ಹುಸಿ ಮುನಿಸು
ಹುಸಿ ಮುನಿಸು
ಮನೆಯಲಿ ಜನರಿದ್ದೂ ಮನೆಯು ಬರಿದಾಗಿದೆ
ವಿನೋದಕೆ ಪರಿಕರವಿದ್ದೂ ಮನ ಶೂನ್ಯವಾಗಿದೆ
ನಿನ್ನ ನೆನಪು ಮನದಂಗಳಕೆ ಓಮ್ಮೆ ಇಣುಕಿದರು
ತುಟಿಯರಳಿ ಸುಂದರ ಕಾಮನ ಬಿಲ್ಲಾಗುವುದು
ನಿನ್ನ ನಗುವಿನ ನೆನಪು ನನಗೆಂದೂ ನವೋಲ್ಲಾಸ
ನಿನ್ನ ಮಾತುಗಳೆಂದೂ ಹೃದಯದಿ ನರ್ತನದ ಭಾಸ
ನಿನ್ನ ಮಾತುಗಳಲ್ಲಿನ ಹುಸಿ ಮುನಿಸು ತಿಳಿಯದೇ
ನನಗೆ, ಅದರ ಹಿಂದಿನ ನಗೆಯು ಕಾಣದೇ ಎನಗೆ
ನನ್ನೊಳು ಕೋಪದಿ ಕಾಣುವ ನಿನ್ನ ಕೆಂಪಾದ ಕಣ್ಣು
ನಂತರದ ವಿರಹದಿ ಆಗುವವು ಬಾಡಿ ಬತ್ತಿದ ಹಣ್ಣು
ನಿನಗೂ ಗೊತ್ತು ನಿನ್ನ ವಿರಹ ವೇದನೆಯ ನನ್ನ
ತಿಳುವಳಿಕೆ, ಅದರೂ ನಿನಗೆ ಹುಸಿಮುನಿಸು ಬೇಕೇ
ಇಬ್ಬರೂ ಇರುವೆವು ಭಾರವಾದ ಮನದ ವಿರಹದಿ
ಬಾ ಪ್ರಿಯೆ ಅರಸಿ ನೆಲೆಸೋಣ ಪ್ರೀತಿಯ ವಾಸ್ತವದಿ
- ತೇಜಸ್ವಿ.ಎ.ಸಿ
Rating
Comments
ಉ: ಹುಸಿ ಮುನಿಸು
In reply to ಉ: ಹುಸಿ ಮುನಿಸು by venkatb83
ಉ: ಹುಸಿ ಮುನಿಸು