ಪುಸ್ತಕ ಸಂಪದ

  • ‘ಸಂಶೋಧನ ಸಂಪದ' ಎನ್ನುವುದು ಕ್ಷಮಾ ವಿ ಭಾನುಪ್ರಕಾಶ್ ಅವರ ನೂತನ ಕೃತಿ. ೧೫೮ ಪುಟಗಳ ಈ ಪುಸ್ತಕವು ಸಂಶೋಧನೆಗಳನ್ನು ನಡೆಸುವ ಅಗತ್ಯತೆ ಮತ್ತು ಈ ಸಂಶೋಧನೆಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯದ ಬಗ್ಗೆ ಬಹಳಷ್ಟು ವಿಷಯಗಳನ್ನು ತಿಳಿಸಿಕೊಡುತ್ತದೆ. ಲೇಖಕರಾದ ಟಿ. ಜಿ. ಶ್ರೀನಿಧಿ ಇವರು ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಅವರು ಬರೆದ ಮುನ್ನುಡಿಯ ಆಯ್ದ ಭಾಗಗಳನ್ನು ಇಲ್ಲಿ ನೀಡಲಾಗಿದೆ... 

    “ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳ ವೇಗ ಬೆರಗುಗೊಳಿಸುವಂಥದ್ದು. ನಮ್ಮ ಬದುಕನ್ನು ಅಗಾಧವಾಗಿ ಪ್ರಭಾವಿಸುವ ಹಲವಾರು ವಿಷಯಗಳನ್ನು ಕುರಿತ ಸಂಶೋಧನೆಗಳು ಇಲ್ಲಿ ಸದಾಕಾಲವೂ ನಡೆಯುತ್ತಲೇ ಇರುತ್ತವೆ.ಇಂತಹ ಸಂಶೋಧನೆಗಳನ್ನು ನಡೆಸುವುದು…

  • ‘ತುಷಾರ ಹಾರ' ಇದು ಲೇಖಕಿಯಾದ ಶ್ಯಾಮಲಾ ಮಾಧವ ಅವರ ಕಣ್ಣೀರ ಕಥೆ. ಬರೆದೂ ಬರೆದು ನೋವನ್ನು ಹಗುರ ಮಾಡಿ ಕೊಂಡ ತಾಯಿಯ ಕಥೆಯಿದು. ಕಂದನ ನೋವಿನ ನುಡಿ ಹಾರವೇ ಈ ‘ತುಷಾರ ಹಾರ’ ಎನ್ನುತ್ತಾರೆ ಶ್ಯಾಮಲಾ ಮಾಧವ ಇವರು. ತಮ್ಮ ಕೃತಿಗೆ ಅವರು ಬರೆದ ಮುನ್ನುಡಿಯ ಆಯ್ದ ಭಾಗ ಇಲ್ಲಿದೆ... 

    “ನನ್ನ ಪಾಲಿಗೆ ಸರ್ವಸ್ವವೂ ಆಗಿದ್ದ ನನ್ನ ಕಂದನನ್ನು ಕಳೆದುಕೊಂಡ ನೋವನ್ನು ಅಕ್ಷರಕ್ಕಿಳಿಸಿ ಹೆಣೆದ ನುಡಿಹಾರವೇ ಈ 'ತುಷಾರ ಹಾರ'. ನೆನೆದಷ್ಟೂ ಗಾಢವಾಗುವ ಈ ನೋವನ್ನು ಬರೆದು ಹಗುರಾಗುವುದೆಂದಿದೆಯೇ? ಎಷ್ಟು ತೇಜೋಮಯನೋ, ಅಷ್ಟೇ ಸರಳನೂ ಆಗಿ ಬಾಳಿ, ಪರಿಚಿತರ ಹೃದಯಗಳಲ್ಲಿ ಉಳಿದು ಹೋದ ನನ್ನ ತುಷಾರ್‌ನನ್ನು ನುಡಿಹಾರವಾಗಿ ನಿಮ್ಮ ಕೈಗಳಲ್ಲಿರಿಸಿರುವೆ.

