ಪುಸ್ತಕ ಸಂಪದ

  • “ಕಾಲಮಾನದ ಮೊದಲು" ಎಂಬ ಆರಂಭದ ಬರಹದಲ್ಲಿ ಲೇಖಕ ಶಿವಾನಂದ ಕಳವೆ ಬರೆದಿರುವ ಒಂದು ಮಾತು: "ಈಸ್ಟ್ ಇಂಡಿಯಾ ಕಂಪೆನಿ ನಿರ್ದೇಶನದಂತೆ ಡಾ. ಫ್ರಾನ್ಸಿಸ್ ಬುಕಾನನ್ ಎಂಬ ವಿದೇಶಿ ಪ್ರವಾಸಿ ಕ್ರಿ.ಶ.1801ರಲ್ಲಿ ಉತ್ತರ ಕನ್ನಡದಲ್ಲಿ ಪ್ರವಾಸ ಮಾಡಿದ್ದರು. ಅವರು ಫೆಬ್ರವರಿ 18ರಿಂದ ಮಾರ್ಚ್ 16ರ ವರೆಗೆ ಆಗ ಭಟ್ಕಳದಿಂದ ಬನವಾಸಿಯ ವರೆಗೆ ಕೃಷಿ - ಕಾಡು - ಜನಜೀವನದ ಬಗೆಗೆ ಅಧ್ಯಯನ ನಡೆಸಿದರು. ಸರಿಯಾಗಿ 200 ವರ್ಷಗಳ ಬಳಿಕ ಬುಕಾನನ್ ಮಾರ್ಗದಲ್ಲಿ ಮರುಪ್ರಯಾಣ ನಡೆಸಿರುವೆ…" ಆ ಮರುಪ್ರಯಾಣದ ದಾಖಲಾತಿ ಈ ಪುಸ್ತಕ. ಆದ್ದರಿಂದ ಇದು ತೀರಾ ಅಪರೂಪದ ಪುಸ್ತಕ.

    2001ರಲ್ಲಿ ಪ್ರಕಟವಾದ ಇದು ಕೇವಲ ಮರುಪ್ರಯಾಣದ ದಾಖಲಾತಿ ಮಾತ್ರವಲ್ಲ ಎಂಬುದನ್ನು ಲೇಖಕರು “ಕಾಲಮಾನದ ಮೊದಲು" ಬರಹದಲ್ಲಿ ಸ್ಪಷ್ಟ ಪಡಿಸುತ್ತಾರೆ: "ನಿಜವಾಗಿ ಈ ಪ್ರವಾಸ ಯೋಜನೆ…

  • ಶ್ರೀನಿವಾಸ ಪಾ.ನಾಯ್ಡು ಅವರು ಬರೆದ ‘ಎಲ್ಲರಂತಲ್ಲ ನಾವು' ಕವನ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದು ಪ್ರೋತ್ಸಾಹಿಸಿದ್ದಾರೆ ಲೇಖಕ ವಾಸುದೇವ ನಾಡಿಗ್. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವ ಹೀಗಿದೆ...

    “ಭಾವಲೋಕವು ಬತ್ತಬಾರದು. ಅದನ್ನು ಮೊಗೆ ಮೊಗೆದು ಕೊಡುವ ಸೂಕ್ಷ್ಮ ಬೊಗಸೆ ಖಾಲಿಯಾಗಬಾರದು. ಶ್ರೀನಿವಾಸ್ ಅವರ ಹಸ್ತಪ್ರತಿ ಓದುವಾಗ ಹೊಳೆದ ಯೋಚನೆಗಳಿವು. ಇದು ವಿಮರ್ಶೆ ಅಲ್ಲ ಮತ್ತು ತಕ್ಕಡಿಯೂ ಅಲ್ಲ. ಕವಿತೆಯೇ ಹೀಗೆ. ಅವರವರ ಭಾವಕೋಶದ ಅವರವರದೇ ಕಾವ್ಯ ಮೀಮಾಂಸೆ. ಮೌಲ್ಯಮಾಪನ ಇಲ್ಲಿ ಮುಖ್ಯವಲ್ಲ ಒಂದು ವಿನಮ್ರ ಓದು ಮತ್ತು ಆ ಮೂಲಕ ಅನಿಸುವ ಪ್ರಾಮಾಣಿಕ ಅಭಿಪ್ರಾಯಗಳಷ್ಟೇ ಮುಖ್ಯ. ಪಂಪನಾದಿಯಾಗಿ ಈವರೆಗೂ…

