ಹೇಗಿರಬಹುದು ನಮ್ಮ ಮಕ್ಕಳ ಭವಿಷ್ಯ?

ಹೇಗಿರಬಹುದು ನಮ್ಮ ಮಕ್ಕಳ ಭವಿಷ್ಯ?

ಭಯೋತ್ಪಾದಕರ ದಾಳಿಗೆ ಇಡೀ ದೇಶವೇ ತತ್ತರಿಸಿ ಹೋಗಿರುವಾಗ, ಈ ರಾಜಕೀಯ ನೇತಾರರು ಸಂಸತ್ತಿನ ಒಳಗೆ ಕಲೆಹಾಕಿಕೊಂಡು ತಮಾಷೆ ನಡೆಸುತ್ತಿದ್ದಾರೆ ಅನ್ನಿಸುತ್ತಿದೆ.
ಭಯೋತ್ಪಾದಕರ ದಾಳಿಯನ್ನು ತಡೆಯುವತ್ತ ಗಮನ ಹರಿಸಿ, ಗುಪ್ತಚರ ಇಲಾಖೆಯನ್ನು ಬಲಗೊಳಿಸಿ, ರಕ್ಷಣಾಪಡೆಗೆ ನವ ನವೀನ ಶಸ್ತ್ರಾಸ್ತ್ರಗಳನ್ನು ಕೊಡಮಾಡಿಸುವ ಪ್ರಯತ್ನ ನಡೆಸಲಾಗುತ್ತದೆ ಎಂದು ಇಡೀ ದೇಶ ಕಾಯುತ್ತಾ ಕೂತಿದ್ದರೆ ಅಲ್ಲಿ ನಡೆಯುತಿರುವುದೇ ಬೇರೆ. ಆತ್ಮಾಹುತಿ ದಳದ ಸದಸ್ಯರು ನಮ್ಮ ದೇಶದ ಮೇಲೆ ದಾಳಿ ನಡೆಸಿದರೆ,ಆ ನಂತರ ಅವರು ಬಂಧಿತರಾದರೆ ಅವರನ್ನು ಯಾವ ರೀತಿ ನಡೆಸಿಕೊಳ್ಳಬೇಕು, ಎಷ್ಟು ದಿನ ಪೋಲೀಸ್ ಬಂಧನದಲ್ಲಿ ವಿಚಾರಣೆ ಇಲ್ಲದೇ ಇಟ್ಟುಕೊಳ್ಳಬಹುದು, ಅವರ ಯಾವ ಹೇಳಿಕೆಯನ್ನು ನಂಬಬಹುದು. ಯಾವುದನ್ನು ನಂಬಲಾಗದು ಎನ್ನುವುದರ ಬಗ್ಗೆ ಗಹನವಾದ ಚರ್ಚೆ ನಡೆಯುತ್ತಿದೆ. ದಾಳಿಯನ್ನು ಎದುರಿಸುವ ಬಗ್ಗೆ ಸುಸಜ್ಜಿತರಾಗ ಬೇಕೇ ವಿನಹ ದಾಳಿಯ ನಂತರ ಅಳಿದುಳಿದ ಬಂಧಿತರ ಸೇವೆ ಯಾವ ರೀತಿ ಮಾಡಬೇಕು ಅನ್ನುವುದನ್ನು ಇವರೇಕೆ ಚರ್ಚಿಸುತ್ತಿದ್ದಾರೆ? ರೋಗ ಬರದಂತೆ ತಡೆಯುವುದನ್ನು ಬಿಟ್ಟು ಸತ್ತ ರೋಗಿಯ ಮರಣೋತ್ತರ ಪರೀಕ್ಷೆ ಹೇಗೆ ಮಾಡುವುದು ಎನ್ನುವುದರ ಬಗ್ಗೆ ಚಿಂತಿಸುತ್ತಿದ್ದಾರೆ. ಇದೆಂತಹಾ ವಿಪರ್ಯಾಸ?

ಇಂಜಿನೀಯರುಗಳು, ಬುದ್ಧಿಜೀವಿಗಳು, ಘನತೆವೆತ್ತ ನೇತಾರರುಗಳು, ಅಂತರಾಷ್ಟ್ರೀಯ ಮಟ್ಟದ ವಿಚಾರವಾದಿಗಳು, ರಾಜಕೀಯ ಮುತ್ಸದ್ದಿಗಳು ತುಂಬಿರುವ ಈ ದೇಶ ಸ್ವಾತಂತ್ರ್ಯ ಸಿಕ್ಕಿ ೬೧ ವರುಷಗಳ ನಂತರ ಯಾವ ಸ್ಥಿತಿಗೆ ಬಂದು ಬಿಟ್ಟಿದೆ ನೋಡಿ. ನಮ್ಮ ದೇಶದ ಆಗುಹೋಗಿನ ಬಗ್ಗೆ, ಸುರಕ್ಷೆಯ ಬಗ್ಗೆ, ಆರ್ಥಿಕ ಸುಧೃಡತೆಯ ಬಗ್ಗೆ, ಅಂತಿಮ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು, ಆ ಜವಾಬ್ದಾರಿಯನ್ನು ಅರುವತ್ತರ ದಶಕದಲ್ಲಿ ಬ್ರಿಟನ್ನಿನ ಹೋಟೇಲೊಂದರಲ್ಲಿ ನೌಕರಿ ಮಾಡುತ್ತಿದ್ದ, ಆ ನಂತರ ಯಾವುದೇ ರೀತಿಯಲ್ಲಾಗಲೀ ತನ್ನ ವಿದ್ಯಾರ್ಹತೆಯನ್ನು ಹೆಚ್ಚಿಸಿಕೊಳ್ಳದ ವಿದೇಶಿಯೊಬ್ಬರ ತಲೆಗೆ ಹೊರಿಸಿ ಕೂತು ಬಿಟ್ಟಿದ್ದೇವೆ. ಇದು ಎಂತಹಾ ದುರ್ದೈವ?

ಹೇಗಿರಬಹುದು ನಮ್ಮ ಮಕ್ಕಳ ಭವಿಷ್ಯ?

- ಆಸು ಹೆಗ್ಡೆ

Rating
No votes yet

Comments