  • ವಿವಿಧ ಯಕ್ಷಗಾನ ಪ್ರಕಾರಗಳ ಬಗ್ಗೆ ಮಾಹಿತಿ ನೀಡುವ ‘ಮಣಿಹಾರ' ಎಂಬ ಪುಸ್ತಕವನ್ನು ಬರೆದಿದ್ದಾರೆ ಲೇಖಕರಾದ ಎಸ್ ಎನ್ ಪಂಜಾಜೆ. ಸುಮಾರು ೧೬೦ ಪುಟಗಳ ಈ ಕೃತಿಯು ಯಕ್ಷಗಾನ ಪ್ರೇಮಿಗಳಿಗೆ ಹಾಗೂ ಯಕ್ಷಗಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಜ್ಞಾನಾಸಕ್ತರಿಗೆ ಬಹಳ ಉಪಕಾರಿಯಾಗಿದೆ.  “ಯಕ್ಷಗಾನ ಮತ್ತು ಅದರ ಸೋದರ ಕಲೆಗಳನ್ನು ಒಟ್ಟಾಗಿ ಕಂಡು ಅವುಗಳಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮುಂದಿನ ಕಲಾಸಕ್ತರಿಗೆ ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಪ್ರಸ್ತುತ ಯಕ್ಷಗಾನ ಕಲೆಯಲ್ಲಿನ ಜಾಗತೀಕರಣದ ಪ್ರಭಾವದಿಂದಾಗಿರುವ ಸಣ್ಣಪುಟ್ಟ ತಲ್ಲಣಗಳಿಗೆ ಉತ್ತರಿಸುವ ಕಾರ್ಯ ಆಗಬೇಕಿದೆ" ಎನ್ನುತ್ತಾರೆ ಲೇಖಕ ಎಸ್. ಎನ್‌ ಪಂಜಾಜೆ. ಅವರು ತಮ್ಮ ಮಾತಿನಲ್ಲಿ ಹೇಳಿದ ವಿಷಯಗಳ ಆಯ್ದ ಭಾಗ ಇಲ್ಲಿದೆ...

  • ನಮ್ಮ ದೇಶ ಭಾರತವು ಸ್ವಾತಂತ್ರ್ಯ ಗಳಿಸಿ 75 ವರುಷಗಳು ದಾಟಿವೆ. ಇದೀಗ ಎಪ್ರಿಲ್ 2023ರಲ್ಲಿ ಭಾರತವು (ಚೀನಾವನ್ನು ಹಿಂದಿಕ್ಕಿ) ಜಗತ್ತಿನ ಅತ್ಯಧಿಕ ಜನಸಂಖ್ಯೆಯ ದೇಶವಾಗಿದೆ. ಈ ಸನ್ನಿವೇಶದಲ್ಲಿ ಇಂತಹ ಪುಸ್ತಕವೊಂದರ ಅಧ್ಯಯನವು ಭಾರತವು ಹಾದು ಬಂದಿರುವ ಹಾದಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕ. ಯಾಕೆಂದರೆ ಭಾರತದ ವಿವಿಧ ಪ್ರದೇಶಗಳ ಹತ್ತು ಹಳ್ಳಿಗಳ 50 ವರುಷಗಳ ಹಿಂದಿನ ಚಿತ್ರಣವನ್ನು ಈ ಪುಸ್ತಕ ನಮಗೆ ಒದಗಿಸುತ್ತದೆ.

    ಪ್ರಸಿದ್ಧ ಸಾಮಾಜಿಕ ಶಾಸ್ತ್ರಜ್ನರಾದ ಲೇಖಕರು ಮುನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ: "ನಮ್ಮ ದೇಶದಲ್ಲಿ ಸುಮಾರು 5,58,000 ಹಳ್ಳಿಗಳಿದ್ದು ಈ ಹಳ್ಳಿಗಳಲ್ಲಿ ದೇಶದ ಜನಸಂಖ್ಯೆಯ ಶೇಕಡ 80ರಷ್ಟು ಜನ ವಾಸವಾಗಿದ್ದಾರೆ. ಇವರೆಲ್ಲರ ಮುಖ್ಯ ವೃತ್ತಿಯು ಒಕ್ಕಲುತನವೆ ಆಗಿದೆ. ಪಾಶ್ಚಿಮಾತ್ಯರ ದೃಷ್ಟಿಯಿಂದ ಈ…