  • ಸ್ತ್ರೀ ಸಂವೇದನೆಗಳ ಮಾನಸಿಕ ತೊಳಲಾಟದ ಬಗ್ಗೆ ಲೇಖಕಿ ಸುಮಾ ಉಮೇಶ್ ಗೌಡ ಇವರು ತಮ್ಮ ನೂತನ ಕಾದಂಬರಿ “ಮನಸುಗಳ ಮಿಲನ" ವನ್ನು ರಚಿಸಿದ್ದಾರೆ. ಈ ೮೮ ಪುಟಗಳ ಪುಟ್ಟ ಕಾದಂಬರಿ ಇತ್ತೀಚೆಗೆ ಬಿಡುಗಡೆಯಾಗಿದೆ. ಒಂದೇ ಗುಕ್ಕಿನಲ್ಲಿ ಓದಿ ಮುಗಿಸುವಂಥ ಕಾದಂಬರಿಯಾದರೂ ಓದಿದ ಬಳಿಕ ಅದರ ಕಥಾ ವಸ್ತು ಬಹಳ ಕಾಲ ನಮ್ಮ ಮನದಲ್ಲಿ ಉಳಿಯಲಿದೆ. ಈ ಬಗ್ಗೆ ಲೇಖಕರಾದ ಪದ್ಮನಾಭ ಡಿ. ಅವರು ತಮ್ಮ ಮುನ್ನುಡಿಯಲ್ಲಿ ಹೇಳುವುದು ಹೀಗೆ... 

    ಸಂಗೀತ ಸಾಹಿತ್ಯ ಕಲಾವಿಹೀನಃ
    ಸಾಕ್ಷಾತ್ ಪಶೂನಾಂ ಪರಪುಚ್ಛಹೀನಃ
    ತೃಣಂ ನ ಖಾದನ್ನಪಿ ಜೀವಮಾನಃ
    ತದ್ಭಾಗದೇಯಂ ಪರಮಂ ಪಶೂನಾಂ

    ಈ ಶ್ಲೋಕದ ಭಾವಾರ್ಥವೆಂದರೆ ಸಂಗೀತ ಸಾಹಿತ್ಯ ಕಲೆಗಳಲ್ಲಿ ಆಸಕ್ತಿ…

  • “ನಿಮ್ಮ ಬುದ್ಧಿಯನ್ನು ಪ್ರಖರಗೊಳಿಸುವ, ನಿಮ್ಮ ಹೃದಯವನ್ನು ಶುದ್ಧಗೊಳಿಸುವ ಹಾಗೂ ನಿಮ್ಮ ಆತ್ಮವನ್ನು ಪುನಶ್ಚೇತನಗೊಳಿಸುವ ಕಥೆಗಳು” ಇದು ಈ ಪುಸ್ತಕದ ಶೀರ್ಷಿಕೆಯ ಕೆಳಗೆ ಮುಖಪುಟದಲ್ಲಿ ಮುದ್ರಿಸಲಾಗಿರುವ ಬರಹ.

    ಹೌದು, ಈ ಸಂಕಲನದ ಕಥೆಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ. ಇಂತಹ ಪುಟ್ಟಪುಟ್ಟ ಕಥೆಗಳು ಬಾಲಕಬಾಲಕಿಯರ, ವಯಸ್ಕರ ಹಾಗೂ ವಯೋವೃದ್ಧರ ಮನಸೂರೆಗೊಳ್ಳುತ್ತವೆ ಎಂಬುದಂತೂ ಖಂಡಿತ. ಎಲ್ಲ ದೇಶಗಳಲ್ಲಿಯೂ ಅಲ್ಲಿನ ಪರಂಪರೆಯನ್ನು ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಕಥೆಗಳು ಪ್ರಚಲಿತವಾಗಿವೆ. ಸಾವಿರಾರು ವರುಷಗಳು ಸರಿದರೂ ಎಲ್ಲ ತಲೆಮಾರಿನವರನ್ನೂ ಈ ಕಥೆಗಳು ರಂಜಿಸುತ್ತವೆ ಹಾಗೂ ಎಲ್ಲರ ಜ್ನಾನಖಜಾನೆಯ ಭಾಗವಾಗಿ ಉಳಿಯುತ್ತವೆ. ನಮ್ಮ ದೇಶದ ಉಪನಿಷತ್ತಿನ ಮತ್ತು ಪಂಚತಂತ್ರದ ಕಥೆಗಳು ಶ್ರೇಷ್ಠ ಕತೆಗಳ ನಿದರ್ಶನಗಳಾಗಿವೆ.

