ಪುಸ್ತಕ ಸಂಪದ

  • ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಬಗ್ಗೆ ನಿವೃತ್ತ ಡಿ ಜಿ ಪಿ ಡಾ. ಡಿ.ವಿ.ಗುರುಪ್ರಸಾದ್ ಅವರು ಬರೆದ ಪುಸ್ತಕವೇ “ಧರ್ಮಾತ್ಮ". ಸಜ್ಜನ ರಾಜಕಾರಣಿ ಎಂದು ಹೆಸರುವಾಸಿಯಾಗಿದ್ದ ಧರಂಸಿಂಗ್ ಸಮ್ಮಿಶ್ರ ಸರಕಾರದ ನೇತೃತ್ವವನ್ನು ವಹಿಸಿದ್ದರು. ಅಧಿಕ ಸಮಯ ಮುಖ್ಯಮಂತ್ರಿಯಾಗಿರಲು ಸಾಧ್ಯವಾಗದೇ ಹೋದರೂ ಹಲವಾರು ವರ್ಷ ಶಾಸಕರಾಗಿ, ಮಂತ್ರಿಯಾಗಿ, ಲೋಕಸಭಾ ಸದಸ್ಯರಾಗಿ ಕರ್ನಾಟಕ ರಾಜ್ಯಕ್ಕೆ ಸಲ್ಲಿಸಿದ ಸೇವೆ ಮರೆಯಲು ಸಾಧ್ಯವಿಲ್ಲ. ಧರಂಸಿಂಗ್ ಅವರ ಊರಿನವರೇ ಆದ ಸಾಹಿತಿ ದೇವು ಪತ್ತಾರ ಇವರು ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಆಯ್ದ ಸಾಲುಗಳು ನಿಮ್ಮ ಓದಿಗಾಗಿ... 

    “ಕೆಲದಿನಗಳ ಹಿಂದೆ ನಿವೃತ್ತ ಡಿ.ಜಿ.ಪಿ ಡಾ ಡಿ.ವಿ…

  • ಯುವ ಕವಿ ರಾಜಾ ಎಂ ಬಿ ಇವರು ಮಕ್ಕಳಿಗಾಗಿ ಶಿಶು ಗೀತೆಗಳ ಸಂಕಲನ “ಕೋತಿ ಮತ್ತು ಗೋಧಿ ಹುಗ್ಗಿ" ಯನ್ನು ಹೊರತಂದಿದ್ದಾರೆ. ಮಕ್ಕಳ ಮನಸ್ಸಿಗೆ ಮುಟ್ಟುವಂತೆ ಕವಿತೆಗಳನ್ನು ಬರೆಯುವುದು ಒಂದು ಸವಾಲಿನ ಕೆಲಸ. ಏಕೆಂದರೆ ಅವರಿಗೆ ಅರ್ಥವಾಗುವ ಪದಗಳನ್ನೇ ಬಳಸಿ ಕವಿತೆಯನ್ನು ಹೆಣೆಯುವುದು ಬಹಳ ಕಷ್ಟ. ಆದರೆ ರಾಜಾ ಎಂ ಬಿ ಇವರು ಬರೆದ ಕವಿತೆಗಳು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತಿದೆ. ಈ ಕವಿತಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ವಿಮರ್ಶಕ ಎಚ್ ಎಸ್ ಸತ್ಯನಾರಾಯಣ. ಇವರು ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಸಾಲುಗಳು ನಿಮ್ಮ ಓದಿಗಾಗಿ...

    “ಹಾವೇರಿಯ ಯುವ ಕವಿ ರಾಜಾ ಎಂ.ಬಿ.ಯವರು ಶಿಶು ಸಾಹಿತ್ಯ ರಚನೆಗೆ ಮನಸ್ಸು ಮಾಡಿರುವುದು ಅತ್ಯಂತ ಸಂತೋಷದ ಸಂಗತಿ…

  • ಕಥೆಗಾರ್ತಿ ಶೈಲಜಾ ಹಾಸನ ಇವರು ಬರೆದ ‘ನಿಲ್ಲು ನಿಲ್ಲೆ ಪತಂಗ' ಕಥಾ ಸಂಕಲನವು ಬಿಡುಗಡೆಯಾಗಿದೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಬರಹಗಾರರಾದ ಸಂತೋಷ್ ಕುಮಾರ್ ಮೆಹೆಂದಳೆ ಇವರು. ಇವರು ತಮ್ಮ ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ ನಿಮ್ಮ ಓದಿಗಾಗಿ...

