೭೫ನೇ ಕನ್ನಡ ಸಾಹಿತ್ಯ ಸಮ್ಮೇಳನ

೭೫ನೇ ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡಿಗರೇ

ನಮ್ಮ ಹೆಮ್ಮೆಯ ಕರ್ನಾಟಕದಲ್ಲಿ ಕೋಟೆ ಕೊತ್ತಲುಗಳಿಂದ ಕೂಡಿರುವ ಮದಕರಿನಾಯಕ ಹಾಗೂ ವೀರವನಿತೆ ಒನಕೆ ಓಬವ್ವನ ಹೆಸರುಗಳ ಹೇಳಿದಂತೆ ನೆನಪಾಗುವ ಚಿತ್ರದುರ್ಗದಲ್ಲಿ ೭೫ನೇ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ ೨೯ರಂದೇ ಪ್ರಾರಂಭವಾಗಬೇಕಿತ್ತು, ಆದರೆ ರಾಷ್ಟ್ರಪತಿ ವೆಂಕಟರಾಮನರ ನಿಧನದಿಂದಾಗಿ ಪೆಬ್ರವರಿ ೪ ರಿಂದ ಪ್ರಾರಂಭವಾಗಲಿದೆ.

ಇದಕ್ಕೆ ಮೊದಲು ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಾದಿ ಹಿಡಿಯುವ ನಿಟ್ಟಿನಲ್ಲಿ, ಕಮಲಾ ಹಂಪನಾ ಹಾಗೂ ಚಿದಾನಂದ ಮೂರ್ತಿ (ಚಿಮೂ)ರವರ ಹೆಸರು ಕೇಳಿಬರುತ್ತಿತ್ತು. ಚಿದಾನಂದ ಮೂರ್ತಿ, ಬರಗೂರು ರಾಮಚಂದ್ರಪ್ಪ ಹಾಗೂ ಎಲ್.ಬಸವರಾಜುವಿನ ನಡುವೆ ಅತ್ಯಂತ ಪ್ಯೆಪೋಟಿಯಲ್ಲಿ ಹೆಸರುಗಳು ಕೇಳಿಬಂದರೂ, ಕೊನೆಯ ಕ್ಷಣದಲ್ಲಿ ಹಿರಿತನದ ಆಧಾರದ ಮೇಲೆ ಸಾಹಿತಿ ಎಲ್. ಬಸವರಾಜು ಅವರ ಅಧ್ಯಕ್ಷತೆಯಲ್ಲಿ ಇಂದಿನಿಂದ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಾರಂಭವಾಗಿದೆ.

ಎಲ್. ಬಸವರಾಜುರವರ ಪರಿಚಯ :

ಡಾ ಎಲ್ ಬಸವರಾಜು 1919 ಅಕ್ಟೋಬರ 5 ರಂದು ಕೋಲಾರ ಜಿಲ್ಲೆಯ ಎಡಗೂರು ಗ್ರಾಮದಲ್ಲಿ ಜನಿಸಿದರು. ಬಸವರಾಜು ವೃತ್ತಿಯಿಂದ ಪ್ರಾಧ್ಯಾಪಕರಾದರೂ, ತಮ್ಮ ಜೀವನದ ಬಹುಪಾಲು ಅವಧಿಯನ್ನು ಕನ್ನಡ ಕವಿ, ವೀರಶೈವ ಸಾಹಿತ್ಯ-ಸಿದ್ಧಾಂತಗಳ ಶೋಧನೆ, ಅಧ್ಯಯನ, ವ್ಯಾಖ್ಯಾನ, ಸಂಪಾದನೆಗಳಲ್ಲಿ ಕಳೆದಿದ್ದಾರೆ. ಸಹೃದಯಿ ಆಗಿರುವ ಅವರು ಅಪ್ಪಟ ಮಾನವತಾವಾದಿಯಾಗಿದ್ದಾರೆ.

ಬಸವರಾಜು ಅವರಿಗೆ ಪಂಪ ಪ್ರಶಸ್ತಿ, ಬಸವ ಪುರಸ್ಕಾರ (2005), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1994), ಕೇಂದ್ರ ಸಾಹಿತ್ಯ ಅಕಾಡೆಮಿಯ 2006ರ ಭಾಷಾ ಸಮ್ಮಾನ್ ಗೌರವ ಸಂದಿವೆ.

ಸಮ್ಮೇಳನದ ತಯಾರಿ :

ಚಿತ್ರದುರ್ಗದ ರಸ್ತೆ ರಸ್ತೆಗಳಲ್ಲೂ ಕನ್ನಡ ಬಾವುಟದ ತೋರಣಗಳು, ದೊಡ್ಡ ದೊಡ್ಡ ಸ್ವಾಗತ ಫಲಕಗಳು, ದೂರದೂರುಗಳಿಂದ ಬಂದಿದ್ದ ಪುಸ್ತಕ ವ್ಯಾಪಾರಿಗಳ ರಾಶಿ ರಾಶಿ ಪುಸ್ತಕಗಳು, ಈ ಕಡೆ ಹೆಂಗಸರಿಂದ ನಾಡಗೀತೆಯ ತಾಲೀಮು, ಮತ್ತೊಂದೆಡೆ ರಾಷ್ಟ್ರಗೀತೆಯ ನಿನಾದ, ಈಗಾಗಲೇ ಇಲ್ಲಿ ಕವಿ, ಕಲಾವಿದ, ಚಿಂತಕ, ಹೋರಾಟಗಾರ, ಜನಪ್ರತಿನಿಧಿಗಳ, ಕನ್ನಡ ಪರಿಚಾರಕರ, ಸಂಘ ಸಂಸ್ಥೆಗಳ ಹಾಜರಾತಿ ದುರ್ಗದ ಉದ್ದಕ್ಕೂ ತುಂಬಿ ಸಾಹಿತ್ಯ ಸಮ್ಮೇಳನಕ್ಕೆ ರಂಗು ತಂದಿದೆ.

