ಬೆಂಗಳೂರಿನ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಹೊರ ತಂದ ‘ಮಿಲಿಂದ ಪ್ರಶ್ನೆ' ಎಂಬ ಕೃತಿ ಮೂಲತಃ ಪಾಲಿ ಭಾಷೆಯಲ್ಲಿ ಬರೆಯಲ್ಪಟ್ಟಿದೆ ಎಂದು ಕೃತಿಯ ಅನುವಾದಕರಾದ ಖ್ಯಾತ ಸಾಹಿತಿ ಜಿ ಪಿ ರಾಜರತ್ನಂ ಅವರು ತಮ್ಮ ಮುನ್ನುಡಿಯಲ್ಲಿ ತಿಳಿಸುತ್ತಾರೆ. ಜಿ ಪಿ ರಾಜರತ್ನಂ ಅವರು 'ಪ್ರವೇಶ' ಎಂಬ ಮುನ್ನುಡಿ ಬರಹದಲ್ಲಿ ಈ ಕೃತಿಯ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ತಿಳಿಸುತ್ತಾ ಹೋಗಿದ್ದಾರೆ. ಅದರ ಆಯ್ದ ಭಾಗಗಳು ನಿಮ್ಮ ಓದಿಗಾಗಿ…
“ ಪಾಲಿ ಭಾಷೆಯಲ್ಲಿರುವ ಸಾಹಿತ್ಯವು ಎರಡು ವಿಧವಾದುದೆಂದು ಸ್ಥೂಲವಾಗಿ ಹೇಳಬಹುದು. ಒಂದು ಪಿಟಕ ಸಾಹಿತ್ಯ ಮತ್ತೊಂದು ಪಿಟಕೇತರ ಸಾಹಿತ್ಯ. ವಿನಯ ಪಿಟಕ, ಸುತ್ತ ಪಿಟಕ, ಅಭಿಧಮ್ಮ ಪಿಟಕ ಎಂಬ ಮೂರು ಪಿಟಕಗಳು, ಸಿಂಹಳ ಬರ್ಮಾ ಸಯಾಂ ದೇಶಗಳ ಬೌದ್ಧರ…