ಹೊಸ ನಗೆಹನಿ- ೫೪ ನೇ ಕಂತು

ಹೊಸ ನಗೆಹನಿ- ೫೪ ನೇ ಕಂತು

ಬೇಡಿದ್ದನ್ನ ಈಡೇರಿಸೊ ಬಾವಿಯಲ್ಲಿ ಗಂಡನು ಒಂದು ನಾಣ್ಯ ಹಾಕಿ ಏನನ್ನೋ ಮನಸಿನಲ್ಲಿ ಬೇಡಿಕೊಂಡ. ನಂತರ ಹೆಂಡತಿಯೂ ಅದರಲ್ಲಿ ನಾಣ್ಯ ಎಸೆಯಲು ಹೋಗಿ ಕಾಲು ಜಾರಿ ಬಿದ್ದು ಮುಳುಗಿ ಬಿಟ್ಟಳು.
ಗಂಡ ಉದ್ಗರಿಸಿದ - ಅರೆ, ಇದೆಲ್ಲ ನಿಜಾನಾ ಹಾಗಾದರೆ ? ಕುರುಡು ನಂಬಿಕೆ ಅಂತ ತಿಳಿದಿದ್ದೆನಲ್ಲ?!
********
- ಆದಿ ಪುರುಷ ಆಡಂ ನನ್ನು ದೇವರು ಮೊದಲು ಸೃಷ್ಟಿಸಿದ್ದು ಏಕೆ ?
- ಅವನಿಗೆ ಏನನ್ನಾದರೂ ಹೇಳುವ ಅವಕಾಶ ಕೊಡಲು!
******
ಸೈನ್ಯಾಧಿಕಾರಿ ಸೈನಿಕನಿಗೆ ಕೇಳಿದ- ಏನಯ್ಯ ನಿನ್ನ ಹತ್ತಿರ ನೂರು ರೂಪಾಯಿಗೆ ಚಿಲ್ಲರೆ ಇದೆಯೆ?
ಸೈನಿಕ - ಇದೆ, ಕಣಯ್ಯ.
ಸೈನ್ಯಾಧಿಕಾರಿ- ಮೇಲಧಿಕಾರಿ ಜತೆ ಹೀಗೇನಯ್ಯ ಮಾತಾಡೋದು? ಈಗ ಇನ್ನೊಮ್ಮೆ ಪ್ರಯತ್ನಿಸೋಣ .
ನಿನ್ನ ಹತ್ತಿರ ನೂರು ರೂಪಾಯಿಗೆ ಚಿಲ್ಲರೆ ಇದೆಯೆ?
ಸೈನಿಕ - ಇಲ್ಲ, ಸರ್!
*****
ಸರ್ಜನ್ ಆಪರೇಶನ್ ರೂಮ್ ನಿಂದ ಹೊರಬರುತ್ತಿದ್ದಂತೆ ಅಲ್ಲಿ ಕಾದಿದ್ದ ಸಂಬಂಧಿಗಳು ಕೇಳಿದರು - ಡಾಕ್ಟರೇ , ಆಪರೇಶನ್ ಯಶಸ್ವಿ ಆಯಿತು ತಾನೇ?
ಡಾಕ್ಟರ್ - ( ಗಾಬರಿಯಿಂದ) ನಾನು ಆಪರೇಶನ್ ಮಾಡಬೇಕಿತ್ತಾ ? ನಾನು ಪೋಸ್ಟ್ ಮಾರ್ಟಂ ಮಾಡಿಬಿಟ್ಟೆನಲ್ಲ?!

Rating
No votes yet