ಜಗದೀಶ ಬ ಹಾದಿಮನಿ ಅವರು ಬರೆದ ಕಥೆಗಳ ಸಂಗ್ರಹವೇ “ಕಾಡ ನಾಡ ತೋಳಗಳು". ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಶ್ರೀಶೈಲ ಆರ್. ಗೋಲಗೊಂಡ ಇವರು. ತಮ್ಮ ಮುನ್ನುಡಿಯಲ್ಲಿ ಇವರು ಬರೆದ ಅಭಿಪ್ರಾಯಗಳ ಆಯ್ದ ಭಾಗ ಇಲ್ಲಿದೆ...
“ಸಾಹಿತ್ಯದ ಓದು-ಬರಹ ಹಾಗೂ ಸಂಘಟನೆಗಳಲ್ಲಿ ನಿರಂತರತೆಯನ್ನು ಮೈಗೂಡಿಸಿಕೊಂಡಿರುವ ನನ್ನ ಆತ್ಮೀಯ ವಿದ್ಯಾರ್ಥಿ ಮಿತ್ರರೂ ಮತ್ತು ಕನ್ನಡ ಉಪನ್ಯಾಸಕರೂ ಆಗಿರುವ ಜಗದೀಶ, ಬ. ಹಾದಿಮನಿ ಅವರು ಈಗಾಗಲೇ 'ಮುಗ್ಧೆ' ಕವನ ಸಂಕಲನ (2018) 'ಪ್ರೇಮಮಯಿ' ಖಂಡ ಕಾವ್ಯ (2019) ಹಾಗೂ 'ಬೆರಳಚಂದ್ರ'- ಗೀತನಾಟಕ (2020) ಪ್ರಕಟಿಸಿ ಕನ್ನಡ ಕಾವ್ಯ ಲೋಕದಲ್ಲಿ ಪ್ರತಿಭಾ ಸಂಪನ್ನ ಕವಿಯಾಗಿ ಗುರುತಿಸಿಕೊಂಡಿದ್ದಾರೆ. ಅನೇಕ ದಿನಗಳ ಹಿಂದೆಯೆ ನನ್ನನ್ನು ಮುಖತಃ…