    “ಸಂಜೆ ಸಾಹಿತ್ಯ ಪ್ರಶಸ್ತಿ ಪಡೆದ ಕಥಾ ಸಂಕಲನ "ನಿಲ್ಲುನಿಲ್ಲೆ ಪತಂಗ.." ದೊಡ್ಡ ಮಟ್ಟದ ಸ್ಪರ್ಧೆಯನ್ನು ಎದುರಿಸಿ ಗೆದ್ದ ಕೃತಿ. ಮೊಟ್ಟ ಮೊದಲ ಸಂಜೆ ಸಾಹಿತ್ಯ ಪ್ರಶಸ್ತಿ 2022 ನ್ನು ಮುಡಿಗೇರಿಸಿಕೊಂಡ ಹೆಮ್ಮೆಯೂ ಹೌದು. ಸಂಚಾಲಕ ಮತ್ತು ನಿರ್ಣಾಯಕನಾಗಿ ಎರಡೂ ಸ್ಥಳದಲ್ಲಿ ನಿಂತು ಕಾರ್ಯ ನಿರ್ವಹಿಸುವಾಗ ನಾನು ಎದುರಿಸಿದ ಸವಾಲು ನಿಜಕ್ಕೂ ದೊಡ್ಡದು. ಆದರೆ ಅಂತಿಮವಾಗಿ ಗೆದ್ದ ಕೃತಿಯ…

  • ‘ವಿಶ್ವವಾಣಿ’ ಓದುಗರಿಗೆ ರೂಪಾ ಗುರುರಾಜ್ ಹೆಸರು ಚಿರಪರಿಚಿತ. ಅವರು ಪ್ರತೀ ದಿನ ಬರೆಯುವ ‘ಒಂದೊಳ್ಳೆ ಮಾತು’ ಅಂಕಣ ಬಹಳಷ್ಟು ಜನರ ಮನಗೆದ್ದಿದೆ. ವಿಶ್ವವಾಣಿ ಕ್ಲಬ್ ಹೌಸ್ ನಲ್ಲಿ ನಡೆಯುವ ಚರ್ಚೆಗಳನ್ನು ಬಹಳ ಸೊಗಸಾಗಿ ನಿರ್ವಹಣೆ ಮಾಡುವ ಇವರ ಅಂಕಣಗಳ ಸಂಗ್ರಹದ ಮೊದಲ ಭಾಗ ‘ಒಂದೊಳ್ಳೆ ಮಾತು ಭಾಗ 1’ ಈಗಾಗಲೇ ಕಳೆದ ವರ್ಷ ಬಿಡುಗಡೆಯಾಗಿದೆ. ಈಗ ಬಿಡುಗಡೆಯಾಗಿರುವುದು ಅದೇ ಪುಸ್ತಕದ ಎರಡನೇ ಭಾಗ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ‘ಥಟ್ ಅಂತ ಹೇಳಿ...' ಎಂಬ ದೂರದರ್ಶನ ಚಂದನದ ಕಾರ್ಯಕ್ರಮ ನಿರೂಪಕ, ಅಂಕಣಗಾರ, ವೈದ್ಯರಾದ ಡಾ. ನಾ ಸೋಮೇಶ್ವರ ಇವರು. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಸಾಲುಗಳು ಇಲ್ಲಿವೆ...  

    “ನಮ್ಮ ಪೂರ್ವಜರಲ್ಲಿ ಮೂರು ಗುಣಗಳು…

  • ಶರಣಬಸವ ಕೆ.ಗುಡದಿನ್ನಿ ಅವರು ಬರೆದ ನೂತನ ಕಥಾ ಸಂಕಲನ “ಏಳು ಮಲ್ಲಿಗೆ ತೂಕದವಳು" ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಅಮರೇಶ ನುಗಡೋಣಿ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವ ನಿಮ್ಮ ಓದಿಗಾಗಿ...

