ಪುಸ್ತಕ ಪರಿಚಯ

ಲೇಖಕರು: Ashwin Rao K P
April 13, 2023
ಉಪನ್ಯಾಸಕರಾದ ಸುರೇಶ ಮುದ್ದಾರ ಇವರು ‘ಅರಮನೆಯಿಂದ ಅರಿವಿನರಮನೆಗೆ' ಎಂಬ ಸೊಗಸಾದ ಪುಟ್ಟ (೮೮ ಪುಟಗಳು) ಪುಸ್ತಕವನ್ನು ರಚಿಸಿದ್ದಾರೆ. ಗ್ರಾಮೀಣ ಬದುಕಿನ ತಲ್ಲಣಗಳು, ಬಡತನ, ಮಾನವೀಯ ಮೌಲ್ಯಗಳು, ಪೂರಕವಾದ ಪರಿಸರ, ಸುತ್ತ ಮುತ್ತ ಘಟಿಸುವ ಘಟನೆಗಳು, ಲೋಕವನ್ನು ಹೀಗೂ ನೋಡಿ ಎಂದು ತೋರಿಸುವಂತಹ ಕವನಗಳು ಇಲ್ಲಿವೆ. ಸುರೇಶ ಮುದ್ದಾರ ಅವರು ಮೌಲ್ಯವಾದ ಸಂದೇಶವನ್ನು ಮುಂದಿನ ತಲೆಮಾರಿಗೆ ದಾಟಿಸಬೇಕೆನ್ನುವ ಕಳಕಳಿ ಉಳ್ಳವರು. ಈ ಕವನ ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ ಅಕ್ಷತಾ ಕೃಷ್ಣಮೂರ್ತಿ ಇವರು…
ಲೇಖಕರು: addoor
April 13, 2023
“ಅಡಿಕೆ ಪತ್ರಿಕೆ” ಮಾಸಪತಿಕೆಯಲ್ಲಿ ಪ್ರಕಟಗೊಂಡ ಉಪಯುಕ್ತ ಆಯ್ದ ಮಾಹಿತಿ ತುಣುಕುಗಳ ಸಂಗ್ರಹವಾದ “ಹನಿಗೂಡಿ ಹಳ್ಳ” ಒಂದು ಅಪರೂಪದ ಪುಸ್ತಕ. ಆ ಪತ್ರಿಕೆಯ “ಹನಿಗೂಡಿ ಹಳ್ಳ” ಅಂಕಣದಿಂದ ಆಯ್ದ ೫೧ ಪುಟ್ಟ ಬರಹಗಳು ಇದರಲ್ಲಿವೆ. ಇದರ ಬಹುಪಾಲು ಬರಹಗಳು ರೈತರ ಅನುಶೋಧನೆಗಳು. ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ರೈತರೇ ಕಂಡುಕೊಂಡ ಈ ಅನುಭವ ಆಧಾರಿತ ವಿಧಾನಗಳನ್ನು ಇತರ ರೈತರು ಅಳುಕಿಲ್ಲದೆ ಬಳಸಬಹುದು. “ಒಕ್ಕಲುತನದಲ್ಲಿ ಎದುರಾಗುವ ಬೇರೆಬೇರೆ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ರೈತರ ಅನುಶೋಧನೆ ಹಾಗೂ…
ಲೇಖಕರು: Ashwin Rao K P
April 11, 2023
ಲೇಖಕ ಡಾ. ಗಜಾನನ ಶರ್ಮ ಅವರ ಕಾದಂಬರಿ-ಪುನರ್ವಸು. ಭಾರಂಗಿ ಎಂಬುದು ಲೇಖಕರ ಊರು. ಲಿಂಗನಮಕ್ಕಿಯಲ್ಲಿ ಶರಾವತಿಗೆ ಅಣೆಕಟ್ಟು ಕಟ್ಟುವಾಗ ಮುಳುಗಿದ ಭಾರಂಗಿ ಊರವರ ಬದುಕಿನ ಚಿತ್ರಣವನ್ನು ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಶರಾವತಿಯ ಹಿನ್ನೀರನ್ನು ಊರವರು ಶರಾವತಿ ಎಂದು ಕರೆಯುವುದಿಲ್ಲ ಬದಲಾಗಿ ‘ಮುಳುಗಡೆ ಹೊಳೆ’ ಎಂದೇ ಕರೆಯುವುದು. ಪ್ರಾಯಶಃ ತಮ್ಮವರ ಬದುಕನ್ನು ಮುಳುಗಿಸಿದ ಸಾತ್ತ್ವಿಕ ಸಿಟ್ಟು, ಅದಕ್ಕೆಂದೇ ಊರವರು ಹೀಗೆ ಮಾತನಾಡುತ್ತಾರೆ ಎಂದು ಲೇಖಕರು ಅಭಿಪ್ರಾಯಪಡುತ್ತಾರೆ. ಆಣೆಕಟ್ಟು…
