’ ಇರುವುದೆಲ್ಲವ ಬಿಟ್ಟು ......' - ಏನಿದರ ನಿಜವಾದ ಅರ್ಥ?

’ ಇರುವುದೆಲ್ಲವ ಬಿಟ್ಟು ......' - ಏನಿದರ ನಿಜವಾದ ಅರ್ಥ?

’ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ’ - ಅಡಿಗರ ಕವಿತೆಯ ಈ ಸಾಲು ಕ್ಲೀಶೆ (Cliche) ಅನ್ನಿಸುವಷ್ಟರ ಮಟ್ಟಿಗೆ ಉಪಯೋಗವಾಗಿದೆ.

ಆದರೆ ನಾನು ಎಲ್ಲೋ ಓದಿದ ನೆನಪು ಹೀಗಿದೆ:

Original ಕವಿತೆಯಲ್ಲಿ ಈ ವಾಕ್ಯದ ಕೊನೆಗೊಂದು ಪ್ರಶ್ನಾರ್ಥಕ ಚಿಹ್ನೆ ಇದೆಯಂತೆ:
’ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?’ - ಎಂದು.
( So, ಇದೊಂದು conclusion ಅಥವಾ statement ಅಲ್ಲ. )

ಹಾಗಾಗಿ ಈ ವಾಕ್ಯದ ಅರ್ಥ ನಿಜಕ್ಕೂ ’ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಜೀವನ ತುಡಿಯುವುದಿಲ್ಲ ’ ಅಥವಾ ’ ಯಾತಕ್ಕಾದರೂ ತುಡಿದೀತು? ’ ಎಂದಂತೆ.

ಯಾರಾದರೂ ಗೊತ್ತಿರುವವರು ಈ ಬಗ್ಗೆ ಬರೆದಾರೇ?

ಇಂದು ಗೂಗಲ್ ನಲ್ಲಿ ಕನ್ನಡ ಸರ್ಚಿಸುವಾಗ ಸಿಕ್ಕಿದ ಈ ಕೊಂಡಿಯ ಪ್ರಕಾರ ನನ್ನ ಅನುಮಾನ ಸರಿಯಾಗಿದೆ ಅಂತ ಅನ್ನಿಸತೊಡಗಿದೆ:
http://www.kannadasaahithya.com/uniarc/index.php?layout=main&cslot_1=37

Rating
No votes yet

Comments