    “ಶರಣಬಸವ ಕೆ. ಗುಡದಿನ್ನಿಯವರು ಕಳೆದ ಆರೇಳು ವರ್ಷಗಳಿಂದ ಕತೆಗಳನ್ನು ಬರೆಯುತ್ತಲೇ ಇದ್ದಾರೆ. ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ. ಈಗ ಮತ್ತೊಂದು ಕಥೆಗಳ ಕಟ್ಟನ್ನು ಪ್ರಕಟಣೆಗೆ ಸಿದ್ಧ ಮಾಡಿದ್ದಾರೆ.ರಾಯಚೂರು ಜಿಲ್ಲಾ ಪ್ರದೇಶದಲ್ಲಿ ಹುಟ್ಟಿ ಬೆಳೆದ ಕತೆಗಾರರು ತಮ್ಮ ಕತೆಗಳಲ್ಲಿ ಮನುಷ್ಯ ಪರಿಸರವನ್ನು,ಅವರ ಸಂಕಟಗಳನ್ನು ತೀವ್ರವಾಗಿ ಶೋಧಿಸುತ್ತಿದ್ದಾರೆ. ವ್ಯಕ್ತಿ ತನ್ನಲ್ಲಿರುವ ಮನುಷ್ಯತ್ವವನ್ನು ಕಂಡುಕೊಂಡಂತೆ ತನ್ನ…

  • ಸ್ಟ್ಯಾನಿ ಲೋಪಿಸ್ ಅವರು ತಮ್ಮ ನೂತನ ಕಾದಂಬರಿ “ಬರುವಳು...ಬರುವಳು...ಬರುವಳು..." ಇದರಲ್ಲಿ ದುಬೈನ ಶಿಕ್ಷಣ ವ್ಯವಸ್ಥೆ, ಜೀವನ ವಿಧಾನ ಇತ್ಯಾದಿಗಳ ವಿವರ ನೀಡುತ್ತಾರೆ. ನಾಳೆ ಹುಟ್ಟಲಿರುವುದು ಹೆಣ್ಣು ಎಂಬುದನ್ನ ತಿಳಿದೂ ಆ ಕುಟುಂಬದವರು ಹೆಣ್ಣನ್ನು ಸ್ವಾಗತಿಸಲು ಕಾಯುವುದು, ಇತ್ಯಾದಿ ಅಂಶಗಳನ್ನ ಸುಂದರವಾಗಿ ಚಿತ್ರಿಸುತ್ತಾರೆ. ಈ ಕೃತಿಗೆ ಖ್ಯಾತ ಲೇಖಕ ನಾ. ಡಿಸೋಜ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರ ಬರಹದ ಆಯ್ದ ಭಾಗ ನಿಮ್ಮ ಓದಿಗಾಗಿ...

    “ಯುನೈಟೆಡ್ ಅರಬ್ ಎಮಿರೇಟ್ಸ್ ಅಂದರೆ ದುಬೈ ಅನ್ನುವುದು ಎಲ್ಲರಿಗೂ ತಿಳಿದಿರುವ ದೇಶ. ಇಲ್ಲಿಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರುವ ಸುಧಾಳ ಕತೆ ಇದು. ಸುಧಾ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿ ಕೊಂಡವಳು…

  • ಡಾ. ಪ್ರಕಾಶ ಗ ಖಾಡೆ ಇವರ ನೂತನ ಕಥಾ ಸಂಕಲನ ‘ಬಾಳುಕುನ ಪುರಾಣ'. ತಮ್ಮ ಕಥಾ ಸಂಕಲನದ ಕುರಿತಾಗಿ, ತಮ್ಮ ಕಥೆಗಳ ಬಗ್ಗೆ ಲೇಖಕರು ತಮ್ಮ ಮಾತಿನಲ್ಲಿ ಹೇಳುವುದು ಹೀಗೆ...

