ಕಥೆಗಾರ, ಉಪನ್ಯಾಸಕ ಡಾ. ಆನಂದ ಗೋಪಾಲ್ ಅವರು ಬರೆದ ‘ಜ್ಞಾನ ಫಕೀರ ಪ್ರೊ. ಎಂ ಕರೀಮುದ್ದೀನ್' ಎಂಬ ಕೃತಿ ಇತ್ತೀಚೆಗೆ ಬಿಡುಗಡೆಯಾಗಿದೆ. ಟಿಪ್ಪು ಸುಲ್ತಾನ್ ವಂಶಸ್ತನಾಗಿದ್ದುಕೊಂಡು, ಸುಮಾರು ೬ ಭಾಷೆಯಲ್ಲಿ ಪಾಂಡಿತ್ಯವನ್ನು ಹೊಂದಿದ್ದು, ಖ್ಯಾತ ನಾಮ ಸಾಹಿತಿಗಳ ಸಾಂಗತ್ಯದಲ್ಲಿದ್ದೂ ಸರಳ, ಸಜ್ಜನಿಕೆಯಿಂದ ಜಾತ್ಯಾತೀತವಾಗಿ ಬದುಕಿದ ಕರೀಮುದ್ದೀನ್ ಅವರ ಪರಿಚಯ ಈ ಕೃತಿಯಲ್ಲಿ ಮಾಡಲಾಗಿದೆ. ಇವರ ಬಗ್ಗೆ ಲೇಖಕರಾದ ಡಾ. ಆನಂದ್ ಅವರು ತಮ್ಮ ಮುನ್ನುಡಿಯಲ್ಲಿ ಬರೆದದ್ದು ಹೀಗೆ…
“ ಪ್ರೊ. ಎಂ. ಕರೀಮುದ್ದೀನ್ ಸಾಹೇಬರ ಹೆಸರು ಹಳೇ ಮೈಸೂರು ಭಾಗದಲ್ಲಿ ಪ್ರಸಿದ್ಧವಾದುದು. ಅವರ ಪ್ರಸಿದ್ಧಿಗೆ ಎರಡು ಕಾರಣ: ಒಂದು, ಶ್ರೀರಂಗಪಟ್ಟಣ ಇತಿಹಾಸದ ಬಗೆಗೆ ಅವರಿಗಿರುವ ವಿಫುಲ ಜ್ಞಾನ.…