ಹೃದಯ ಪ್ರಭು ಗೀತೆ...

ಹೃದಯ ಪ್ರಭು ಗೀತೆ...

ನಮ್ಮ ಕಂಪೆನಿಯಲ್ಲಿ ನಿಶ್ಚಿತಾರ್ಥವಾದ ಸಹೋದ್ಯೋಗಿ ಸ್ನೇಹಿತೆಯ ಕಂಡು... ನಾನು ಅವಳಾಗಿ ಕಲ್ಪಿಸಿ

ಬರೆದದ್ದು....

-: ಹೃದಯ ಪ್ರಭು ಗೀತೆ:-

ನಿಮ್ಮ ನೋಡಿದಂದಿನಿಂದ

ಹೃದಯಗೀತೆ ಹಾಡುತಿದೆ;

ನಿಮ್ಮ ನೆನೆದರೆ ಸಾಕು

ರೋಮಾಂಚನ ಮೈಗೂಡುತಿದೆ;

ನಿಮ್ಮ ಕಾಣದೆ ಅರೆಘಳಿಗೆ

ರೆಪ್ಪೆ ಮುಚ್ಚದೆ ನಿದ್ದೆಗೆ;

ನಿಮ್ಮ ಕನಸ ಕಾಣದೆ

ಕಂಗಳು ಬೆಳಕ ನೋಡದೆ;

ನಿಮ್ಮ ಒಲವು ದೊರೆಯದೆ

ನನ್ನ ಬಾಳಿಗರ್ಥವೆಲ್ಲಿದೆ?

ನಿಮ್ಮ ನೆರಳು ಸೋಕದೆ

ಮೊಗವು ಹಾಗೆ ಬಾಡಿದೆ;

ಹೊಸಬಾಳಿಗೆ ಮುನ್ನುಡಿ ಬರೆದವರೆ

ತಾಳಿಯ ಕಟ್ಟಲು ಎಂದು ಬರುವಿರೆ?

ಬಿಸಿಲಧಗೆಗೆ ಬೇಸತ್ತು ಹೂತಿರಲು

ತಂಗಾಳಿ ಬಂದು ತೀಡಲು,

ನೀವೇ ಬಂದಿರೆಂದು ಹುಡುಕುವೆ;

ಕಛೇರಿಗೆ ಹೊರಡಲು ಅಣಿಯಾಗಲು

ಕನ್ನಡಿ ಮುಂದೆ ನಾ ನಿಲ್ಲ-

ಲು,

ನಿಮ್ಮನ್ನೆ ಕಾಣುವೆ;

ಬಸ್ ಸ್ಟಾಪಿನಲಿ ಬಾರದ ಬಸ್ಸಿಗೆ ಕಾಯುತಿರಲು

ಯಾವುದೋ ಗಾಡಿಯಲಿ ನೀವೇ ಬಂದಂತೆ ಅನ್ನಿಸುತಿರಲು

ಎದುರು ಬಂದು ಹೊಗೆಯುಗುಳಿ ನಿಂತ ಬಸ್ಸನ್ನೇ ಅರಿಯದಾದೆ!

ನಿಮ್ಮ ನೆನಪ ಸಾಗರದಲಿ ಈಜುತಾ...

ಕಛೇರಿ ಎದುರ ದಿಬ್ಬ ಹತ್ತಿದೆ

ಆಯಾಸದ ಪರಿವಿಲ್ಲದೆ, ಒಂದ್ಚೂರು ಜಾರದೆ!

ಕೆಲಸ ಮಾದಲೆಂದು

ಕಂಫ್ಯೂಟರ್ ಮುಂದೆ ಕೂತರೂ

ಮಾನಿಟರ್ ಉದ್ದಗಲಕ್ಕೂ ನೀವೆ;

mouse move ಮಾಡಿದಾಗ

ನಿಮ್ಮ ಕೆನ್ನೆ ನೇವರಿಸಿದ ನೆನಪು;

Left-right click ಮಾಡಲು

ನಿಮಗೆ ಕಚಗುಳಿ ಇಟ್ಟ ಸಲಿಗೆಯ ಕನಸು;

ಬಾಳಲಿ ನೀವು ಬಂದಾಗಿನಿಂದ,

ಹೊಟ್ಟೆಗೆ ಹಸಿವಿಲ್ಲ,

ಪ್ರೋಜೆಕ್ಟ್ ಕೆಲಸ ಅಂತ ಒತ್ತಡವಿಲ್ಲ,

ಮೋಬೈಲ್ ಬ್ಯಾಟರಿ ಚಾರ್ಜ್ ಮಾತ್ರ ಸಾಕಾಗಲ್ಲ,

ಧಮನಿಗಳಲಿ ಪ್ರೇಮ ಸಂಚಾರ ನಿಲ್ತಾ ಇಲ್ಲ;

ವಾಸ್ತವದ ಅರಿವು ಮರೆತಿರುವೆ

ನನ್ನೇ ನಾ ಕಳೆದುಕೊಂಡಿರುವೆ

ಹೇ ಪ್ರಭು...

ವಾಸ್ತವಕೆ ಕರೆದು ತಾ ಬೇಗ

ಮದುವೆ ದಿಬ್ಬಣದಲಿ ಹೂಡಿಸುತಾ...

ಇದರ ಒಂದು ವಿಶೇಷತೆಯಂದ್ರೆ ಹುಡುಗ-ಹುಡುಗಿ ಇಬ್ಬರ ಹೆಸರುಗಳು ಈ ಕವನದಲ್ಲಿ ಅಡಕವಾಗಿವೆ,

ಹುಡುಕಬಲ್ಲಿರಾ?

Rating
No votes yet