April 10, 2023
ದೀಪಿಕಾ ಬಾಬುರವರ 'ಮೌನ ಕುಸುಮ' ಚೆನ್ನಾಗಿ ಮಾತನಾಡಿದ ಕುಸುಮವಾಗಿ ಹೊರ ಹೊಮ್ಮಿದೆ ಅವರ ಕವನಗಳಲ್ಲಿ ಆಳವಾದ ಬದುಕಿನ ಚಿತ್ರಣ ಆ ಬದುಕಿನ ಸುತ್ತ ಇರುವ ಸಮಸ್ಯೆ ಹಾಗೂ ಇತರೆ ಘಟನೆಗಳ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಲ್ಲಿ ಕವನಗಳು ಬಿಂಬಿತವಾಗಿವೆ. ಸೋತಿರುವ ಬದುಕಿಗೆ ಸಮಸ್ಯೆಗಳಿಗೆ ಜೀವನದ ಜಿಗುಪ್ಸೆಯನು ಹೊರಹಾಕಿರುವ 'ನೆಮ್ಮದಿಯ ತಾಳ' ಕವನದಲ್ಲಿ ನನಗೆ ಪರಿಹಾರ ಕೊಡು ಎಂದು ದೇವರಲಿ ಮೊರೆಯಿಡುವ ರೀತಿಯ ಧಾಟಿ ಚೆನ್ನಾಗಿ ಚಿತ್ರಿತವಾಗಿದೆ. ನಿನ್ನ ಬದುಕಲ್ಲಿ ಭರವಸೆಯ ಬದುಕನ್ನು ನನಸಾಗಿಸಲು…
ಲೇಖಕರು: Ashwin Rao K P
April 08, 2023
ವಿಕಾಸ ನೇಗಿಲೋಣಿ ಬರೆದ ‘ರಥಬೀದಿ ಎಕ್ಸ್ ಪ್ರೆಸ್ ಕೃತಿಗೆ ಪತ್ರಕರ್ತ, ಲೇಖಕ ಜೋಗಿ ಮುನ್ನುಡಿಯನ್ನು ಬರೆದಿದ್ದಾರೆ. ತಮ್ಮ ಮುನ್ನುಡಿಯಲ್ಲಿ “ಕ್ಲಾಸುಗಳಲ್ಲಿ ಎಂಟೆಂಟ್ಲಿ ಅರವತ್ತನಾಲ್ಕು ಅನ್ನುವುದನ್ನು ಕಲಿಸುತ್ತಾರೆ. ವ್ಯಾಕರಣ ಹೇಳಿಕೊಡುತ್ತಾರೆ. ಮೊದಲ ಸಲ ಶಕುಂತಲೆಯನ್ನು ನೋಡಿದ ದುಷ್ಯಂತನಿಗೆ ಏನಾಯಿತು ಅನ್ನುವುದನ್ನು ವಿವರಿಸುತ್ತಾರೆ. ಹೇಳಬೇಕಾದ್ದನ್ನು ಹೇಳಿಕೊಟ್ಟು ಮೇಷ್ಟರು ತಮ್ಮ ತಮ್ಮ ಮನೆ ಸೇರುತ್ತಾರೆ. ನಡುರಾತ್ರಿ ಒಂಟಿಯಾಗಿ ಮಲಗಿದ ಹುಡುಗನ ಪಕ್ಕದಲ್ಲಿಯೇ ಅದೆಲ್ಲಿಂದಲೋ ಬೆಳಕಿನ…
ಲೇಖಕರು: addoor
April 07, 2023
ನಮ್ಮಲ್ಲಿ ಹಲವರಿಗೆ ಪಂಚತಂತ್ರದ ಕತೆಗಳು ಗೊತ್ತು. ಆದರೆ, “ಒಂದು ಪಂಚತಂತ್ರದ ಕತೆ ಹೇಳಿ” ಎಂದರೆ ಬಹುಪಾಲು ಜನರು ತಡವರಿಸುತ್ತಾರೆ. ಅಂಥವರೆಲ್ಲ ಪಂಚತಂತ್ರದ ಕತೆಗಳನ್ನು ಕಲಿತು, ಮಕ್ಕಳಿಗೆ ಹೇಳುವ ಕೌಶಲ್ಯ ಬೆಳೆಸಿಕೊಳ್ಳಲು ಈ ಪುಸ್ತಕ ಸಹಾಯಕ. ಯಾಕೆಂದರೆ, ಇದರಲ್ಲಿರುವುದು 18 ಕತೆಗಳು ಮತ್ತು ಪ್ರತಿಯೊಂದು ಕತೆಗೆ ಒಂದು ಅಥವಾ ಎರಡು ಬಣ್ಣದ ಚಿತ್ರಗಳನ್ನು ಮುದ್ರಿಸಿರುವುದರಿಂದ ಕತೆಗಳನ್ನು ನೆನಪಿಟ್ಟುಕೊಳ್ಳಲು ಅನುಕೂಲ. ಇಂಗ್ಲಿಷಿನಲ್ಲಿ ದೆಹಲಿಯ ಮನೋಜ್ ಪಬ್ಲಿಕೇಷನ್ಸ್ ಪ್ರಕಟಿಸಿದ ಈ…