ಹೃತಿಕ್ ನನ್ನ ಮಗನ ಫ್ಯಾನ್..

ಹೃತಿಕ್ ನನ್ನ ಮಗನ ಫ್ಯಾನ್..

‘ಹೃತಿಕ್ !! ಅಲ್ರೀ..ನಿಮ್ಮ ಮಗ..’ನನ್ನ ಮಾತನ್ನು ಅರ್ಧಕ್ಕೆ ಕತ್ತರಿಸಿ (ಈ ಹೆಂಗಸರು ನಮಗೆ ಪೂರ್ತಿ ಮಾತನಾಡಲು ಅವಕಾಶ ಎಲ್ಲಿ ಕೊಡುತ್ತಾರೆ) “ ಹೃತಿಕ್ ಅಂಕ್‌ಲ್, ಕೃಶ್
ಫಿಲ್ಮ್ ನೋಡಿಲ್ವಾ ಅಂಕ್‌ಲ್, ಡಿಟೋ ಚಿಂಟೂ ತರಾನೆ ಡ್ಯಾನ್ಸ್ ಮಾಡ್ತಾನೆ... ಅಂಕ್‌ಲ್..... :).. ..ಅಂಕ್‌ಲ್ :( .. ;) ..ಅಂಕ್‌ಲ್.. }:) .. :D ... ”

ಸಿಂಪ್‌ಲ್ ಆಗಿ ಹೇಳುತ್ತೇನೆ: ಅವರ ಮಗನ ಸ್ಕೂಲ್‌ಡೇ ಈದಿನ ಸಂಜೆ. ಅವರ ಯಜಮಾನರು ಕೆಲಸದಿಂದ ಬರುವುದು ಲೇಟ್ ಆಗುತ್ತದೆ. ನಾನು ಸ್ವಲ್ಪ ಮೊದಲೇ ಹೋಗಿ ಅವರಿಗೆ ಸೀಟು ಹಿಡಿದು ಕುಳಿತುಕೊಳ್ಳಬೇಕು.. ಅಷ್ಟೆ.

ನನ್ನ ಕರ್ಮ. ಡಿಸೆಂಬರ್-ಜನವರಿ ತಿಂಗಳು ಬಂತು ಎಂದರೆ ನನಗೆ ನಡುಕ ಸುರುವಾಗುತ್ತದೆ. ಚಳಿಗಲ್ಲ. ‘ಸ್‌ಕೂಲ್ ಡೇ’ಯಿಂದ- ಡೇ ಅನ್ನುತ್ತಾರೆ, ರಾತ್ರಿ ಪ್ರೋಗ್ರಾಂ ಇಟ್ಟುಕೊಳ್ಳುತ್ತಾರೆ. ಸ್ಕೂಲ್‌ನಲ್ಲಿ ೮೦೦ ಮಕ್ಕಳಿದ್ದರೆ ೫೦೦ ಜನ ತುಂಬುವ ಹಾಲ್‌ನಲ್ಲಿ
ಕಾರ್ಯಕ್ರಮ ಇಡುವರು! ನನ್ನಂತಹ ಬಿಟ್ಟಿ ಅಂಕ್‌ಲ್‌ಗಳು ಮೊದಲು ಹೋಗಿ ಸೀಟು ರಿಸರ್ವ್ ಮಾಡಬೇಕು. :(
ಮರಣದಂಡನೆಗಿಂತ ದೊಡ್ಡ ಶಿಕ್ಷೆ ಅಂದರೆ ‘ಸ್ಕೂಲ್‌ಡೇ ಪ್ರೋಗ್ರಾಂ ಸುರುವಿನಿಂದ ಕೊನೆವರೆಗೆ ನೋಡುವುದು’.

‘ಮೈಕಾಸುರ’ ಎಂದು ಯಾರು ಹೆಸರಿಟ್ಟರೋ!?
ನಾನೂ ಯಕ್ಷಗಾನದಲ್ಲಿ ನೋಡಿದ್ದೇನೆ- ರಕ್ಕಸರು ಸ್ಟೇಜ್‌ಗೆ ಎಂಟ್ರಿ ಕೊಡುವಾಗ, ತೂಕಡಿಸುತ್ತಾ ಮಲಗಿದ್ದವರು, ಎದ್ದು ಬಿದ್ದು ಓಡಬೇಕು-ಹಾಗೆ ೩ ಸಲ ಆರ್ಭಟಿಸಿ ಬರುವರು. ನಂತ್ರ ಮಾಮೂಲಿಗಿಂತ ಸ್ವಲ್ಪ ಎತ್ತರದ ಸ್ವರದಲ್ಲಿ ಮಾತನಾಡುವರು.

