'೧೮ ಎಪ್ರಿಲ್ ೨೦೦೬' ರ ನನ್ನ ಓದು

'೧೮ ಎಪ್ರಿಲ್ ೨೦೦೬' ರ ನನ್ನ ಓದು

ಪ್ರಜಾವಾಣಿ (೧೮ ಎಪ್ರಿಲ್ ೨೦೦೬) ರಲ್ಲಿ ನಾನು ಗಮನಿಸಿದ ವಾರ್ತೆಗಳು.
೧. ಕನ್ನಡದ ಆದಿಕವಿ ಪಂಪ ಅಲ್ಲ ಎಂದು ಚರ್ಚೆ ನಡೆದಿದೆ ; ದೇವರ ದಾಸಿಮಯ್ಯ , ಜೇಡರ ದಾಸಿಮಯ್ಯ ಇಬ್ಬರೂ ಒಬ್ಬನೇ ವ್ಯಕ್ತಿ ಎಂಬ ವಾದವೂ ಇದ್ದು ಈ ಪಟ್ಟ ಅವರಿಗೆ ಸಲ್ಲಬೇಕು ಎಂದು ವಾಚಕರವಾಣಿಯಲ್ಲಿ ಪತ್ರ ಬರೆದಿದ್ದಾರೆ .
೨. ಇಂದು ಬೆಂಗಳೂರಿನಲ್ಲಿ ಚಿತ್ರರಂಗದಿಂದ ಡಾ. ರಾಜ್‍ಗೆ ಶೃದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ
೩. ಪ್ರತಿದಿನ ಐವತ್ತು ಸಾವಿರ ಜನ ಡಾ. ರಾಜ್ ಸಮಾಧಿಯನ್ನು ಸಂದರ್ಶಿಸುತ್ತಿದ್ದಾರೆ.
೪. ರಾಜ್ ಸ್ಮಾರಕ ಹೇಗಿರಬೇಕು ಎಂಬ ಬಗ್ಗೆ ಪ್ರಜಾವಾಣಿ ಜನರ ಅನಿಸಿಕೆಗಳನ್ನು ಅಹ್ವಾನಿಸಿದೆ. ಶುಕ್ರವಾರದ ಪತ್ರಿಕೆಯಲ್ಲಿ ಜನರ ಅನಿಸಿಕೆಗಳನ್ನು ಮುದ್ರಿಸಲಾಗುವದು.
೫. ರಾಜ್ ಸ್ಮಾರಕ ಅಂಚೆ ಚೀಟಿಗೆ ಪ್ರಯತ್ನಿಸಲಾಗುವದು

ಮೇ ತಿಂಗಳ ಕಸ್ತೂರಿ ಮಾರುಕಟ್ಟೆಗೆ ಬಂದಿದೆ . ಅದರಲ್ಲಿ ದಕ್ಷಿಣ ಕನ್ನಡದ ಬಗ್ಗೆ ಸಂಗ್ರಾಹ್ಯ ಲೇಖನ ಬಂದಿದೆ. ಅದರಲ್ಲಿ ದಕ್ಷಿಣ ಕನ್ನಡ ಜನತೆಯ ಇತಿಹಾಸ, ಪುರಾಣ , ಜನಾಂಗಗಳು , ಉದ್ಯಮಶೀಲತೆ , ಸಾಹಿತ್ಯ , ಸಂಸ್ಕೃತಿ , ಸಾಮಾಜಿಕ ವಿಷಯಗಳ ಬಗ್ಗೆ ಸವಿಸ್ತಾರವಾಗಿ ಕುತೂಹಲಕರ ಮಾಹಿತಿ ಇದೆ. ಎಲ್ಲರೂ ತಪ್ಪದೇ ಓದಬೇಕಾದ ಲೇಖನ.

Rating
No votes yet