ಉಡುಪಿ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತರು ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರೂ ಆಗಿರುವ ಪತ್ರಕರ್ತ ಅಶ್ವಿನ್ ಲಾರೆನ್ಸ್ ಇವರು ಬರೆದ ಪುಟ್ಟ, ಆದರೆ ಅಪರೂಪದ ಅದ್ಭುತ ವ್ಯಕ್ತಿಯ ಚಿತ್ರಣವನ್ನು ಕಟ್ಟಿಕೊಡುವ ಪುಸ್ತಕ ‘ಜಾತಿವ್ಯಾಧಿ ಚಿಕಿತ್ಸಕ ಡಾ. ಪದ್ಮನಾಭನ್ ಪಲ್ಪು’. ಈ ಕೃತಿಗೆ ಮಾಹಿತಿಪೂರ್ಣವಾದ ಮುನ್ನುಡಿಯನ್ನು ಬರೆದಿದ್ದಾರೆ ಪತ್ರಕರ್ತರಾದ ಶ್ರೀರಾಮ ದಿವಾಣರು. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವು ಅಭಿಪ್ರಾಯಗಳ ಕೆಲವು ಸಾಲುಗಳು ನಿಮ್ಮ ಓದಿಗಾಗಿ…
“ಕ್ರಾಂತಿ ಎಂದರೆ ಹಿಂಸೆ, ಹಿಂಸಾತ್ಮಕ ಹೋರಾಟ ಎಂಬ ಅಭಿಪ್ರಾಯ ಹಲವರಲ್ಲಿದೆ. ಈ ಅಭಿಪ್ರಾಯ ಪೂರ್ಣ ಸರಿಯಲ್ಲ. ಯಥಾಸ್ಥಿತಿವಾದದ ವಿರುದ್ಧ ಕೇವಲ ಸುಧಾರಣೆಗಳ ಬದಲು, ಜಾರಿಯಲ್ಲಿರುವ ವ್ಯವಸ್ಥೆಯ…