಾಗೆ ಶೃತಿಗೆ ಸರಿಯಾಗಿ ಮಾತಾಡ್ತಾರೆ. ಅದು ನಮ್ಮ ಮೂಲ ಕನ್ನಡ ಮಾತಾಡೊ ರೀತಿ ಇದ್ದಿರಬಹುದು. ಅದು ಯಕ್ಷಗಾನದಲ್ಲಿ ಉಳ್ಕೊಂಡಿದೆ ಅಂತ ಅನ್ನಿಸುತ್ತೆ. ಈಗ ತಮಿಳುನಾಡಿನಲ್ಲೇ ಹೆಚ್ಚು ಪ್ರಸಿದ್ಧವಾಗಿ ಇರೋ ನಮ್ಮ ಕರ್ನಾಟಕ ಸಂಗೀತದಲ್ಲಿನ ತಾಳಗಳ ಮೂಲರೂಪ ನಮ್ಮ ಯಕ್ಷಗಾನದಲ್ಲಿ ಇದೆ ಅಂತ ಡಾ.ರಾಘವ ನಂಬಿಯಾರ್ ಅಂತ ಒಬ್ಬ ಯಕ್ಷಗಾನ ಸಂಶೋಧಕರು ಪ್ರತಿಪಾದಿಸಿದಾರೆ. ಎಷ್ಟೋ ತಾಳಗಳು, ಕುಣಿತದ ಶೈಲಿ, ಹಾಡಿನ ಧಾಟಿ ಎಲ್ಲಾ ಕಳದು ಹೋಗಿದೆ ಅಂತೆ. ನಮ್ಮ ಬಾಡಿ ಲಾಂಗ್ವೇಜೇ ಬದಲಾಗಿಲ್ವಾ? ಇವನ್ನೇಲ್ಲಾ ನಂಬಿಯಾರರು ತಮ್ಮ ಪುಸ್ತಕ "ಹಿಮ್ಮೇಳ" ಅನ್ನೋದ್ರಲ್ಲಿ ಬರೆದಿಟ್ಟು ನಮ್ಮ ಯಕ್ಷಾಗನ ಮೂಲರೂಪ ಹಾಳಾಗದಹಾಗೆ ಉಳಿಬೇಕು ಅಂತ ಪ್ರಯತ್ನ ಮಾಡ್ತಾ ಇದಾರೆ.
ದೀವಟಿಗೆ ಬೆಳಕಲ್ಲಿ ಯಾವ್ದಾದ್ರೂ ಕಾರ್ಯಕ್ರಮ ನೋಡಿದೀರಾ? ನಮ್ಮ ಯಕ್ಷಗಾನ ಹಿಂದೆ ದೀವಟಿಗೆ ಬೆಳಕಲ್ಲಿ ನೆಡೀತಾ ಇತ್ತಂತೆ ಅದರ ಚಂದಾನೇ ಬೇರೆ ಅಂತ ನೋಡಿದವ್ರು ಹೇಳ್ತಾರೆ. ಆದ್ರೆ ಅವೆಲ್ಲಾ ಈಗ ಇಲ್ಲ. ಹೀಗೆ ಎಷ್ಟೋ ನಮ್ಮ ಸಂಸ್ಕೃತಿಯ ವಿಶೇಷಗಳು ವಿನಾಶವಾಗ್ತಾ ಇದ್ರೆ ನಾವು ನೋಡ್ತಾ ಇರೋದಾ? ಉಳಿಸಲ್ಲಿಕ್ಕೆ ಪ್ರಯತ್ನ ಮಾಡ್ಲೇ ಬೇಕಲ್ವಾ? ನಮಗೆ ಎಲ್ಲಾ ಮಾಡ್ಲಿಕ್ಕೆ ಆಗಲ್ಲ, ಆದರೆ ಹನಿಗೂಡಿ ಹಳ್ಳ ಅಂತಾರೆ. ಹಾಗಾಗಿ ಒಂದೊಂದಾಗಿ ನಮ್ಮ ಕೈಲಾದಲ್ಲಿ ನಮ್ಮತನ ಉಳ್ಸಿಕೊಳ್ಬೇಕು. ನಾವು ಯಕ್ಷಮಿತ್ರ ಅಂತ ಒಂದು