  • ‘ಬಾವಲಿ ಗುಹೆ' ಮಕ್ಕಳಿಗೆ ಪರಿಸರದ ಮೇಲೆ ಗಣಿಗಾರಿಕೆಯಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಅವರದೇ ಆದ ಸರಳ ಭಾಷೆಯಲ್ಲಿ ಹೇಳಿರುವುದು ಗಮನಿಸಬೇಕಾದ ವಿಷಯ. ಇದಲ್ಲದೆ ಚಳುವಳಿಯ ಬಗ್ಗೆ ಕೂಡ ಮಕ್ಕಳಿಗೆ ತಿಳಿಯುವಂತೆ ವಿಷಯಗಳನ್ನು ಪಾತ್ರಗಳ ಮೂಲಕ ಚರ್ಚಿಸಲಾಗಿದೆ,'' ಎನ್ನುವುದು ನನ್ನ ಅನಿಸಿಕೆ. ತಮ್ಮಣ್ಣ ಬೀಗಾರ ಅವರ ‘ಬಾವಲಿ ಗುಹೆ’ ಕೃತಿಗೆ ನಾನು ಬರೆದಿರುವ ಅನಿಸಿಕೆ ನಿಮ್ಮ ಓದಿಗಾಗಿ...

    ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರ (2022) ಪಡೆದ ಅಭಿನವ ಪ್ರಕಟಿತ ಕೃತಿ 'ಬಾವಲಿ ಗುಹೆ' ಮಕ್ಕಳ ಕಾದಂಬರಿಯನ್ನು ಪ್ರೀತಿಯಿಂದ ಕಳಿಸಿಕೊಟ್ಟಿದ್ದರು. ಇದರ ಜೊತೆಗೆ ಮಕ್ಕಳ ಕಥಾ ಸಂಕಲನ 'ಪುಟ್ಟಿಯೂ ಹಾರುತ್ತಿದ್ದಳು' ಮತ್ತು…

  • ವ್ಯಕ್ತಿತ್ವ ವಿಕಸನದ ಬಗ್ಗೆ ಡಾ. ಗಣಪತಿ ಹೆಗಡೆ ಇವರು ಬರೆದಿರುವ ಕಥೆಗಳು “ಮನವು ಅರಳಲಿ” ಎಂಬ ಹೆಸರಿನ ಪುಸ್ತಕವಾಗಿ ಇತ್ತೀಚೆಗೆ ಬಿಡುಗಡೆಯಾಗಿದೆ. ‘ವಿಜಯವಾಣಿ’ ದಿನ ಪತ್ರಿಕೆಯಲ್ಲಿ  ‘ಮನೋಲ್ಲಾಸ' ಎಂಬ ಅಂಕಣದ ಮೂಲಕ ಹೊರಹೊಮ್ಮಿದ ಮನಸ್ಸಿಗೆ ಮುದ ನೀಡಿದ ಕಥೆಗಳು ಈ ಪುಸ್ತಕದಲ್ಲಿವೆ. ಈ ಪುಸ್ತಕಕ್ಕಾಗಿ ಲೇಖಕರು ಬರೆದ ತಮ್ಮ ಮನದಾಳದ ಮಾತುಗಳ ಒಂದು ಝಲಕ್ ನಿಮಗಾಗಿ...

    “ಮನವು ಅರಳಲಿ' ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಕೆಲವು ಕಥೆಗಳ ಸಂಗ್ರಹದ ಈ ಕಿರುಪುಸ್ತಕವನ್ನು ತಮ್ಮ ಕೈಗಿಡಲು ಬಹಳವೇ ಸಂತಸವಾಗುತ್ತಿದೆ. ಈ ಸಂದರ್ಭದಲ್ಲಿ ಪುಸ್ತಕದ ನಿರ್ಮಾಣಕ್ಕೆ ಸಹಕಾರಿಯಾದವರನ್ನು ನೆನೆಯುವುದು ನನ್ನ ಕರ್ತವ್ಯ.