ಆದರೆ..ಆದರೆ ಈ ಮೈಕಾ ಹಾಗಿಲ್ಲ-ಸೈಲೆಂಸರ್ ತೆಗೆದ ಬೈಕ್‌ನಂತೆ-ಸುರುವಿನಿಂದ ಕೊನೆವರೆಗೂ ಒಂದೇ ಸೌಂಡ್. ಎಡಕಿವಿಯಿಂದ ಬಲಕಿವಿವರೆಗೆ ತೂತು ಬಿದ್ದು-ನೀವು ಕಿವಿ ಮುಚ್ಚಿಕೊಳ್ಳದಿದ್ದರೆ ಮೆದುಳು ಅದರಿಂದ ಹೊರಹೋಗಿ ಬಿಡುವುದು. (ಆ ಗದ್ದಲದಲ್ಲೂ ಹೆಂಗಸರು ಅದು ಹೇಗೆ ಒಬ್ಬರಿಗೊಬ್ಬರು ಮಾತನಾಡಿಕೊಂಡಿರುತ್ತಾರೆ ಎಂಬುದೇ ಆಶ್ಚರ್ಯ!!)

ಸ್ಟೇಜ್‌ಗೆ ಹಾಕಿದ ಬಣ್ಣಬಣ್ಣದ ಲೈಟನ್ನು ಒಳ್ಳೆ ಗಿರಗಿಟ್ಲೆ ತಿರುಗಿಸಿದ ಹಾಗೆ ತಿರುಗಿಸುತ್ತಿರುತ್ತಾರೆ- ಯಾರು ಏನು ಗುರುತೇ ಸಿಗುವುದಿಲ್ಲ. ಅದರಲ್ಲಿ ‘ ನೋಡಿ,
ನೋಡಿ ಅಲ್ಲಿ ಬಲದಿಂದ ಎಂಟನೆಯವನೇ ನಮ್ಮ ಚಿಂಟು’ ಅಂದ್ರು.೧-೨-೩-
ಗೊತ್ತಾಗಲಿಲ್ಲ-ಹೇಳಲಾಗುತ್ತದಾ? ‘ವ್ಹಾವ್, ಚಂದ ಡ್ಯಾನ್ಸ್ ಮಾಡುತ್ತಾನೆ’.
‘ಚಲ್ ಚಂಯ ಚೈಂಯಾ ಚೈಂಯಾ..’ಎಂದಾಗ ಮಧ್ಯಾಹ್ನದಿಂದ ಏನೂ ತಿಂದಿಲ್ಲ,
ಒಂದು ಸೆಟ್ ದೋಸೆನಾದರೂ ತಿಂದು ಬರೋಣ ಅನಿಸಿತು. ಚಪ್ಪಾಳೆ ತಟ್ಟುತ್ತಾ ಡ್ಯಾನ್ಸ್ ಮುಗಿಯುವುದನ್ನು ಕಾಯುತ್ತಿದ್ದೆ.
‘ಸ್ವಲ್ಪ ಸೀಟು ನೋಡಿಕೊಳ್ಳಿ, ನಾನು ಮಗನನ್ನು ಕರಕೊಂಡು ಬರುತ್ತೇನೆ’ ಎಂದು ನಾಪತ್ತೆಯಾದ ಈ ಫ್ಯಾಮಿಲಿ ಕಾರ್ಯಕ್ರಮ ಮುಗೀಲಿಕ್ಕಾಗುವಾಗ,ಹೊಟ್ಟೆ ತುಂಬಾ ತಿಂದು, ಕೈಬಾಯಲ್ಲಿ ಲೇಸ್-ಮಣ್ಣು ಮಸಣ ಮುಕ್ಕಿಕೊಂಡು ಬಂದರು.

‘ಇನ್ನು ಹೋಗೋಣ್ವ ಅಂಕ್‌ಲ್, ನಿಮ್ಮ ಕಾರು ಎಲ್ಲಿ ಪಾರ್ಕ್ ಮಾಡಿದ್ದೀರಿ? ಗೇಟಿನ ಹತ್ತಿರ ತನ್ನಿ ಅಂಕಲ್, ನಾವಲ್ಲಿ ವೈಟ್ ಮಾಡುತ್ತೇವೆ ಅಂಕ್‌ಲ್.’ ಎಂದು ಖಾಲಿ ಲೇಸ್ ಪ್ಯಾಕೆಟ್ ನನ್ನೆದುರು ಬಿಸಾಕಿ ಹೋದರು.

Rating
No votes yet

Comments