‘ವಾರೆನ್ ಹೇಸ್ಟಿಂಗ್ಸ್ ನ ಹೋರಿ’ ಎನ್ನುವುದು ಉದಯ ಪ್ರಕಾಶ ಅವರು ಹಿಂದಿಯಲ್ಲಿ ಬರೆದ ಜನಪ್ರಿಯ ಕಿರು ಕಾದಂಬರಿ. ಈ ಕಾದಂಬರಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಪ್ರಕಾಶ ಗರುಡ. ಇವರು ತಮ್ಮ ಅನುವಾದಕರ ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವು ಭಾವನೆಗಳ ಸಾರ ನಿಮ್ಮ ಓದಿಗಾಗಿ…
“ವಾರೆನ್ ಹೇಸ್ಟಿಂಗ್ಸ್ (೧೭೩೨-೧೮೧೮) ಈತ ಬ್ರಿಟಿಷ್ ವಸಾಹತು ಆಡಳಿತದ ಕಾಲಾವಧಿಯಲ್ಲಿ ಬಂಗಾಲ ಪ್ರೆಸಿಡೆನ್ಸಿಯ ಮೊದಲ ಗವರ್ನರ್ ಜನರಲ್ (೧೭೭೨- ೧೭೮೫) ಆಗಿ ಆಡಳಿತ ನಡೆಸಿದ್ದ. ಭಾರತದ ಜನಜೀವನ, ಸಾಹಿತ್ಯ, ಸಂಸ್ಕೃತಿ, ರೀತಿ ನೀತಿಗಳಿಂದ ಆಕರ್ಷಿತನಾಗಿದ್ದರೂ (ತನ್ನ ಆಡಳಿತದ ಕಾಲದಲ್ಲಿ ಏಷಿಯಾಟಿಕ್ ಸೊಸೈಟಿ ಆರಂಭಿಸಿದ್ದು, ಭಗವದ್ಗೀತೆಯ ಇಂಗ್ಲೀಷ್ ಅನುವಾದ ಮಾಡಿಸಿದ್ದು, ಈ ದೇಶದ…