    ಕಿರುಬರಹಗಳ ಮೂಲಕ,…

  • ಕೃಷ್ಣ ಕೌಲಗಿ ಅವರ ಬರಹಗಳ ಸಂಗ್ರಹ ‘ತುಂತುರು ಇದು ನೀರ ಹಾಡು'. ಸುಮಾರು ೧೭೦ ಪುಟಗಳ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಜಯಶ್ರೀ ದೇಶಪಾಂಡೆ ಇವರು. ತಮ್ಮ ಮುನ್ನುಡಿಯಲ್ಲಿ ಲೇಖಕಿಯ ಕನಸುಗಳನ್ನು ಬೆಂಬಲಿಸುತ್ತಾ ಜಯಶ್ರೀ ಅವರು ವ್ಯಕ್ತ ಪಡಿಸಿದ ಭಾವನೆಗಳು ಹೀಗಿವೆ...

    “ಇವುಗಳಲ್ಲಿ ವಿನೋದವಿದೆ, ವಿಷಾದವಿದೆ, ಖುಶಿಯಿದೆ, ಖಯಾಲಿಗಳಿವೆ, ಕಥೆಗಳಿವೆ, ಕನಸು, ನೀತಿ, ಬದುಕಿನ ಪಾಠಗಳೂ ಇಲ್ಲಿವೆ" ಎನ್ನುತ್ತಾರೆ 'ತುಂತುರು ಇದು ನೀರ ಹಾಡು' ಪುಸ್ತಕದ ಸೃಷ್ಟಿಕರ್ತೆ ಶ್ರೀಮತಿ ಕೃಷ್ಣಾ ಕೌಲಗಿ. ಹೀಗೆ ತಮ್ಮಿಡೀ ಪುಸ್ತಕದ ಒಳಾವರಣದ ಪದರಗಳನ್ನೇ ಒಂದು ಮುಷ್ಠಿಯಲ್ಲಿಟ್ಟು ನಮ್ಮೆದುರು ಅದನ್ನು ಬಿಡಿಸಿದ್ದಾರೆ ಎಂದು ನನಗನಿಸುತ್ತದೆ. 

  • ಕರ್ನಾಟಕದಲ್ಲಿ ಸಾವಿರಾರು ಬಗೆಯ ಜನಪದ ಆಟಗಳು ಇರಬಹುದು. ಕಾಲಕ್ರಮೇಣ ಹಲವು ಆಟಗಳು ಆಡುವವರಿಲ್ಲದೇ, ಅದನ್ನು ಮುಂದುವರೆಸಲು ಗೊತ್ತಿಲ್ಲದೆಯೇ ಇತಿಹಾಸದ ಪುಟಗಳನ್ನು ಸೇರಿಕೊಂಡಿರಬಹುದು. ಇಂತಹ ಹಲವಾರು ಆಟ ವೈವಿಧ್ಯವನ್ನು ಹುಡುಕಾಡಿ ಸಂಪಾದಿಸಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ ರೇಣುಕಾ ಕೋಡಗುಂಟಿ ಇವರು. ಕರ್ನಾಟಕದ ಜನಪದ ಆಟಗಳು ಪುಸ್ತಕಕ್ಕೆ ಅವರು ಬರೆದ ಸಂಪಾದಕರ ನುಡಿಯಲ್ಲಿ ವ್ಯಕ್ತವಾದ ಭಾವಗಳು ಅಕ್ಷರರೂಪದಲ್ಲಿ ಇಲ್ಲಿ ನೀಡಲಾಗಿದೆ...

