ಪುಸ್ತಕ ಪರಿಚಯ
ಲೇಖಕರು: Ashwin Rao K P
April 22, 2023

‘ಎಲ್ಲರ ಅಂಬೇಡ್ಕರ್’ ಎನ್ನುವ ಕೃತಿಯನ್ನು ಬರೆದಿರುವವರು ಎಚ್ ಟಿ ಪೋತೆ ಎನ್ನುವವರು. ಅಂಬೇಡ್ಕರ್ ಬಗ್ಗೆ ಈಗಾಗಲೇ ಸಾವಿರಾರು ಪುಸ್ತಕಗಳು ಹೊರಬಂದಿವೆ. ಆದರೂ ಈ ೮೮ ಪುಟಗಳ ಪುಟ್ಟ ಪುಸ್ತಕವು ಅಂಬೇಡ್ಕರ್ ಬಗ್ಗೆ ಇನ್ನಷ್ಟು ತಿಳಿಸಿಕೊಡಲಿದೆ ಎನ್ನುವ ವಿಶ್ವಾಸ ಲೇಖಕರದ್ದು. ಅವರು ತಮ್ಮ ನುಡಿಯಲ್ಲಿ ಹೇಳುವುದೇನೆಂದರೆ
‘ಅಂಬೇಡ್ಕರ್' ಎನ್ನುವ ಹೆಸರು ಇದೀಗ ಜಗತ್ತು ನೈಜ ಭಾರತವನ್ನು ಅರಿಯುವ ಬೆಳಕಿಂಡಿಯಾಗಿದೆ. 'ಜೈ ಭೀಮ್' ಎನ್ನುವುದು ಈ ದೇಶದ ಕೋಟ್ಯಾಂತರ ಜನರ ಶಕ್ತಿ ಮಂತ್ರವಾಗಿದೆ. ಅದೇ…
ಲೇಖಕರು: Ashwin Rao K P
April 20, 2023

‘ಮಾತೆಂದರೆ ಏನು ಗೂಗಲ್? ಇದು ನೂತನ ದೋಶೆಟ್ಟಿ ಇವರ ಕವನ ಸಂಕಲನ. ೭೮ ಪುಟಗಳ ಈ ಪುಟ್ಟ ಪುಸ್ತಕದ ಬಗ್ಗೆ ನೂತನ ಅವರೇ ಬರೆದ ಮಾತುಗಳು ಇಲ್ಲಿವೆ. ಓದುವಿರಾಗಿ...
“ಕವಿತೆ ನಾನು ಬರೆದದ್ದೋ ಅಥವಾ ಬರೆಸಿಕೊಳ್ಳಲು ನಾನೊಂದು ಮಾಧ್ಯಮವೋ? ಕಾಡುವ ಒಂದು ಪದ, ಒಂದು ಸಾಲು, ಒಂದು ನೋಟವೇ ನೆವವಾಗಿ, ಒಂದು ನಾವು, ಒಂದು ಆಘಾತ, ಒಂದು ಭಯ. ಒಂದು ಆತಂಕ, ಒಂದು ಸಾಲು, ಒಂದು ಅವಮಾನ, ಒಂದು ಸಾವು... ಇಂಥ ಬಹುತೇಕ ಋಣಾತ್ಮಕ ಸ್ವಾಮಿಗಳು ಒಮ್ಮೊಮ್ಮೆ ಒಲೆಯ ಮೇಲಿಟ್ಟ ನೀರಿನಂತೆ ಮರಳಿಸಿ, ಮರಳಿಸಿ, ಕೆಲವೊಮ್ಮೆ…
ಲೇಖಕರು: addoor
April 20, 2023

ಕನ್ನಡದ ಯುವ ಕತೆಗಾರರು ಬರೆದ 14 ಕತೆಗಳ ಸಂಕಲನ ಇದು. ಇಂತಹ ಸಂಕಲನಗಳು ವಿರಳವಾಗುತ್ತಿರುವ ಕಾಲದಲ್ಲಿ, ಇದನ್ನು “ನವಲೇಖನ ಮಾಲೆ"ಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಿಸಿದೆ.
ಕಳೆದ ಒಂದು ನೂರು ವರುಷಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ಸಣ್ಣ ಕತೆ ಎಂಬ ಸಾಹಿತ್ಯ ಪ್ರಕಾರ ವಿಸ್ತಾರವಾಗಿ ಬೆಳೆದಿದೆ. ಈ ಬೆಳವಣಿಗೆಗೆ ಮುಖ್ಯ ಕಾರಣ ಇಂಗ್ಲಿಷ್ ಸಾಹಿತ್ಯದ ಪ್ರಭಾವ. ಅದಕ್ಕಿಂತಲೂ ಮುಂಚೆ ಕನ್ನಡದಲ್ಲಿ ಸಣ್ಣ ಕತೆಯಂತಹ ಬರಹಗಳು ಇದ್ದವು. ಆದರೆ ಅವು ನೀತಿಬೋಧನೆಗೆ ಸೀಮಿತವಾಗಿದ್ದವು. ಕಳೆದ ಶತಮಾನದಲ್ಲಿ…
ಲೇಖಕರು: ಬರಹಗಾರರ ಬಳಗ
April 19, 2023