  • ಶುಭಶ್ರೀ ಭಟ್ಟ ಇವರು ಬರೆದ ‘ಹಿಂದಿನ ನಿಲ್ದಾಣ' ಕೃತಿಯನ್ನು ಓದಿದಾಗ ನನಗೆ ಅನಿಸಿದ್ದು ಈ ಪುಸ್ತಕವು ನಮ್ಮ ಬಾಲ್ಯದ ನೆನಪುಗಳನ್ನು ಇಣುಕುವಂತೆ ಮಾಡುವ ಕೃತಿ ಎಂದು. “ಮಕ್ಕಳು ಬದುಕನ್ನು ತೀವ್ರವಾಗಿ ಬದುಕುತ್ತಾರೆ. ಅವರಿಗೆ ಎಲ್ಲವೂ ವಿಶೇಷ ಮತ್ತು ಎಲ್ಲವೂ ಊಹಿಸಿಕೊಳ್ಳುವಷ್ಟೆ ಸಲೀಸು ಎಂಬ ಮಕ್ಕಳ ಮನೋಪ್ರಜ್ಞಾವಸ್ಥೆಯನ್ನು ರೂಪಿಸುವಲ್ಲಿ ಶುಭಶ್ರೀ ಯಶಸ್ವಿಯಾಗಿದ್ದಾರೆ” ಎನ್ನುವುದು ನನ್ನ ಅನಿಸಿಕೆ.

    ಸಖಿ ಶುಭಶ್ರೀ ಭಟ್ಟ ಅವರ 'ಹಿಂದಿನ ನಿಲ್ದಾಣ' ದಲ್ಲಿ ಒಟ್ಟು 23 ಲಲಿತ ಪ್ರಬಂಧಗಳಿದ್ದು ಒಂದೊಂದು ಲೇಖನ ಓದುವಾಗಲೂ ಮನಸ್ಸು ಬಾಲ್ಯಕ್ಕೆ ಪ್ರಯಾಣ ಬೆಳೆಸುತ್ತದೆ. ಬಾಲ್ಯದ ನೆನಪುಗಳ ಹಂದರವೇ ಈ ಹಿಂದಿನ ನಿಲ್ದಾಣ. ಲೇಖಕಿ ಶುಭಶ್ರೀ ಅವರ ನೆನಪುಗಳ ದಿಬ್ಬಣವನ್ನು…

  • ನೂರ್ ಜಹಾನ್ ಅವರು ಬರೆದ ನೂತನ ಕಥಾ ಸಂಕಲನ -ಪರಿವರ್ತನೆ. ೧೩೬ ಪುಟಗಳ ಈ ಪುಟ್ಟ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಕೇಶವ ಮಳಗಿ ಇವರು. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳ ಆಯ್ದ ಭಾಗ ಇಲ್ಲಿದೆ...

    “ನೂರ್‌ ಜಹಾನ್‌ ಅವರದು ಅದಮ್ಯ ಸಾಹಿತ್ಯ ಪ್ರೀತಿಯ ಜೀವ. ಅವರು ಈಗಾಗಲೇ ಪ್ರಕಟಿಸಿರುವ ಕಥಾ ಸಂಕಲನ, ಕಾವ್ಯ ಸಂಗ್ರಹಗಳು ಈಗ ಪ್ರಕಟಿಸುತ್ತಿರುವ ಹೊಸ ಕಥಾಕೃತಿ ನೂರ್‌ ಜಹಾನ್‌ ಅವರ ಸಾಹಿತ್ಯ ರಚನೆಯ ಉತ್ಸುಕತೆಯನ್ನೇ ತೋರಿಸುತ್ತದೆ. ದಣಿವೇ ಇಲ್ಲದ ಈ ಉತ್ಸಾಹವೇ ಅವರಿಂದ ಹೊಸ ಕಥೆಗಳನ್ನು ಬರೆಯಿಸುತ್ತಿದೆ. ಸಮಾಜದಲ್ಲಿ ತಾವು ನಿತ್ಯ ಕಾಣುವ ಸಾಮಾನ್ಯ ಜನರ ಬದುಕಿನ ಹೋರಾಟ, ನೆಮ್ಮದಿ-ಸುಖಕ್ಕಾಗಿ ಈ ಜನ ಪಡುವ ಕಷ್ಟ, ಸಹಿಸುವ ನೋವು…

