ಹೃದಯ ಸಮುದ್ರ

ಹೃದಯ ಸಮುದ್ರ

ಯುವತಿಯೊಬ್ಬಳು ತನ್ನ ಪ್ರೀತಿ,ಪ್ರೇಮ ಭಾವನೆಗಳು ಸುಳ್ಳೆಂದು ತಿಳಿದಾಗ ಅವಳ ಮನದಲ್ಲಿ ಮುಡೂವ ಮೌನರಾಗ,ನಾನು ಚಿಕ್ಕಂದಿನಲ್ಲಿ ಕೇಳಿದ,ನಮ್ಮ ನಿಮ್ಮ್ಮ ನೆಚ್ಚಿನ ಅಂದಿನ ಮಾತನಾಡುವ ಗೆಳೆಯ/ಗೆಳತಿಯಾಗಿದ್ದ ಬಾನುಲಿಯಲ್ಲಿ ನುಲಿದಾಗ,ಹಾಗೆ ಒಂದು ಪುಸ್ತಕದಲ್ಲಿ ಬರೆದಿದ್ದೆ,ಅದನ್ನು ನಿಮಗೂ ಪರಿಚಯಿಸುವ ಇರಾದೆ ನನ್ನದು..ಹಾಗೂ ಈ ಕವನ ರಚಿಸಿದ ವ್ಯಕ್ತಿಗೂ ನನ್ನ ನಮನಗಳು................

ಮನದ ಹಂಬಲದ ಕನಸೆಲ್ಲವೂ
ಮಂಜಂತೆ ಕರಗಿ ಮರೆಯಾಯಿತೇ......

ಸೆಲೆ ಬತ್ತಿತೆ,ಆ ಪ್ರೀತಿಯ ಹೊಳೆ
ಜೋಳ್ಲಾಯಿತೆ,ಸ್ನೇಹದ ಸೆಲೆ
ಏಕಾಂತವೇ ಈ ಬಾಳಿನಲ್ಲಿ
ಮನಸ್ಸು ವಿಷಾದಕ್ಕೆ ಸೆರೆಯಾಯಿತು

ಮನದ ಹಂಬಲದ ಕನಸೆಲ್ಲವೂ
ಮಂಜಂತೆ ಕರಗಿ ಮರೆಯಾಯಿತೇ......

ಎರಗಿ ಬಿರುಗಾಳಿ,ಬಡಿದು ಸಿಡಿಲು
ನಡುಗಡಲಿನಲ್ಲಿ ಒಡೆದ ಹಡಗು
ನೆರವಿರದೆ ಸೋತು ತೇಲುಮುಳುಗು
ಬದುಕು ಹತಾಶೆಗೆ ವಶವಾಯಿತೇ........

ಮನದ ಹಂಬಲದ ಕನಸೆಲ್ಲವೂ
ಮಂಜಂತೆ ಕರಗಿ ಮರೆಯಾಯಿತೇ......

ಈ ಬಾಳಿಗುಂಟೆ ಮರುವಸಂತ
ಈ ಪಯಣಕ್ಕೂ೦ಟೆ ಹೊಸ ದಿಗಂತ
ಬೆಳಕು ಮೂಡಿತೇ ಇರಳು ಕಳೆದು
ಹೊಸ ಹಂತಕ್ಕಾಗಿ ತೆರೆ ಸರಿದಿತೇ........

ಮನದ ಹಂಬಲದ ಕನಸೆಲ್ಲವೂ
ಮಂಜಂತೆ ಕರಗಿ ಮರೆಯಾಯಿತೇ......

Rating
No votes yet