ಹುಗ್ಗಿ ತಿಂದು ಹಿಗ್ಗಿರಿ!

ಹುಗ್ಗಿ ತಿಂದು ಹಿಗ್ಗಿರಿ!

ಹೌದು, ಹುಗ್ಗಿ ತಿಂದು ಹಿಗ್ಗಿರಿ (ಸೈಜ್ನಲ್ಲಿ ಅಲ್ಲ...) ಖುಷಿಯಾಗಿರಿ ಅಂತ ಅಷ್ಟೆ....ಇತ್ತೀಚೆಗೆ ಈ ನಮ್ಮ ಹುಗ್ಗಿ ಅನ್ನೋ ಪದವನ್ನೇ ಸಾಕಷ್ಟು ಜನ ಮರೆತ ಹಾಗಿದೆ...ಬೆಂಗಳೂರಿನಲ್ಲಂತೂ ಈ ಕಡೆ ’ಎನ್ನಡ’ ಆ ಕಡೆ ’ಎಕ್ಕಡ’ ಆಗಿಬಿಟ್ಟು ನಮ್ಮ ಈ ’ಹುಗ್ಗಿ’ಯ ಹಿಗ್ಗು ಮರೆತು ಎಲ್ಲೆಲ್ಲೂ ’ಪೊಂಗಲ್, ಪೊಂಗಲ್,ಪೊಂಗಲ್’....

ನಾವೆಲ್ಲಾ ಚಿಕ್ಕವರಿರುವಾಗ ಅಮ್ಮ ಮಾಡ್ತಾ ಇದ್ದ ಆ ’ಹುಗ್ಗಿ’ನ ಜ್ನಾಪಿಸಿಕೊಂಡ್ರೆ ಈಗ್ಲೂ ಬಾಯ್ನೀರ್ ಬರುತ್ತೆ....ಆಹಾ...ಅದೇನು ರುಚಿ...ತುಪ್ಪದ ಆ ಸುವಾಸನೆ ಮನೆಯಲ್ಲೆಲ್ಲಾ....ಸಂಕ್ರಾಂತಿಯ ಎಳ್ಳು ಬೆಲ್ಲದ ಸಡಗರ ಒಂದು ಕಡೆಯಾದರೆ ಸಿಹಿ ಮತ್ತು ಖಾರದ ಹುಗ್ಗಿಯ ಸಂಭ್ರಮ ಮತ್ತೊಂದೆಡೆ....ಸಂಜೆ ಆಗ್ತಾಇದ್ದ ಹಾಗೇ ಹೆಣ್ಣು ಮಕ್ಕಳ ಸಡಗರ,ಸಂಭ್ರಮ ಹೇಳತೀರದು....ಎಷ್ಟು ಅಲಂಕಾರ ಮಾಡಿಕೊಂಡ್ರೂ ಸಾಲ್ದು....ಪುಟ್ಟ ಪುಟ್ಟ ಹುಡುಗಿರಿಗೇ ಸೀರೆ ಉಡ್ಸಿ ಅಲಂಕಾರ ಮಾಡಿ ಎಳ್ ಬೀರಕ್ಕೆ ಕಳಿಸ್ತಾ ಇದ್ರು....ಎಳ್ ಬೀರಿ ಹಲ್ ಬೀರಿ ಬರ್ತಾ ಹಾಗೇ ಒಂದಿಷ್ಟು ಬಾಯಿಗಿಳಿಸಿ, ಬೈಸ್ಕೊಂಡ್ರೇ ಏನೋ ಒಂಥರಾ ಖುಷಿ!!! ಆಹಾ ಮನೇಲಿ ಮಾಡಿದ ಆ ಸಕ್ರೆ ಅಚ್ಚು ಬಾಯ್ಗಿಟ್ರೆ ಕರ್ಗೇ ಹೋಗ್ತಾ ಇದ್ದಾಗ ಕೆಮ್ಮು,ದಮ್ಮುಗಳ ಯೋಚ್ನೆ ಸಹ ಹತ್ರಕ್ ಬರ್ತಾ ಇರ್ಲಿಲ್ಲ...(ಆದೀಗ ಮಕ್ಕಳು ಸ್ವಲ್ಪ ಸ್ವೀಟ್ ತಿಂದ್ರೇ ಎಲ್ ಕೆಮ್ಮು ಬರುತ್ತೋ ಅಂತ ಅದ್ ತಿನ್ಬೇಡ ಇದ್ ತಿನ್ಬೇಡ ಅಂತ ಹೇಳೋ ಹಾಗಾಗಿದೆ). ಎಷ್ಟೊಂದು ಮನೆಗಳಿಗೆ ಹೋಗಿ ಎಳ್ಳಿನ ವಿನಿಮಯ ಮಾಡಿಕೊಂಡು ಬಂದ್ರೂ ಇನ್ನೂ ಒಂದಷ್ಟು ಮನೆಗಳು ಬಾಕಿ ಉಳಿದು ಮಾರ್ನೆದಿನಾನೋ ಇಲ್ಲಾ ಅದರ ಮಾರನೆ ದಿನಾನೋ ಹೀಗೇ ವಾರದವರೆಗೂ ಎಳ್ಳಿನ ಸಡಗರ ಮುಗಿತಾ ಇರ್ಲಿಲ್ಲ!!!

ಸವಿ ನೆನೆಪುಗಳನ್ನ ನೆನಪಿಸಿಕೊಳ್ತಾ....

ಎಲ್ಲರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

Rating
No votes yet

Comments