ಗುಂಪು ಮಾಡಿಕೊಂಡು ನಮ್ಮ ಯಕ್ಷಗಾನವನ್ನ ಅದರ ಮೂಲ ರೂಪದಲ್ಲಿ ನಮ್ಮ ಮುಂದಿನ ಪೀಳಿಗೆಗೆ ಉಳಿಸಬೇಕು ಅಂತ ಬರೆದಿರೋ "ಹಿಮ್ಮೇಳ" ಪುಸ್ತಕವನ್ನ ಮುದ್ರಿಸಿ ಎಲ್ಲಾರಿಗೂ ಸುಲಭವಾಗಿ ಸಿಗೋಹಾಗೇ ಮಾಡ್ಬೇಕು ಅಂತ ಪ್ರಯತ್ನ ಮಾಡ್ತಾ ಇದೀವಿ. ಸುಮಾರು ೨ ಲಕ್ಷ ಖರ್ಚು ಆಗುತ್ತೆ. ನಾವೇಲ್ಲ ಕೈಗೂಡಿಸ್ತಾ ಇದಿವಿ ನೀವೂ ಬನ್ನಿ. ನಿಮ್ಮ ಕೈಲಿ ಆದಷ್ಟು ವಾಗ್ದಾನ ಮಾಡಿ. ಈ ವೆಬ್ ಸೈಟ್ ಗೆ ಹೋಗಿ ನಿಮಗೆ ಎಷ್ಟು ಕೋಡ್ಲಿಕ್ಕೆ ಆಗುತ್ತೆ ಅಂತ ತಿಳಿಸಿ: http://shruti.hejje.com/pledge/ ಇದು ಹೊಡೆದಾಟ ಅಲ್ಲ;ನಮ್ಮ ನಿಮ್ಮ ಸಾತ್ವಿಕವಾದ ಹೋರಾಟ! ಎಲ್ಲರೂ ಒಗ್ಗಟ್ಟಾಗಿ ಒಳ್ಳೇ ಕೆಲಸ ಮಾಡೋಣ - ನಮ್ಮ ಸಂಸ್ಕೃತಿಗಾಗಿ. ನೀವೂ ಕೈಜೋಡಿಸಿ, ಕೈ ಕಲ್ಪವೃಕ್ಷವಾಗುತ್ತೆ!
ರಾಗು ಕಟ್ಟಿನಕೆರೆ
ಯಕ್ಷಮಿತ್ರ
http://shruti.hejje.com/pledge/
ವಿ ಸೂ: ಎಲ್ಲಾ ದಾನಿಗಳ ಹೆಸರನ್ನು ಪ್ರಕಾಶನದಲ್ಲಿ ನಮೂದಿಸಲಾಗುವುದು. ಒಟ್ಟು ಮುದ್ರಣದ ಖರ್ಚು ಲೆಕ್ಕ ಎಲ್ಲವನ್ನೂ ಪ್ರತಿಯೊಬ್ಬ ದಾನಿಗೂ ಇ-ಮೇಲ್ ನೀಡಿದರೆ ತಿಳಿಸಿಸಲಾಗುವುದು. ಹೆಚ್ಚಿನ ಪ್ರಶ್ನೆಗಳಿದ್ದರೆ ರಾಗು ಕಟ್ಟಿನಕೆರೆ ಅವರನ್ನು ಸಂಪರ್ಕಿಸಬಹುದು.
ಭಾರತದಲ್ಲಿ ಬ್ಯಾಂಕ್ ವಿವರ
Patel Mahabalaiah Meenakshamma Trust (R)
Account: 121401010007130
Vijaya Bank,
Ulavi, Soraba Tq, Shimoga Dt