ಗುರುರಾಜ ಕೋಡ್ಕಣಿ ಬರೆದ ಈ ಹಾರರ್ ಕಥೆಗಳ ಸಂಕಲನದ ಬೆನ್ನುಡಿಯಲ್ಲಿ ಒಂದು ವಿಶೇಷ ಸೂಚನೆ ಇದೆ. “ಒಬ್ಬರೇ ಇರುವಾಗ ಓದದಿರಿ...!! ಓದಿದರೆ ನಾವು ಜವಾಬ್ದಾರರಲ್ಲ...!!” ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಪ್ರಶಾಂತ್ ಭಟ್. ಇವರು ಬರೆದ ಕೆಲವು ಸಾಲುಗಳು…
“ಹಾರರ್ ಕತೆಗಳೆಂದರೆ ನಮಗೆಲ್ಲರಿಗೂ ಕೇಳಲು, ಓದಲು ಭಯ. ಆದರೂ ಕೇಳಲು ಓದಲು ಕಾತರ. ಯಾಕೆಂದರೆ ಅವು ಕೊಡುವ ರೋಮಾಂಚನದ ಎದುರು ಅವು ಹುಟ್ಟಿಸುವ ಭಯ ಗೌಣ. ಗುರುರಾಜರು ಇಲ್ಲಿ ಪುಟ್ಟ ಪುಟ್ಟ ಕತೆಗಳ ಮೂಲಕ ಭಯ ಹುಟ್ಟಿಸುತ್ತಾರೆ. ಇವನ್ನು ಓದಿ ಮಧ್ಯರಾತ್ರಿ ಎಚ್ಚರವಾದರೆ ನೀರು ಕುಡಿಯ ಹೋಗಲೂ, ಒಬ್ಬನೇ ರಾತ್ರಿ ನಡೆದು ಹೋಗಲೂ ಭಯಪಡುವ ಪರಿಸ್ಥಿತಿಯಾಗಿದೆ. ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ…