ಎಸ್ ಜಯಶ್ರೀನಿವಾಸ್ ರಾವ್ ಅವರು ಎಸ್ಪೋನಿಯಾ, ಲ್ಯಾಟ್ವಿಯಾ, ಲಿಥುವೇನಿಯಾ ದೇಶದ ಕವಿತೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ‘ಬಾಲ್ಟಿಕ್ ಕಡಲ ಗಾಳಿ’ ಎನ್ನುವ ಹೆಸರಿನ ಈ ಕೃತಿಗೆ ಖ್ಯಾತ ಬರಹಗಾರ ಕೇಶವ ಮಳಗಿ ಅವರು ಮುನ್ನುಡಿಯನ್ನು ಬರೆದು ಹುರಿದುಂಬಿಸಿದ್ದಾರೆ. ಅವರು ಬರೆದ ಮುನ್ನುಡಿಯಿಂದ ಆಯ್ದ ಸಾಲುಗಳು…
“ಕಾವ್ಯಾನುವಾದದಲ್ಲಿ ಸಾಹಸಿ ಮನೋಭಾವದ ಎಸ್. ಜಯಶ್ರೀನಿವಾಸ ರಾವ್ ಆ ಗುಣದಿಂದಾಗಿಯೇ ಇಷ್ಟವಾಗುವ ಕವಿ ಮತ್ತು ಅನುವಾದಕ. ಕನ್ನಡ ಓದುಗರು ಇನ್ನೂ ಮುಖಾಮುಖಿಯಾಗಿರದ ಹೊಸ ಹೊಸ ದೇಶಭಾಷೆಯ ಕವಿಗಳನ್ನು ಹುಡುಕಿ ಅವರು ಅನುವಾದಿಸುವ ಪರಿ ಅನುಕರಣೀಯ. ಮೂಲಕ್ಕೆ ನಿಷ್ಠರಾಗಿ ಅವರು ಅನುವಾದಿಸುವ ಪರಿ ಕೂಡ ಗಮನಾರ್ಹ. ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಯಾಶೀಲರಾದ ಜಯ…