    “ಕಾರಣಗಳಿಲ್ಲದೇ ಕಥೆ ಹುಟ್ಟಿತೇ? ಕಥೆಗಳಿಗಿರುವ ಮೋಹಕತೆ ಎಂಥದು? ಕಥೆ ಕಟ್ಟುವ ಕುಶಲತೆಯೂ ಕಲ್ಲಲ್ಲಿ ಒಂದು ಮೂರುತಿಯನ್ನು, ಕಟ್ಟಿಗೆಯಲ್ಲಿ ಒಂದು ಆಕೃತಿಯನ್ನು ರೂಪಿಸಿದಂತೆ. ಕಥೆ ಎಲ್ಲ ವಯೋಮಾನದವರಿಗೂ ಬೇಕು. ವ್ಯಕ್ತಿ ತಾನೇ ಒಂದು ಕಥೆಯಾಗುವ, ತನ್ನ ಸುತ್ತಲ ಘಟನೆಗಳೇ ಆಕಾರಗಳಾಗುವ, ತನ್ನ ಕಾಲದ ಜನರ ಮನೋಭಾವಗಳು ದಾಖಲಾಗುವ ಇಂಥ ವಿಸ್ಮಯಗಳನ್ನು ತನ್ನ ಒಡಲಲ್ಲಿ ತುಂಬಿಟ್ಟುಕೊಂಡು ಎಲ್ಲವನ್ನು ತೋಡಿ ಬಯಲಾಗುವ ಮತ್ತೇ ಹೊಸತನಕ್ಕೆ ತೆರೆದುಕೊಳ್ಳುವ ಕಥಾ ಪಯಣ ಒಂದು ಜೀವಂತಿಕೆಯ ಲಕ್ಷಣ. ನಾನು ಕಥೆ…

  • ಅಲೈಕ್ಯ ಮೈತ್ರೇಯಿ ಅವರ ಚೊಚ್ಚಲ ಕಾದಂಬರಿ ಪಿಂಕಿ ‘ವೇ’ ಇತ್ತೀಚೆಗೆ ಬಿಡುಗಡೆಯಾಗಿದೆ. ಸುಮಾರು ೧೪೦ ಪುಟಗಳ ಈ ಕಾದಂಬರಿಯ ಕುರಿತು ಲೇಖಕರಾದ ಅನಂತ ಕುಣಿಗಲ್ ಅವರು ಪುಸ್ತಕದಲ್ಲಿ ತಮ್ಮ ‘ಮೊದಲ ಮಾತನ್ನು ದಾಖಲು ಮಾಡಿದ್ದಾರೆ. ಅವರು ತಮ್ಮ ಮೊದಲ ಮಾತಿನಲ್ಲಿ ವ್ಯಕ್ತ ಪಡಿಸಿದ ಭಾವಗಳು ಹೀಗಿವೆ...

    “ನಾನು ಹಿಂದೂ ಅಲ್ಲ ಎಂದರೆ ನೀವು ನಂಬಬೇಕು. ಹೌದು, ನಾನು ಮುಸ್ಲಿಂ ಅಲ್ಲ ಕ್ರೈಸ್ತ, ಜೈನ, ಬೌದ್ಧ ಯಾವುದೂ ಅಲ್ಲ ನಾನು ಮನುಷ್ಯನೆಂದರೆ ನೀವು ನಂಬಲೇಬೇಕು!" ಧರ್ಮ ಎಂದರೇನು ಎಂಬ ಪ್ರಶ್ನೆಗೆ ಸುಲಭವಾಗಿ ಮತ್ತು ನೇರವಾಗಿ ಯಾರೂ ಉತ್ತರಿಸಲಾರದಂತಹ ಸಂದಿಗ್ಧ ಸ್ಥಿತಿಯಲ್ಲಿ ನಾವೆಲ್ಲರೂ ಇದ್ದೇವೆ. ಧರ್ಮವೆಂದರೆ ಆಚಾರ, ವಿಚಾರ, ಅಸ್ತಿತ್ವ ಎಂದು ನಂಬಲಾಗಿದ್ದ ದಿನಗಳು ದೂರವಾಗಿ,…

  • ಸಾಹಿತಿ ಗಂಗಪ್ಪ ತಳವಾರ ಅವರ ವಿನೂತನ ಕಾದಂಬರಿ “ಧಾವತಿ" ಇತ್ತೀಚೆಗೆ ಬಿಡುಗಡೆಯಾಗಿದೆ. ವಿಮರ್ಶಕಿ ಭಾರತೀ ದೇವಿ ಪಿ. ಇವರು ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ. ಅವರು ಬರೆದ ಮುನ್ನುಡಿಯ ಆಯ್ದ ಸಾಲುಗಳು ನಿಮ್ಮ ಓದಿಗಾಗಿ...

