ಸಾಹಿತಿ ಗಂಗಪ್ಪ ತಳವಾರ ಅವರ ವಿನೂತನ ಕಾದಂಬರಿ “ಧಾವತಿ" ಇತ್ತೀಚೆಗೆ ಬಿಡುಗಡೆಯಾಗಿದೆ. ವಿಮರ್ಶಕಿ ಭಾರತೀ ದೇವಿ ಪಿ. ಇವರು ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ. ಅವರು ಬರೆದ ಮುನ್ನುಡಿಯ ಆಯ್ದ ಸಾಲುಗಳು ನಿಮ್ಮ ಓದಿಗಾಗಿ...
“ಕಿಚ್ಚಿಲ್ಲದ ಬೇಗೆ, ಏರಿಲ್ಲದ ಧಾವತಿ ಇವು ಬರಿಕಂಗಳಿಗೆ ಕಾಣದ, ಆದರೆ ಒಳಗೇ ಇರಿಯುವ ನೋವು. ಒಳಗೆ ಚುಚ್ಚಿ ಮುರಿದ ಮುಳ್ಳಿನ ನೋವು ಅದು. ಅಕ್ಕನ ವಚನಗಳಲ್ಲಿ ಬರುವ ಈ ಪದಗಳು ಹಲವು ನೆಲೆಗಳಲ್ಲಿ ನಮ್ಮನ್ನು ತಟ್ಟುತ್ತವೆ. ಭವಗಳಲ್ಲಿ ಏಗಿ ಏಗಿ ದಾಟುವ ಹಾದಿ ಅದು. ಶರಣರು ಸವೆಸುವ ಹಾದಿಗೆ ಮೋಕ್ಷವೆಂಬ ಗಂತವ್ಯ ಇದೆ. ಆದರೆ ಹಲವು ಜೀವಗಳ ಬದುಕಲ್ಲಿ ನೋವೇ ಹಾದಿ ಮತ್ತು ಕೊನೆಯೂ ಕೂಡಾ. ಗಂಗಪ್ಪ ತಳವಾರ್ ಅವರು ತಮ್ಮ‘ಧಾವತಿ’ಯಲ್ಲಿ ಈ…