ಪುಸ್ತಕ ಪರಿಚಯ
ಲೇಖಕರು: Ashwin Rao K P
September 10, 2021

‘ಮಿಥುನ’ ಕೃತಿಯ ಮೂಲ ಲೇಖಕರಾದ ಶ್ರೀರಮಣ ಅವರು ಬರೆದ ನೀಳ್ಗತೆಯೇ ನಾಲ್ಕನೇ ಎಕರೆ. ಲೇಖಕರು ತಮ್ಮ ಬೆನ್ನುಡಿಯಲ್ಲಿ ‘ಹೆಪ್ಪಿನ ಹನಿಯೂ, ನಿಂಬೆಯ ರಸವೂ…’ ಎಂದು ಬರೆಯುತ್ತಾ “ಇದು ಗ್ರಾಮೀಣ ಪ್ರದೇಶದಲ್ಲಿ ಸಾಗುವ ಕಥೆಯಾದ್ದರಿಂದ ರೈತಾಪಿ ಜನರ ಬೆವರುಪ್ಪಿನ ಆಡುಮಾತನ್ನೇ ಇಲ್ಲಿ ಬಳಸಿದ್ದೇನೆ. ಇದು ಮೂರು ಪದರುಗಳಾಗಿ ಬಿಚ್ಚಿಕೊಳ್ಳುವ ಕಥೆ. ಗ್ರಾಮ್ಯ ಜೀವನ, ನಗರೀಕರಣ. ಈ ಎರಡರ ನಡುವೆ ಸಿಲುಕಿ ನಲುಗುತ್ತಿರುವ ಹಳೆ ಮತ್ತು ಹೊಸ ತಲೆಮಾರುಗಳು ಈ ಕಥೆಯಲ್ಲಿ ಕಾಣಸಿಗುತ್ತವೆ. ಹಾಲೆಂಬ ಪದಾರ್ಥವು…
ಲೇಖಕರು: Ashwin Rao K P
September 07, 2021

‘ಮಲೆನಾಡಿನ ರೋಚಕ ಕಥೆಗಳು’ ಇದರ ೧೦ ನೆಯ ಭಾಗವೇ 'ಗಿರಿಕಂದರ ಎಸ್ಟೇಟ್'. ಎಂದಿನಂತೆ ಲೇಖಕರಾದ ಗಿರಿಮನೆ ಶ್ಯಾಮರಾವ್ ಅವರು ಪರಿಸರವನ್ನು ತಮ್ಮ ಬರಹದಲ್ಲಿ ಹೊದ್ದುಕೊಂಡು ರೋಚಕ ಕಥನ ಮಾಲೆಯನ್ನು ಪೋಣಿಸಿದ್ದಾರೆ. ಅವರೇ ತಮ್ಮ ಕೃತಿಯ ಬಗ್ಗೆ ಬೆನ್ನುಡಿಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ಇದು ಮಲೆನಾಡಿನ ರೋಚಕ ಕಥೆಗಳ ಸರಣಿಯ ಹತ್ತನೆಯ ಭಾಗ. ‘ಶೋಧ' ಎಂಬ ಹೆಸರಿನಲ್ಲಿ ‘ಮಂಗಳ' ವಾರಪತ್ರಿಕೆಯಲ್ಲಿ ಮೂಡಿಬಂದ ಜನಪ್ರಿಯ ಧಾರಾವಾಹಿ. ವೈವಿಧ್ಯಮಯವಾದ ಮಲೆನಾಡಿನ ರೋಚಕತೆಗಳ ಚಿತ್ರಣ ಇದರಲ್ಲೂ ಇದೆ.…
ಲೇಖಕರು: Ashwin Rao K P
September 04, 2021

ಅಯೋಧ್ಯಾ ಪ್ರಕಾಶನ ಇವರ ೧೬ನೆಯ ಕೃತಿಯೇ ರೋಹಿತ್ ಚಕ್ರತೀರ್ಥ ಇವರು ಬರೆದ ‘ಎಂದೆಂದೂ ಬಾಡದ ಮಲ್ಲಿಗೆ. ಈ ಪುಸ್ತಕದಲ್ಲಿ ಸಾಹಿತ್ಯ ಜಗತ್ತಿನ ಸ್ವಾರಸ್ಯಗಳನ್ನು ಸೊಗಸಾಗಿ ವರ್ಣನೆ ಮಾಡಲಾಗಿದೆ. ಹಿರಿಯ ವಿಮರ್ಶಕರಾದ ಮುರಳೀಧರ ಉಪಾಧ್ಯ ಹಿರಿಯಡಕ ಇವರು ತಮ್ಮ ಬೆನ್ನುಡಿಯಲ್ಲಿ “ರೋಹಿತ್ ಚಕ್ರತೀರ್ಥ ವೈವಿಧ್ಯಪೂರ್ಣ ಆಸಕ್ತಿಗಳಿರುವ ಹೊಸ ತಲೆಮಾರಿನ ಕನ್ನಡ ಲೇಖಕ. ಎಂದೆಂದೂ ಬಾಡದ ಮಲ್ಲಿಗೆಯಲ್ಲಿ ಇವರು ಜಿ.ಟಿ.ನಾ, ಕೆ.ಎಸ್.ನ, ತ.ಸು.ಶಾ, ಜಿ.ವೆಂಕಟಸುಬ್ಬಯ್ಯ ಇಂಥ ಲೇಖಕರನ್ನು, ಪಾ.ವೆಂ.,…
ಲೇಖಕರು: Ashwin Rao K P
September 02, 2021

