ಪತ್ರಕರ್ತ, ಲೇಖಕ ವಿಶ್ವೇಶ್ವರ ಭಟ್ ಅವರು ತಮ್ಮ ಸಂಪಾದಕತ್ವದ ‘ವಿಶ್ವವಾಣಿ' ಪತ್ರಿಕೆಯ ಸಂಪಾದಕೀಯ ಕಾಲಂನ ಕೊನೆಯಲ್ಲಿ ಬರೆಯುತ್ತಿರುವ ಪುಟ್ಟ ಪುಟ್ಟ ಬರಹಗಳೇ 'ಸಂಪಾದಕರ ಸದ್ಯಶೋಧನೆ'. ಈ ಬರಹಗಳನ್ನು ತಲಾ ನೂರು ಅಧ್ಯಾಯಗಳಂತೆ ಸಂಗ್ರಹಿಸಿ ಮೂರು ಪುಸ್ತಕಗಳನ್ನು ಹೊರತಂದಿದ್ದಾರೆ. ಈ ಮೂರೂ ಪುಸ್ತಕಗಳಲ್ಲಿ ಯಾವುದನ್ನು ಬೇಕಾದರೂ ಮೊದಲು ಓದಬಹುದು. ಪುಸ್ತಕದಲ್ಲೂ ಯಾವ ಪುಟದಿಂದಲೂ ನಿಮ್ಮ ಓದನ್ನು ಪ್ರಾರಂಭಿಸಬಹುದಾಗಿದೆ ಎಂದು ಲೇಖಕರೇ ಹೇಳಿಕೊಂಡಿದ್ದಾರೆ. ಇದು ನಿಜವೂ ಹೌದು.
ಕಡಿಮೆ ವಾಕ್ಯಗಳಲ್ಲಿ ಹಿಂದೆ ನಡೆದ ಘಟನೆಗಳು, ಮಹನೀಯರ ಬದುಕಿನಲ್ಲಿ ಜರುಗಿದ ಸಂಗತಿಗಳು, ನಮಗೆ ತಿಳಿಯದೇ ಇದ್ದ ಹಲವಾರು ಸಂಗತಿಗಳನ್ನು ವಿಶ್ವೇಶ್ವರ ಭಟ್ ಇವರು ಕಡಿಮೆ ಪದಗಳಲ್ಲಿ…