ಹೀಗೊಂದು ಹಾಸ್ಯ ಪ್ರಸಂಗ

ಹೀಗೊಂದು ಹಾಸ್ಯ ಪ್ರಸಂಗ

ನಮ್ಮ ಅಕ್ಕನ ಮಗಳು ಎರಡು ವರೆ ವರ್ಷದ ಅವನಿ ಬಹಳ ಚುರುಕು, ಮಾತಿನಲ್ಲಿ ಎಲ್ಲರನ್ನೂ ಸಿಕ್ಕಿಸುವಂತಹವಳು. ನಾನು ಹೋದ ವರ್ಷ ಬಾಣಂತನಕ್ಕೆ ಹೋದ ಸಮಯದಲ್ಲಿ ನಮ್ಮ ಊರು ಶಿವಮೊಗ್ಗದಲ್ಲಿ ಮಾರಿ ಜಾತ್ರೆ ನಡೆಯುತ್ತಿತ್ತು. ನಮ್ಮ ಅತ್ತೆ ಮಾವ ಜಾತ್ರೆಗೆ ಹೋಗಿ, ಹಾಗೇ ನನ್ನನ್ನೂ ಮಗುವನ್ನು ನೋಡಲು ನಮ್ಮ ಅಮ್ಮನ ಮನೆಗೆ ಬಂದರು. ಒಂದು ಘಂಟೆಗೂ ಹೆಚ್ಚು ಕಾಲ ಮಾತನಾಡುತ್ತಾ ಕುಳಿತಾಗ ನಮ್ಮ ಅಕ್ಕನ ಮಗಳಿಗೆ ಬೇಜಾರಾಗಲು ಶುರುವಾಯಿತು, ಅವಳು ನನ್ನ ತಂಗಿಗೆ "ನನಗೆ ನಿದ್ದೆ ಬರ್ತಿದೆ " ಎಂದಳು, ಅದಕ್ಕೆ ನನ್ನ ತಂಗಿ, "ಜಾತ್ರೆಗೆ ಹೋಗೋಣ ಸುಮ್ಮನಿರು" ಎಂದಳು, ಅದಕ್ಕೆ ಅವಳೇನೆನ್ನಬೇಕು,
"ಜಾತ್ರೆಯಲ್ಲಿ ಹಾಸಿಗೆ ಹಾಸಿರ್ತಾರಾ ? " ನಾವೆಲ್ಲ ನಕ್ಕೂ ನಕ್ಕೂ ಸುಸ್ತು.

Rating
No votes yet

Comments