    “ಕಿಚ್ಚಿಲ್ಲದ ಬೇಗೆ, ಏರಿಲ್ಲದ ಧಾವತಿ ಇವು ಬರಿಕಂಗಳಿಗೆ ಕಾಣದ, ಆದರೆ ಒಳಗೇ ಇರಿಯುವ ನೋವು. ಒಳಗೆ ಚುಚ್ಚಿ ಮುರಿದ ಮುಳ್ಳಿನ ನೋವು ಅದು. ಅಕ್ಕನ ವಚನಗಳಲ್ಲಿ ಬರುವ ಈ ಪದಗಳು ಹಲವು ನೆಲೆಗಳಲ್ಲಿ ನಮ್ಮನ್ನು ತಟ್ಟುತ್ತವೆ. ಭವಗಳಲ್ಲಿ ಏಗಿ ಏಗಿ ದಾಟುವ ಹಾದಿ ಅದು. ಶರಣರು ಸವೆಸುವ ಹಾದಿಗೆ ಮೋಕ್ಷವೆಂಬ ಗಂತವ್ಯ ಇದೆ. ಆದರೆ ಹಲವು ಜೀವಗಳ ಬದುಕಲ್ಲಿ ನೋವೇ ಹಾದಿ ಮತ್ತು ಕೊನೆಯೂ ಕೂಡಾ. ಗಂಗಪ್ಪ ತಳವಾರ್ ಅವರು ತಮ್ಮ‘ಧಾವತಿ’ಯಲ್ಲಿ ಈ…

  • ಖ್ಯಾತ ಲೇಖಕ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಇವರು “ಕೀಟಲೆಯ ದಿನಗಳು" ಎಂಬ ೪೫೬ ಪುಟಗಳ ಬೃಹತ್ ಪುಸ್ತಕವನ್ನು ಬರೆದಿದ್ದಾರೆ. ಈ ಕೃತಿಯನ್ನು ಅವರು “ಹೀಗೊಂದು ಆಕಸ್ಮಿಕ ಆತ್ಮಕಥನ" ಎಂದು ಹೆಸರಿಸಿದ್ದಾರೆ. ಈ ಕೃತಿಗೆ ಲೇಖಕ ಅಗ್ರಹಾರ ಕೃಷ್ಣ ಮೂರ್ತಿ ಇವರು ಬೆನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಬೆನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳು ಹೀಗಿವೆ…

    “ತುಂಟತನ, ಕೀಟಲೆ ಬಾಲ್ಯದಲ್ಲಿ ಅಲಂಕಾರಗಳೇ ಆಗಿರುತ್ತವೆ. ಸಹಜ ಮುಗ್ಧತೆ, ಸತ್ಯ ಶುದ್ಧತೆ ಸುತ್ತಮುತ್ತಲವರಿಗೆ ಅಪೇಕ್ಷಣೀಯವೂ, ಕ್ಷಮಾರ್ಹವೂ, ಚುರುಕು ಎಂಬಂತೆಯೂ ಕಾಣುವುದುಂಟು. ಈ ಅಲಂಕಾರಗಳು ಆಗಾಗ ಶಿಕ್ಷೆಗೊಳಗಾದರೂ ಮತ್ತಷ್ಟು ಶುದ್ಧತೆಯ ಹೊಳಪು ಪಡೆಯುತ್ತವೆ. ಬಾಲ್ಯ ಕಳೆದಂತೆಲ್ಲ ಈ ಗುಣಗಳು ಕಳೆದುಹೋಗುವುದು…