ಹುಚ್ಚು ಮನಸಿನ ಕಲ್ಪನೆಗಳು

ಹುಚ್ಚು ಮನಸಿನ ಕಲ್ಪನೆಗಳು

ಹುಚ್ಚು ಮನಸಿನ ಕಲ್ಪನೆಗಳು

ನೂರು ದಿಕ್ಕುಗಳಲ್ಲಿ ಓಡಿದವು

ಸಾವಿರ ಕವಲುಗಳಾಗಿ ಹರಿದವು

ಆದಿಯೇ ಇಲ್ಲದೆ ಮೂಡಿದವು 

ದಿಗಂತವಿಲ್ಲದೆ ಮುಳುಗಿದವು  


ಹುಚ್ಚು ಮನಸಿನ ಕಲ್ಪನೆಗಳು

 

ಗಾಳಿ ಗೋಪುರವ ಕಟ್ಟಿ

ಕಣ್ಣುಗಳಲ್ಲಿ ನೂರಾರು ಕನಸುಗಳು ಮೂಡಿ

ಗಗನಕೇರುವ ಆಸೆಯು ಚಿಗುರಿ 

ಕಾಮನಬಿಲ್ಲಿನಿಂದ ಭುವಿಗೆ ಜಾರಿ

ಹಕ್ಕಿಯಂತೆ ಹಾರಲು ಬಯಸುವುದು

ಹುಚ್ಚು ಮನಸಿನ ಕಲ್ಪನೆಗಳು

 

ಹೃದಯದಲಿ ಪ್ರೀತಿಯು ಮೂಡಿ

ಸಂತಸದ ಮೋಡದ ಮೇಲೆ ತೇಲಾಡಿ

ಭಾವನೆಗಳ ಅಲೆಗಳಲಿ ಈಜಾಡಿ

ಕ್ಷಿತಿಜದಲಿ ಸೂರ್ಯಾಸ್ತವ ನೋಡುತಲಿ

ತುಂಬು ಚಂದಿರನ ಬೆಳದಿಂಗಳಿಗೆ ಹಾತೊರೆಯುವುದು


ಹುಚ್ಚು ಮನಸಿನ ಕಲ್ಪನೆಗಳು

 

- ಪ್ರಮಿತ

೦೪/೦೯/೨೦೦೫
Rating
No votes yet

Comments