  • ಹಿರಿಯ ಗಾಯಕಿ ಹೆಚ್ ಆರ್ ಲೀಲಾವತಿ ಅವರ ಆತ್ಮಕಥೆ “ಹಾಡಾಗ ಹರಿದಾಳೆ" ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಅದ್ಭುತವಾದ ಹಾಡುಗಳನ್ನು ಹಾಡಿರುವ ಲೀಲಾವತಿ ಅವರ ಸಂಗೀತ ಕಲಿಕೆಯ ಪಯಣ ಸುಗಮವಾಗಿರಲಿಲ್ಲ. ಹಾಡುವುದನ್ನು ಕಲಿಯಬೇಕೆನ್ನುವ ಹುಚ್ಚು (ಅವರೇ ಬರೆದಂತೆ) ಅವರನ್ನು ಅವರ ಗುರುಗಳು ನೀಡುತ್ತಿದ್ದ ಎಲ್ಲಾ ಕಿರುಕುಳಗಳನ್ನು ಸಹಿಸುವಂತೆ ಮಾಡಿತು. ಅವರ ಗುರುಗಳು ನೀಡುತ್ತಿದ್ದ ಶಿಕ್ಷೆಗಳು, ಕಿರುಕುಳಗಳು, ಕ್ರೌರ್ಯಗಳನ್ನು ಓದುವಾಗ ಕಣ್ಣಲ್ಲಿ ನೀರು ಜಿನುಗುತ್ತದೆ. ಸಾಧನೆಯ ಹಾದಿಯಲ್ಲಿ ಇವೆಲ್ಲವನ್ನೂ ಮರೆತ ಲೀಲಾವತಿ ಅವರು ಬಹಳ ಸೊಗಸಾಗಿ ತಮ್ಮ ಪಯಣವನ್ನು ಈ ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ಈ ಹೊತ್ತಗೆಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಕವಿ ಹೆಚ್ ಎಸ್ ವೆಂಕಟೇಶಮೂರ್ತಿ. ಅವರು ಬರೆದ ಮುನ್ನುಡಿಯ…

  • ‘ಇವಳ ಭಾರತ' ಎನ್ನುವುದು ರೂಪ ಹಾಸನ ಇವರ ನವ ಕೃತಿ. ಈ ಕೃತಿಯಲ್ಲಿ ಅವರು ಹೆಣ್ಣಿನ ಸ್ವಾಭಿಮಾನ, ಬಯಕೆ, ಧೈರ್ಯತನ ಮೊದಲಾದ ವಿಷಯಗಳ ಬಗ್ಗೆ ಬಹಳ ಸೊಗಸಾಗಿ ವಿವರಿಸಿದ್ದಾರೆ. ಅದಕ್ಕೆಂದೇ ಅವರು ‘ಹೆಣ್ಣೊಡಲ ಹಾಡು ಪಾಡಿನ ಗುಚ್ಛ’ ಈ ಕೃತಿ ಎಂದು ಹೇಳಿದ್ದಾರೆ. ರೂಪ ಹಾಸನ ಇವರು ತಮ್ಮ ಪುಸ್ತಕಕ್ಕೆ ಬರೆದ ಮುನ್ನುಡಿಯಿಂದ ಆಯ್ದ ಕೆಲವು ಸಾಲುಗಳು ಇಲ್ಲಿವೆ. ಓದುವಂತವರಾಗಿ...

    “ನಮ್ಮ ಕಣ್ಣಿಗೆ ಕಾಣುವುದೆಲ್ಲಾ ಎಂದಿಗೂ ಅರ್ಧ ಸತ್ಯ ಮಾತ್ರ! ಇತ್ತೀಚಿನ ವರ್ಷಗಳಲ್ಲಿ, ಎಷ್ಟೊಂದು ಪ್ರಮಾಣದಲ್ಲಿ ಹೆಣ್ಣುಮಕ್ಕಳು ಶಾಲೆ, ಕಾಲೇಜುಗಳಲ್ಲಿ ಓದುತ್ತಿರುವುದು, ವಿವಿಧ ಕಚೇರಿ ಕೆಲಸಗಳಲ್ಲಿ ತೊಡಗಿರುವುದು ಕಾಣುತ್ತಿದೆ. ಚೆಂದಗೆ ಸಿಂಗರಿಸಿಕೊಂಡು, ಬಣ್ಣ ಬಣ್ಣದ ಬಟ್ಟೆ ತೊಟ್ಟು ಸ್ಕೂಟರ್…

  • ನಾವರಿಯದ ಲೋಕವೊಂದಿದೆ. ಅದು ಕೀಟಗಳ ಹುಟ್ಟು-ಬದುಕು-ಸಾವಿನ ಲೋಕ. ಈ ಅದ್ಭುತ ಲೋಕವನ್ನು ಭೂಲೋಕದ ಜನರಿಗೆ ಪರಿಚಯಿಸಿದವನು ಫ್ರೆಂಚ್ ಕೀಟಶಾಸ್ತ್ರಜ್ನ ಮತ್ತು ಪ್ರಸಿದ್ಧ ಲೇಖಕ ಜೀನ್ ಹೆನ್ರಿ ಫೇಬರ್. ಅದನ್ನೂ ಫೇಬರನನ್ನೂ ಕನ್ನಡಿಗರಿಗೆ ಪರಿಚಯಿಸಿದವರು ಬಿ.ಎಸ್. ರುಕ್ಕಮ್ಮ.