ಕಥೆಯ ಮೂಲಕವೇ ಅನೇಕ ವಿಷಯಗಳ ಮಾಹಿತಿ ನೀಡುವ ಕೆಲಸವನ್ನು ಲೇಖಕಿಯಾದ ಹೆಚ್ ವಿ ಮೀನಾ ಮಾಡಿದ್ದಾರೆ. ಪರಿಸರಕ್ಕೆ ಸಂಬಂಧಿಸಿದ ವಿಶೇಷ ದಿನಗಳು, ಅವುಗಳ ಮಹತ್ವ , ಪರಿಸರಕ್ಕೆ ಸಂಬಂಧಿಸಿದ ವೃತ್ತಿ ಜೀವನವನ್ನು ಹೇಗೆ ಬೆಳೆಸಬಹುದೆನ್ನುವ ಉದಾಹರಣೆಗಳನ್ನು ಕೊಟ್ಟಿದ್ದಾರೆ. ಮಕ್ಕಳಿಗೆ ಶುಚಿತ್ವದ ಮಹತ್ವವನ್ನು ಬೋಧಿಸುವ, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವ, ದುಶ್ಚಟಗಳಿಂದ ಆಗುವ ಹಾನಿಗಳನ್ನು ಕಥೆಯ ರೂಪದಲ್ಲಿ ವಿವರಿಸಿದ್ದಾರೆ.
“ಹಸಿರು ಮೂಡಲಿ” ಎಂಬ ಹೆಚ್.ವಿ ಮೀನಾ ಅವರ ಮಕ್ಕಳ ಪುಸ್ತಕ.…
ಲೇಖಕರು: Ashwin Rao K P
April 18, 2023

ಆಧ್ಯಾತ್ಮಿಕ ಪ್ರವಚನಗಳನ್ನು ನೀಡುವುದರಲ್ಲಿ ಗೌರ ಗೋಪಾಲ ದಾಸ ಇವರದ್ದು ಎತ್ತಿದಕೈ. ಸೊಗಸಾದ ಪುಟ್ಟ ಪುಟ್ಟ ಕಥೆಗಳೊಂದಿಗೆ ಹಿತವಚನಗಳನ್ನು ಬೆರೆಸಿ ಓದುಗರಿಗೆ ಹಾಗೂ ಕೇಳುಗರಿಗೆ ಉಣ ಬಡಿಸುವುದರಲ್ಲಿ ಇವರಿಗೆ ಇವರೇ ಸಾಟಿ. ಗೌರ ಗೋಪಾಲ ದಾಸ ಅವರು ಆಂಗ್ಲ ಭಾಷೆಯಲ್ಲಿ ಬರೆದ “Life’s Amazing Secrets” ಎಂಬ ಪುಸ್ತಕವನ್ನು “ಮಹಾ ವಿಸ್ಮಯ" ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ ‘ತಾಷ್ಕೆಂಟ್ ಡೈರಿ’ ಕೃತಿಯ ಖ್ಯಾತಿಯ ಎಸ್ ಉಮೇಶ್ ಇವರು. ಇವರ ಅನುವಾದವೆಂದರೆ ಅದು ಎಲ್ಲೂ ಬೇರೆ ಭಾಷೆಯಿಂದ…
ಲೇಖಕರು: Ashwin Rao K P
April 15, 2023

‘ನಮ್ಮ ಸ್ಕೂಲ್ ಡೈರಿ' ಪುಸ್ತಕವನ್ನು ಬರೆದವರು ಖ್ಯಾತ ಲೇಖಕರಾದ ಬೇದ್ರೆ ಮಂಜುನಾಥ ಇವರು. ಇವರು ಸುಮಾರು ೧೭೫ ಪುಟಗಳ ಈ ಪುಸ್ತಕದಲ್ಲಿ ಮಕ್ಕಳ ಸಮಗ್ರ ವಿಕಾಸಕ್ಕೆ ಬೇಕಾದ ಹಲವಾರು ಚಟುವಟಿಕೆಗಳನ್ನು ಬರೆದಿದ್ದಾರೆ. ಅವರೇ ತಮ್ಮ ಮುನ್ನುಡಿಯಲ್ಲಿ ಬರೆದಂತೆ “ ಇದು ಬೆಳೆಯುವ ಪುಸ್ತಕ! ಜ್ಞಾನ-ವಿಜ್ಞಾನ ಸಂವಾಹಕ!”. ಲೇಖಕರ ಮಾತಿನಿಂದ ಆಯ್ದ ಭಾಗಗಳು ನಿಮಗಾಗಿ...
“ಮಾಹಿತಿ ಮಹಾಪೂರ ಹರಿದು ಬಂದಂತೆಲ್ಲಾ ಈ ಪುಸ್ತಕದ ಗಾತ್ರವೂ ಹಿಗ್ಗುತ್ತದೆ. ಹೊಸ ವಿಷಯಗಳನ್ನು ತಿಳಿಯುವ ತವಕ ಹೆಚ್ಚುತ್ತದೆ.…