ಮಕ್ಕಳಿಗಾಗಿ ಮಕ್ಕಳ ಸಾಹಸ ಕತೆಗಳ ಸಂಕಲನವಿದು. ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಇದರಲ್ಲಿ ವಿವಿಧ ಲೇಖಕರ 17 ಕತೆಗಳಿವೆ.
ಇವುಗಳ ಲೇಖಕರು ಪಳಕಳ ಸೀತಾರಾಮ ಭಟ್ಟ, ಬೇಬಿ ಎಮ್. ಮಣಿಯಾಟ್, ಮತ್ತೂರು ಸುಬ್ಬಣ್ಣ, ಗಣೇಶ ಪಿ. ನಾಡೋರ, ಎನ್ಕೆ. ಸುಬ್ರಹ್ಮಣ್ಯ, ದು. ನಿಂ. ಬೆಳಗಲಿ, ನೀಲಾಂಬರಿ ಮತ್ತು ಸಹನ.
ಅಮ್ಮ ಹೇಳುತ್ತಿದ್ದ ಶೌರ್ಯದ ಕತೆಗಳನ್ನು ಕೇಳುತ್ತಾ ಬೆಳೆದಿದ್ದ ಶಿವಾಜಿ ಆ ಕತೆಗಳಿಂದ ಬಹಳ ಪ್ರಭಾವಿತನಾಗಿದ್ದ; ಮುಂದೆ ಅವನು ಒಬ್ಬ ಧೀರ ಯೋಧನಾಗಿ ರೂಪುಗೊಂಡು ಮರಾಠಾ ಸಾಮ್ರಾಜ್ಯ ಕಟ್ಟುವ ಸಾಧನೆ ಮಾಡಲು ಆತ ಬಾಲ್ಯದಲ್ಲೇ ಮಾನಸಿಕ ಸಿದ್ಧತೆ ಮಾಡಿದ್ದ ಎಂಬ ಪ್ರತೀತಿಯಿದೆ.
ಈಗಿನ ಮಕ್ಕಳಿಗೆ ಅಂಥ ಕತೆಗಳನ್ನು ಹೇಳಿ ಅವರನ್ನು ಆತ್ಮವಿಶ್ವಾಸದ ಮನುಷ್ಯರನ್ನಾಗಿ ರೂಪಿಸುವವರು ಯಾರು? ಈಗ ನಗರಗಳಲ್ಲಿ ವಾಸವಿರುವ…