    ಮಕ್ಕಳಾದ ಬಾಲು, ವಸಂತಿ ಮತ್ತು ಪುಟ್ಟ ಬಾಲಕ ಶ್ರೀನಿವಾಸನೊಡನೆ ಅವರ ಹಿರಿಯಕ್ಕ ಶ್ರೀಮತಿ ನಡೆಸುವ ಸಂಭಾಷಣೆಯ ರೂಪದಲ್ಲಿ ಫೇಬರನ ಕೀಟಲೋಕದ ವಿಸ್ಮಯಗಳನ್ನು ಈ ಪುಸ್ತಕದಲ್ಲಿ ಲೇಖಕಿ ತೆರೆದಿಡುತ್ತಾರೆ.

    “ಅಬ್ಬಬ್ಬಾ, ನನ್ನ ಕೆನ್ನೆ ಪಕ್ಕದಲ್ಲೇ ಹಾರೋಯ್ತು. ಕೆಂಪುದು. ಸದ್ಯ ಕಚ್ಚಲಿಲ್ಲ. ಅಕ್ಕ, ಅದೆಂಥ ಹುಳು?” ಎಂಬ ಪ್ರಶ್ನೆಗೆ ಉತ್ತರವಾಗಿ "ಅದು ಕಣಜ (ಡಿಗ್ಗರ್ ವಾಸ್ಪ್). ಅವುಗಳ ಕಥೆ ಸೊಗಸು. ಅದು ನೆಲ ತೋಡಿ ಗೂಡು ಮಾಡುತ್ತೆ ...” ಎಂಬ…

  • ಶ್ರೀಧರ ಬಳಗಾರ ಅವರ ವಿನೂತನ ಕಾದಂಬರಿ ‘ವಿಸರ್ಗ'. ಉತ್ತರ ಕನ್ನಡದ ಗ್ರಾಮೀಣ ಭಾಗದಲ್ಲಿ ನಡೆಯುವ ಕುತೂಹಲಕಾರಿ ಕಥನ ಈ ಕಾದಂಬರಿಯಲ್ಲಿದೆ. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ರಾಜೇಂದ್ರ ಚೆನ್ನಿ ಇವರು. ಇವರು ಬರೆದ ಮುನ್ನುಡಿಯ ಆಯ್ದ ಭಾಗಗಳು ಇಲ್ಲಿವೆ…

    “ಶ್ರೀಧರ ಬಳಗಾರ ಅವರ ‘ವಿಸರ್ಗ’ ಇತ್ತೀಚೆಗೆ ನಾನು ಓದಿದ ಪ್ರಭಾವಿ ಕಾದಂಬರಿಗಳಲ್ಲಿ ಒಂದು. ಓದಿದ ಮೇಲೆ ಬಹುಕಾಲ ತನ್ನ ವಸ್ತುವಿನ ಗಾಂಭೀರ್ಯ ಮತ್ತು ಹರಹು, ಆ ವಸ್ತುವಿನ ನಿರ್ವಹಣೆಯಲ್ಲಿ ಕಂಡುಬರುವ ಆಳ, ತೀವ್ರತೆ ಹಾಗೂ ವಸ್ತುನಿಷ್ಠತೆಯಿಂದಾಗಿ ಮನಸ್ಸಿನಲ್ಲಿ ನೆಲೆ ಮಾಡುವ ಕೃತಿ ಇದಾಗಿದೆ. ಹಾಗೆ ನೋಡಿದರೆ ಇದು ಪ್ರಯೋಗಶೀಲವಾದ ಹೊಸಬಗೆಯ ನಿರೂಪಣಾ ತಂತ್ರಗಳನ್ನಾಗಲಿ, ಕಥನದ ವಿನ್ಯಾಸವನ್ನಾಗಲೀ…