    “ಕರ್ನಾಟಕದ ವೈವಿಧ್ಯತೆಯನ್ನು ಸಮಾಜದ ಎಲ್ಲ ಆಯಾಮಗಳಲ್ಲಿ ಕಾಣಬಹುದಾಗಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಬಳಕೆಯಲ್ಲಿರುವ ಜನಪಟ ಆಟಗಳನ್ನು ಗಮನಿಸಿದಾಗಲೂ ಈ ವೈವಿಧ್ಯತೆಯನ್ನು ಕಾಣುತ್ತೇವೆ. ಭಿನ್ನ ಪರಿಸರಗಳಲ್ಲಿ ವಿಭಿನ್ನವಾದ…

  • ಡಾ. ಎಂ ಎಸ್ ಮಣಿ ಇವರು ಬರೆದ ‘ಗವಿ ಮಾರ್ಗ' ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಿದ್ದಾರೆ. ‘ಕತ್ತಲ ಹಾದಿಯ ಪಯಣ' ಎಂದು ಮುಖಪುಟದಲ್ಲೇ ಮುದ್ರಿಸಿ ಕೃತಿಯನ್ನು ಓದುವಂತೆ ಕುತೂಹಲ ಮೂಡಿಸಿದ್ದಾರೆ. ಈ ಕೃತಿಗೆ ಭಾರತದ ಸುಪ್ರೀಂ ಪೋರ್ಟ್ ನ ನಿವೃತ್ತ ನ್ಯಾಯಾಧೀಶರಾದ ನ್ಯಾ. ವಿ.ಗೋಪಾಲ ಗೌಡ ಇವರು ಬೆನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ. ಕೃತಿಗೆ ಪತ್ರಕರ್ತರಾದ ಬನ್ಸಿ ಕಾಳಪ್ಪ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳ ಆಯ್ದ ಭಾಗ ಇಲ್ಲಿವೆ...

    “ಪ್ರಜಾಪ್ರಭುತ್ವದ ‘ವ್ಯವಸ್ಥೆ’ಯಲ್ಲಿ ಅನೇಕ ‘ಅವ್ಯವಸ್ಥೆ’ಗಳು ಅಂತರ್ಗತವಾಗಿವೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ, ಮಾಧ್ಯಮ ಇವು ಜನ ತಂತ್ರ ವ್ಯವಸ್ಥೆಯ ನಾಲ್ಕು ಸ್ತಂಭಗಳು.…

  • “ಮಲ್ಲಿಗೆ ಹೂವಿನ ಸಖ" ಕಥಾ ಸಂಕಲನವನ್ನು ಬರೆದವರು ಕಥೆಗಾರರಾದ ಟಿ ಎಸ್ ಗೊರವರ ಇವರು. ೬೩ ಪುಟಗಳ ಈ ಪುಟ್ಟ ಕಥಾ ಸಂಕಲನಕ್ಕೆ ಮೊದಲ ಮಾತು, ಟಿಪ್ಪಣಿ ಬರೆದಿದ್ದಾರೆ ಮತ್ತೊರ್ವ ಕಥೆಗಾರ ಜಯರಾಮಾಚಾರಿ. ಇವರು ತಮ್ಮ ಟಿಪ್ಪಣಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ...

    “ಟಿ.ಎಸ್. ಗೊರವರ ಅವರ ಕತೆಗಳನ್ನ ಅಲ್ಲಲ್ಲಿ ಪೇಪರ್ ಮತ್ತು ಮ್ಯಾಗಜೀನುಗಲ್ಲಿ ಬಿಡಿಬಿಡಿಯಾಗಿ ಓದಿದ್ದೆ. ಒಟ್ಟಿಗೆ ಅವರ ಕತೆಗಳನ್ನು ಪುಸ್ತಕ ರೂಪದಲ್ಲಿ ಓದಿದ್ದು 'ಮಲ್ಲಿಗೆ ಹೂವಿನ ಸಖ' ಪುಸ್ತಕದಿಂದ, ತರಿಸಿಕೊಂಡು ಇನ್ನೂ ಓದದಿರುವ ಅವರ 'ಕುದರಿ ಮಾಸ್ತರ' ಕೂಡ ಇದೆ. ಆರು ಕತೆಯುಳ್ಳ ಚಿಕ್ಕ ಪುಸ್ತಕ ಇದು, ಪುಸ್ತಕದ ಅಂತ್ಯದಲ್ಲಿ ಸ್ಮಿತಾ ಅಮೃತರಾಜ್, ಅನುಪಮಾ ಪ್ರಸಾದ್, ವಿವೇಕ್ ಶಾನಭಾಗರ…