ಮೌನ ಕುಸುಮ

ಮೌನ ಕುಸುಮ

ಪುಸ್ತಕದ ಲೇಖಕ/ಕವಿಯ ಹೆಸರು
ದೀಪಿಕಾ ಬಾಬು
ಪ್ರಕಾಶಕರು
ಯುವ ವಾಗ್ಮಿ ಬಳಗ, ಮಂಡ್ಯ
ಪುಸ್ತಕದ ಬೆಲೆ
ರೂ. ೮೦.೦೦, ಮುದ್ರಣ ೨೦೨೨

ದೀಪಿಕಾ ಬಾಬುರವರ 'ಮೌನ ಕುಸುಮ' ಚೆನ್ನಾಗಿ ಮಾತನಾಡಿದ ಕುಸುಮವಾಗಿ ಹೊರ ಹೊಮ್ಮಿದೆ ಅವರ ಕವನಗಳಲ್ಲಿ ಆಳವಾದ ಬದುಕಿನ ಚಿತ್ರಣ ಆ ಬದುಕಿನ ಸುತ್ತ ಇರುವ ಸಮಸ್ಯೆ ಹಾಗೂ ಇತರೆ ಘಟನೆಗಳ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಲ್ಲಿ ಕವನಗಳು ಬಿಂಬಿತವಾಗಿವೆ.

ಸೋತಿರುವ ಬದುಕಿಗೆ ಸಮಸ್ಯೆಗಳಿಗೆ ಜೀವನದ ಜಿಗುಪ್ಸೆಯನು ಹೊರಹಾಕಿರುವ 'ನೆಮ್ಮದಿಯ ತಾಳ' ಕವನದಲ್ಲಿ ನನಗೆ ಪರಿಹಾರ ಕೊಡು ಎಂದು ದೇವರಲಿ ಮೊರೆಯಿಡುವ ರೀತಿಯ ಧಾಟಿ ಚೆನ್ನಾಗಿ ಚಿತ್ರಿತವಾಗಿದೆ. ನಿನ್ನ ಬದುಕಲ್ಲಿ ಭರವಸೆಯ ಬದುಕನ್ನು ನನಸಾಗಿಸಲು ಶ್ರಮಪಟ್ಟು ಮೇಲೇಳು ಎನ್ನುವ ಮಾತನ್ನು 'ತತ್ವಜ್ಞಾನಿನಿ' ಮಾನವನನ್ನು ತಟ್ಟಿ ಹೇಳಿದೆ. ತನ್ನ ಸಖಿಗೆ ಬದುಕಿನಲಿ ಬೇಸರ ಬೇಡ ಕಷ್ಟ -ಸುಖ ಏನೆಬರಲಿ ಎದುರಿಸೋಣ ಮಕ್ಕಳಿಲ್ಲದಿದ್ದರೂ ಪರವಾಗಿಲ್ಲ ನನಗೆ ನೀನು ನಿನಗೆ ನಾನು ಮಗುವಿನಂತೆ ಇದ್ದುಜೀವನ ಸಾಗಿಸೋಣ ಎನ್ನುವ ಮಾತು 'ಹೊರಡುವ ಸಖಿ' ಕವನದಲಿ ಮನಮುಟ್ಟುವಂತೆ ಹೇಳಿದೆ.

ನನ್ನ ಬದುಕು ಪ್ರಕೃತಿಯ ಮಡಿಲಲ್ಲಿ ಸೇರಬೇಕು ಮನಕೆ ಹಿತವಾಗುವಷ್ಟು ದೂರ ಸಾಗಬೇಕೆನ್ನುವ ಮನಸಿನ ತೊಳಲಾಟ 'ಅನಂತದಿಚೆಗೆ' ಕವನ ಸಾರಿ ಹೇಳಿದೆ. ಕಾಣೆಯಾದ ಹಸುವಿನ ಹುಡುಕಾಟ ಆ ಮೂಕ ಪ್ರಾಣಿಯ ಮೇಲಿನ ಮಮಕಾರವನು ತಮ್ಮ ಕವನದಲಿ ತಮ್ಮ ಪ್ರಾಣಿಯ ಮಮಕಾರವನು ಎತ್ತಿ ಹಿಡಿದಿದೆ . 'ಅಂದು -ಇಂದು' ಕವನದಲಿ ಜೀವನದ ಚಿತ್ರಣ ಇಂದು ಎತ್ತ ಸಾಗಿದೆ ಅದು ಹೇಗೆ ಬಿಂಬಿತವಾಗಿದೆ ಎಂದು ಹೇಳುವಲ್ಲಿ ಹಾಸು ಹೊಕ್ಕಾಗಿ ಬಿಂಬಿತವಾಗಿದೆ ಆಧುನಿಕ ಯುಗದಲಿ ನಿಜ ಭಕ್ತನಿಗಿಂತ ಡಂಬಾಚಾರದ ಭಕ್ತರನು ಎಲ್ಲೆಡೆ ಕಾಣುತ್ತೇವೆ ನಿಜ ಭಕ್ತರನು ಹುಡುಕ ಬೇಕಿದೆ ಎನ್ನುವ ಮಾತು ಹೇಳಿದೆ

ನನ್ನ ಮನವು ಸದಾ ಕೃಷ್ಣನ ಸೇವೆಯಲಿ ತೊಡಗಿಸಿಕೊಂಡು ಕೃಷ್ಣನಿಗೆ ಸದಾ ಹತ್ತಿರವಾಗಲು ನನ್ನನ್ನು ಬೆಣ್ಣೆಯಂತೆ ಮಾಡಿ ಅವನ ಚರಣಾರವಿಂದದಲ್ಲಿ ಒಂದಾಗಲು ಪರಿತಪಿಸುವ ಚಿತ್ರಣ ಸೊಗಸಾಗಿ ಕವನ ಹಿಡಿದಿಡುವಲ್ಲಿ ಯಶಸ್ಸು ಕಂಡಿದೆ. ವೇಶ್ಯೆಯೊಬ್ಬಳ ನೈಜ ಚಿತ್ರಣವನು ಎಳೆಎಳೆಯಾಗಿ ಚಿತ್ರಿಸಿ ನನಗೂ ಸಮಾಜದಲ್ಲಿ ಬಾಳಲು ಬಿಡಿ ಎಂದು ಕೇಳುವ ಪರಿಯನ್ನು ಚಿತ್ರಿಸುವಲ್ಲಿ ದೀಪಿಕಾ ಅವಳ ಬಾಳಲಿ ದೀಪಾ ಹಚ್ಚುವಂತೆ ಹೇಳಿ ಮೌನವಾಗಿ ಮಾತನಾಡಿ, ಮೌನಕುಸುಮವನ್ನು ಮಾತನಾಡಿಸಿ ಕುಸುಮ ಅರಳುವಂತೆ ಮಾಡಿ ತಮ್ಮ ಕವನ ಸಂಕಲನಕ್ಕೆ ಒಂದು ಮೆರಗು ಕೊಟ್ಟಿದ್ದಾರೆ.

- ಹೆಚ್. ಸತೀಶ್ ಕುಮಾರ್