ಭದ್ರತೆ :
ಸಮ್ಮೇಳನಕ್ಕೆ ಮೂರರಿಂದ ನಾಲ್ಕು ಲಕ್ಷ ಜನ ಬರುವ ನಿರೀಕ್ಷ್ಯೆಯಿದ್ದು, ಇದಕ್ಕಾಗಿ ೧೫ ಸಿಸಿ ಕ್ಯಾಮರಾಗಳು, ಐವರು ಡಿ ವ್ಯೆ ಎಸ್ ಪಿಗಳು, ಹದಿನೇಳು ಮಂದಿ ಸಿಪಿಐಗಳು, ಐವತ್ತೆರಡು ಎ ವ್ಯೆ ಎಸ್ ಪಿಗಳು, ಇನ್ನೂರುಇಪ್ಪತ್ಯೆದು ಹೆಡ್ ಕಾನ್ಸಸ್ಟೇಬಲ್ಗಳು, ನಾನೂರ ಅರವತ್ತ್ಯೆದು ಕಾನ್ಸಸ್ಟೇಬಲ್ಗಳು, ಇನ್ನೂರ ಐವತ್ತು ಗೃಹರಕ್ಷಕ ದಳದವರು, ಅಲ್ಲದೆ, ಎರಡು ಕೆ ಎಸ್ ಆರ್ ಪಿ ಹಾಗೂ ಡಿ ಆರ್ ತುಕಡಿಗಳು ಬಂದಿಳಿದಿವೆ.

ಸಮ್ಮೇಳನಕ್ಕೆ ಸ್ಥಳಿಯರ ಕೊಡುಗೆ :

ಸಮ್ಮೇಳನಕ್ಕೆ ಈಗಾಗಲೇ ಸ್ಥಳಿಯರು ಸೇರಿ ೧೦,೭೩೨ ಪ್ರತಿನಿಧಿಗಳು ನೊಂದಾಯಿತರಾಗಿದ್ದಾರೆ, ಈ ಪ್ರತಿನಿಧಿಗಳಿಗೆ ಈಗ ಕ್ಯಾಲೆಂಡರ್, ಮಾಹಿತಿ ಕ್ಯೆಪಿಡಿ, ಬ್ಯಾಡ್ಜ್, ನೋಟ್ ಪುಸ್ತಕ, ಆಹ್ವಾನ ಪತ್ರಿಕೆ, ಊಟದ ಚೀಟಿ, ಪೆನ್ನು ಕಿಟ್ ರೂಪದಲ್ಲಿ ಕೊಡುತ್ತಿದ್ದಾರೆ.

ಇದುವರೆಗೂ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ವರ್ಷ, ಹಾಗೂ ಅದರ ಅಧ್ಯಕ್ಷತೆಯ ವಿವರಕ್ಕೆ ಇಲ್ಲಿ ಚುಚ್ಚಿ
http://kn.wikipedia.org/wiki/%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF_%E0%B2%B8%E0%B2%AE%E0%B3%8D%E0%B2%AE%E0%B3%87%E0%B2%B3%E0%B2%A8

ಇಂತಹ ಸಾಹಿತ್ಯ ಸಮ್ಮೇಳನದ ಹಬ್ಬದಲ್ಲಿ ನನ್ನ ಕೆಲವು ಪ್ರಶ್ನೆಗಳು

೧. ಕನ್ನಡ ಸಾಹಿತ್ಯ ಸಮ್ಮೇಳನದ ಉದ್ದೇಶಗಳು ನಿಜಕ್ಕೂ ಈಡೇರುತ್ತಿವೆಯೇ ?
೨. ಕನ್ನಡಕ್ಕೆ ಸಾಹಿತ್ಯ ಸಮ್ಮೇಳನಗಳ ಅಗತ್ಯ ಇಂದಿಗೆ ಪ್ರಸ್ತುತವೇ ?
೩. ಈ ಸಮ್ಮೇಳನಗಳಿಂದ ಕನ್ನಡ ಸಾಹಿತ್ಯ ಲೋಕಕ್ಕೆ ನಿಜವಾದ ಕೊಡುಗೆಯೇನು ?
೪. ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿದರೆ ಕನ್ನಡ ಉದ್ದಾರವಾದೀತೇ ?
೫. ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ರಾಜಕೀಯ ದೊಂಬರಾಟ ಸರಿಯೇ ?
೬. ಕನ್ನಡ ಸಾಹಿತ್ಯ ಲೋಕಕ್ಕೆ ನಿಜವಾದ ಕನ್ನಡಿಗರಾದ ನಮ್ಮೆಲ್ಲರ ನಿಜವಾದ ಸಮರ್ಪಣೆ ಏನು ?
೭. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಮನ್ನಣೆಗೆ ರಾಜಕೀಯದ ಕೆಸರು ಸರಿಯೇ ?

ಈ ಮೇಲಿನ ಪ್ರಶ್ನೆಗಳು ಕನ್ನಡಿಗನಾಗಿ ತಿಳಿದುಕೊಳ್ಳುವ ಹಂಬಲ ಅಷ್ಟೆ.

ಕನ್ನಡ ಸಾಹಿತ್ಯ ಸಮ್ಮೇಳನದ ಹೆಚ್ಚಿನ ಮಾಹಿತಿಯನ್ನು ಪೂರ್ತಿಯಾಗಿ ೭ರ ಸಂಜೆ ಬರೆಯುತ್ತೇನೆ.

ಅರವಿಂದ್

Rating
No votes yet