೨.. ಕಥಿ ಹೈಲ್ ಅಯ್ತಲ್ಲ ಮರಾಯ್ರೇ!!!!
೨..ಮರನ್ನ ಅಲ್ಲಾಡ್ಸುದು
"ಏಯ್ ಸೀನಾ!!???!!
"ಹೌದನಾ ನಿಂದ್ ದಿನಾ ಇದೇ ಪಂಚಾಯ್ತಿಗಿ ಅಯ್ತಲ್ಲ ಮರಾಯಾ!
ನಾಕ್ ಪೈಸ ಮಾಡ್ಕಂಬುದು, ಅದನ್ನ ಹೀಂಗೇ ಕುಡ್ದ ಹಾಳ್ ಮಾಡೂದ್, ನಿಂಗೇನ್ ಹೇಳೋರ್ ಕೇಳೋರ್ ಯಾರಿಲ್ಲ್ಯಾ ಹಂಗಾರೆ?"
ಮಂಜ್ರು ತಮ್ಮ ಕಚ್ಚೆ ಸರಿ ಮಾಡ್ತಾ ಕೇಳಿದರು, ಕುಡ್ದು ಕೆರಿ ಬದಿ ಗೋಳಿ ಮರ್ದ್ ಕೆಳಗೆ ಮಲಗಿಕೊಂಡಿರೋ ಸೀನನ್ನ.
"ಹೋಯ್ಮಂಜರೇ ನಮಸ್ಕಾರ! ನಿವೇನ್ ಅಂದ್ಕಂಡ್ರಿ ಮರಾಯ್ರೆ?, " ಸೀನ
"ಇದೇನ್ ಸಾಧಾರ್ಣ್ ಮದ್ದ ಅಂದ್ಕಂಡ್ರ್ಯಾ!! ಇದ್ ಅಂತಿಂತದ್ದ ಅಲ್ಲ ಮರಾಯ್ರೆ, ದೇವ್ತೆಗಳೇ ಕುಡೀತಿದ್ರಂಬ್ರಲೇ?"
"ಆದೆಲ್ಲಾ ನಿನ್ನ ತಲಿಯಲ್ ಯಾರ್ ತುಂಬ್ರ ಮರಾಯಾ!! ತಕ ಹೋತತ್ತ್ ನಿಂಗೆ, ಅದೇ ಬೆರೆ, ನಿನ್ ಇದೇ ಬೇರೆ!!!" ಮಂಜರೆಂದರು.
"ಹಂಗರೆ ಒಂದ್ ಕೆಲ್ಸ ಮಾಡುವಾ, ನೀವ್ ನಿಮ್ಮ್ ಎಲ್ಲಾ ಪೂಜಿ ಪುನಸ್ಕಾರ ಮಾಡ್ದ್ ಶಕ್ತಿ ತಕಂಡ್ ಈ ಮರ ಅಲ್ಲಾಡ್ಸುಕಾತ್ತಾ ಕಾಣಿ !! ನಿಮಗ್ ಆತಿಲ್ಯಾ, ಹಾಂಗಾರೆ ಎಳ್ಜಬಿ ಮಾಡ್ಬೇಡಿ, ನನ್ನೊಟ್ಟಿಗೇ ಕೂತ್ಕಂಡ್ ನಾಕುಡೂದ್ನ ಕುಡ್ಕಂಡ್ ಈ ಮರ ಅಲ್ಲಾಡುದ್ ಇಬ್ಬರೂ ಕಾಂಬ ಬನಿ."
Rating
Comments
ಉ: ೨.. ಕಥಿ ಹೈಲ್ ಅಯ್ತಲ್ಲ ಮರಾಯ್ರೇ!!!!
In reply to ಉ: ೨.. ಕಥಿ ಹೈಲ್ ಅಯ್ತಲ್ಲ ಮರಾಯ್ರೇ!!!! by somayaji
ಉ: ೨.. ಕಥಿ ಹೈಲ್ ಅಯ್ತಲ್ಲ ಮರಾಯ್ರೇ!!!!