‘ತಮಿಳುನಾಡಿನ ಅತಿ ಮುಖ್ಯವಾದ ಸಾಹಸ ಕ್ರೀಡೆ -ಜಲ್ಲಿ ಕಟ್ಟು. ಈ ಕ್ರೀಡೆಯ ಇತಿಹಾಸವನ್ನು ಕೆದಕುತ್ತಾ ಹೋದರೆ ಸುಮಾರು ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ. ಆ ಕಾಲದಿಂದ ಈಗಿನವರೆಗೂ ಮುಂದುವರೆದಿರುವ ಈ ಕ್ರೀಡೆ, ಕೇವಲ ಆಟವಲ್ಲ. ಇದೊಂದು ಜೀವನಶೈಲಿ. ಪ್ರಾಚೀನ ತಮಿಳು ಸಾಹಿತ್ಯವಾದ ‘ಕಲಿತ್ತೊಗೈ’ ನಲ್ಲಿ ಆಯರ್ ಗಳು ಬಾಳುವ ಮುಲ್ಲೈ ನೆಲದಲ್ಲಿ ನಡೆಯುವ ಜಲ್ಲಿಕಟ್ಟಿನ ಕುರಿತು ಸಾಕಷ್ಟು ವರ್ಣಿಸಲಾಗಿದೆ. ಆ ದಿನಗಳಲ್ಲಿ ಈ ಕ್ರೀಡೆಯ ಹೆಸರು ‘ಏರು ತಳುವುದರ್'. ಏರು ಎಂಬ ಶಬ್ದಕ್ಕೆ ಎತ್ತು ಅಥವಾ…
ಲೇಖಕರು: Ashwin Rao K P
August 31, 2021

ಅಯೋಧ್ಯಾ ಪ್ರಕಾಶನದವರ ೧೭ನೆಯ ಕೃತಿಯಾದ ‘ಮಾನಸೋಲ್ಲಾಸ' ಬರೆದವರು ರೋಹಿತ್ ಚಕ್ರತೀರ್ಥ. ಈಗಾಗಲೇ ರೋಹಿತ್ ಅವರ ಹಲವಾರು ಪುಸ್ತಕಗಳು ಬೆಳಕು ಕಂಡಿವೆ. ‘ಮಾನಸೋಲ್ಲಾಸ' ಎನ್ನುವುದು ಕವಿ-ಕಲಾವಿದರ ಕುರಿತ ಬರಹಗಳು. ಲೇಖಕರು ತಮ್ಮ ‘ಸವಿ ಸವಿ ನೆನಪೆ, ಸಾವಿರ ನೆನಪೆ !’ ಎಂಬ ಮುನ್ನುಡಿಯಲ್ಲಿ “‘ಮಾನಸೋಲ್ಲಾಸ' ಎಂಬುವುದು ಒಂದು ಸಂಸ್ಕೃತ ಕೃತಿಯ ಹೆಸರು. ಬರೆದದ್ದು ೧೨ನೆಯ ಶತಮಾನದಲ್ಲಿ. ಬರೆದವನು ಕನ್ನಡಿಗ. ಚಾಲುಕ್ಯ ದೊರೆ ಮೂರನೇ ಸೋಮೇಶ್ವರ. ಅದು ಆ ಕಾಲದ ವಿಶ್ವಕೋಶ. ಆದರೆ ನನಗೆ ಅಂಥ ದೊಡ್ದ…
ಲೇಖಕರು: Ashwin Rao K P
August 28, 2021

ರವಿ ಬೆಳಗೆರೆಯವರ ನಿಧನದ ಬಳಿಕ ಹೊರಬಂದ ಕೆಲವು ಪುಸ್ತಕಗಳಲ್ಲಿ ‘ರೇಖಾ’ ಪುಸ್ತಕವೂ ಒಂದು. ಬಹಳ ಸಮಯದಿಂದ ಹೊರಬರಲು ಕಾಯುತ್ತಿದ್ದ ಪುಸ್ತಕವು ಅವರ ನಿಧನದ ನಂತರ ಬೆಳಕು ಕಾಣುತ್ತಿರುವುದು ವಿಪರ್ಯಾಸವೇ ಸರಿ. ಆದರೂ ರವಿ ಬೆಳಗೆರೆಯವರು ರೇಖಾಳ ಜೀವನದ ಬಗ್ಗೆ ಬರೆಯಲು ಮಾಡಿದ ಸಿದ್ಧತೆಗಳನ್ನು ಮೆಚ್ಚಲೇ ಬೇಕು. ಸಾಮಾನ್ಯ ಜನರಿಗೆ ತಿಳಿಯದೇ ಇರುವ ಹಲವಾರು ಸಂಗತಿಗಳು ಹಾಗೂ ಭಾವಚಿತ್ರಗಳು ಈ ಪುಸ್ತಕದಲ್ಲಿವೆ.
ರೇಖಾ ೧೯೫೪ರಲ್ಲಿ ತಮಿಳು ಚಿತ್ರ ರಂಗದ ಆರಾಧ್ಯ ದೈವವಾಗಿದ್ದ ಜೆಮಿನಿ ಗಣೇಶನ್ ಮತ್ತು…