೨೯ ಮಹಡಿಯ ವಸತಿ ಗೃಹ !
ನಮಗೆ ಟೊರಾಂಟೋನಗರ ಹಳ್ಳಿ, ಪಟ್ಟಣ, ಮತ್ತು ಬೃಹತ್ ನಗರದ ತರಹ ಕಂಡಿದೆ. ಆಶ್ಕರ್ಯ ಪಡಬೇಕಾಗಿಲ್ಲ. ಕೆನಡಾದೇಶದ ಅತಿ ದೊಡ್ಡ ವಾಣಿಜ್ಯ ವಹಿವಾಟುಗಳು ಇಲ್ಲಿ ನಡೆಯುತ್ತವೆ. ಬೃಹದ್ ಸ್ಕೈ ಸ್ಕ್ರಾಪರ್ ಗಳು ಇವೆ. ಹಾಗೆಯೇ ಬ್ರಿಟಿಷ್ಕಾಟೇಜ್ ಗಳನ್ನೂ ಹೋಲುವ ಸುಂದರ ಬಂಗಲೆಗಳ ಸಾಲು ಸಾಲೇ ಇವೆ. ಸಾರಿಗೆ ವ್ಯವಸ್ಥೆಯೂ ನಂಬರ್ ಒನ್ ! ಇದರಬಗ್ಗೆ ಹಿಂದೆ ಹೇಳಿಯಾಗಿದೆ. ಸುಂದರವಾದ ಯಾವ ಪಾತ್ ಹೊಲ್ ಗಳಿಲ್ಲದ ರಸ್ತೆ ಸುಗಮವಾಗಿದ್ದು ಕೊಳೆ-ಕಸ (ಸಾಮಾನ್ಯವಾಗಿ !) ಸ್ವಲ್ಪವೂ ಇರುವುದಿಲ್ಲ. ಹಿರಿಯ ನಾಗರಿಕರಿಗೆ, ಮಕ್ಕಳಿಗೆ, ಮಹಿಳೆಯರಿಗೆ ಎಲ್ಲಿಲ್ಲದ ಆದ್ಯತೆ. "ಮೊದಲು ನೀವು ಹೋಗಿ ; ಅನಂತರ ನಾವು " ಎನ್ನುವಂತೆ ಎಲ್ಲ ವಾಹನ ಚಾಲಕರು ಸಂನೆಮಾಡಿ ಹೇಳುತ್ತಾರೆ. ಆದರು ಇಲ್ಲೂ ತಲೆಹೋಕ, ಯುವಜನರು ಇಲ್ಲದಿಲ್ಲ ! ಆದರೆ, ಯಾವಮಾಯದಲ್ಲೋ ಆ ವಾಹನ ಚಾಲಕರನ್ನು ಅಟ್ಟಿಸಿಕೊಂಡು ಹೋಗಿ ಸರಿಯಾಗಿ ಶಾಸ್ತಿಮಾಡುವ ಜವಾಬ್ದಾರಿ ಪೋಲಿಸ್ ಅಧಿಕಾರಿಗಳನ್ನು ನಾವು ಕಂಡೆವು.
ಒಮ್ಮೆ ನಮ್ಮ ಬಸ್ (ಸ್ಟ್ರೀಟ್ ಕಾರ್) ಚಾಲಕ ಒಂದು ಟ್ಯಾಕ್ಸಿಗೆ ಧಕ್ಕೆ ಕೊಟ್ಟ. ಆ ರಭಸಕ್ಕೆ ಅದು ಉರುಳಿ ಪಕ್ಕದ ಟ್ರಾಕ್ ನಲ್ಲಿ ಬಿತ್ತು. ದೇವರ ದಯೆಯಿಂದ ಯಾರಿಗೂ ಹೆಚ್ಚು ಅಪಾಯ ಆಗಲಿಲ್ಲ ! ಆದರೆ ೧೫ ನಿಮಿಷಗಳಲ್ಲಿ ಪೋಲಿಸ್ ಅಧಿಕಾರಿಗಳು ಅಲ್ಲಿಗೆ ಧಾವಿಸಿ, ಜಗಳ ಇತ್ಯರ್ಥ ಮಾಡಿ ಬಸ್ ಗೆ, ಚಾಲನೆ ನೀಡಿದರು ! ಬಸ್ ಡ್ರೈವರ್ ಗೆ ಶಿಕ್ಷೆ ವಿಧಿಸಲಾಯಿತು. ಸುಮಾರು ಅರ್ಧ ಮೈಲಿ ಉದ್ದದ ಬಸ್ ಲೈನ್ ಮತ್ತೆ ಚಲಿಸಿತು !
ಈ ತರಹದ ಜವಾಬ್ದಾರಿಯುತ ನಡವಳಿಕೆ ನಮ್ಮಲ್ಲೆಲ್ಲಿ ಬರಬೇಕು ? ನಾನೂ ಖಂಡಿತ ನಮ್ಮದೇಶವನ್ನು ಹಳಿಯುತ್ತಿಲ್ಲ. ಕೆಟ್ಟ ಮನೋಭಾವ, ಬೇಜವಾಬ್ದಾರಿ, ಯಾರನ್ನೂ ಬೈಯುವ, ಗೊಣಗುವ ಗುಣ, ತಪ್ಪಲ್ಲವೇ ?!
Comments
ಉ: ೨೯ ಮಹಡಿಯ ವಸತಿ ಗೃಹ !
In reply to ಉ: ೨೯ ಮಹಡಿಯ ವಸತಿ ಗೃಹ ! by makara
ಉ: ೨೯ ಮಹಡಿಯ ವಸತಿ ಗೃಹ !
In reply to ಉ: ೨೯ ಮಹಡಿಯ ವಸತಿ ಗೃಹ ! by venkatesh
ಉ: ೨೯ ಮಹಡಿಯ ವಸತಿ ಗೃಹ !