3 idiots
ನಾನು 3 idiots ಚಲನಚಿತ್ರವನ್ನ ನೋಡಿದೆ. ಇದರ ಬಗ್ಗೆ ಬಹಳಷ್ಟು ಹೊಗಳಿಕೆಯ ಮಾತುಗಳು ಎಲ್ಲಾ ಮೀಡಿಯಾಗಳಲ್ಲಿ ಈಗಾಗಲೇ ಬಂದಿದೆ. ಇದ್ರಲ್ಲಿ ಕೆಲವು ವಿಶ್ಯಗಳು ನಿಜವಾಗ್ಲೂ ನಮಗೆ, ಅಂದ್ರೆ ಕನ್ನಡಿಗರಿಗೆ ಅನ್ವಯವಾಗುತ್ತವೆ. ಆದು "ಅರ್ಥ ಮುಖ್ಯ.. ಅರ್ಥೈಸುವ ನುಡಿಯಲ್ಲ".... ಎಂಬುದು. ಕನ್ನಡದಲ್ಲಿ ಓದುವ ಮಕ್ಕಳಿಗೆ ಸುಲಭವಾದ ಆಡು-ನುಡಿಯಲ್ಲಿ ವಿಜ್ನಾನವನ್ನ ಹೇಳಿಕೊಡುವ ಅವಷ್ಯಕತೆ ಇದೆ.
ಆದ್ರೆ, ನನಗೆ ಈ ಚಿತ್ರದ ಬಗ್ಗೆ ಅಸಮಾಧಾನವಾದ ಅಂಶಗಳೂ ಇವೆ. ಮುಖ್ಯವಾದದ್ದು: "ಚತುರ್ ರಾಮಲಿಂಗಮ್".. ಎನ್ನುವ "south-indian"(ಇದು ಒಬ್ಬ ತಮಿಳಿಯನ್--ಆದ್ರೆ ಹಿಂದಿಯವರಿಗೆ south-Indian ಅಂದ್ರೆ, ತಮಿಳಿಯನ್..) ಪಾತ್ರ. ಈ ಪಾತ್ರದ ಉದ್ದೇಶ "ಬಾಯಿ ಪಾಠ ಮಾಡಿಕೊಂಡು ಓದೋದ್ರಿಂದ ನಿಜವಾದ ವಿದ್ಯೆ ಪಡೆಯಲು ಸಾಧ್ಯವಿಲ್ಲ" ಅಂತ ಸಾರುವುದು. ಆದ್ರೆ, ಈ ಉದ್ದೇಶಕ್ಕಿಂತ ಚಿತ್ರ ಬೇರೆ ವಿಶ್ಯ ಸಾರಿದಂತೆ ನನಗೆ ಅನ್ನಿಸಿತು. ಇದ್ರಲ್ಲಿ "ಚತುರ್" ಒಬ್ಬ ತಮಿಳಿನವನಾಧ್ಧರಿಂದ ಅವನಿಗೆ ಹಿಂದಿ ಸರಿಯಾಗಿ ತಿಳಿಯದು. ಚಿತ್ರದುದ್ದಕ್ಕು "comedy" ಅನ್ನಿಸಿಕೊಳ್ಳುವುದು ಅವನ ತಮಿಳ್-accented ತಪ್ಪು-ತಪ್ಪು ಹಿಂದಿ. ಭಾರತೀಯರಿಗೆಲ್ಲಾ ಹಿಂದಿ ಬರಬೇಕಾದ್ದು ಅನಿವಾರ್ಯ ಎಂಬಂತೆ ಇವನ ಪಾತ್ರವಿದೆ. ಎಲ್ಲಿಯವರೆಗೆ ಈ ರೀತಿ ಒಂದು ನುಡಿಯನ್ನಾಡುವ ಭಾರತೀಯರು ಮತ್ತೊಂದು ನುಡಿಯನ್ನಾಡುವ ಭಾರತೀಯರಬಗ್ಗೆ ಕೀಳಾಗಿ ಕಂಡು ಅದನ್ನು "ಹಾಸ್ಯ" ಅಂತ ತೋರಿಸ್ತಾರೆ? ಒಬ್ಬ ಭಾರತೀಯನಿಗೆ ಹಿಂದಿ ಬರದಿದ್ದರೆ ಅವನ ಗತಿ ಏನಾಗುತ್ತೆ ಅಂತಾ ತೋರ್ಸೋ ಕೆಲ್ಸ ಈ ಚಿತ್ರ ಮಾಡಿದೆ. ಇದು "ಹಾಸ್ಯ"ನೋ ಇಲ್ಲ "ಪರಿಹಾಸ್ಯ"ನೋ?