ಅನಿಲ್ ಗುನ್ನಾಪೂರ ಅವರ ನೂತನ ಕಥಾ ಸಂಕಲನ ಸರ್ವೆ ನಂಬರ್ ೯೭. ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ ಪತ್ರಕರ್ತರಾದ ರಘುನಾಥ ಚ.ಹ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳು ನಿಮ್ಮ ಓದಿಗಾಗಿ…
“ಏನನ್ನೋ ಹಂಬಲಿಸುತ್ತ ಯಾವುದರ ಹುಡುಕಾಟದಲ್ಲೋ ನಿರತನಾಗಿರುವುದು ಎಲ್ಲ ಕಾಲದ ಮನುಷ್ಯ ಜೀವನದ ಪ್ರಮುಖ ಲಕ್ಷಣವಾಗಿದೆ. ಆ ಹುಡುಕಾಟವೇ ಬದುಕಿನ ಗುರಿಯೂ ಆಗಿರುತ್ತದೆ. ಹಾಗೆ ಹುಡುಕುವುದು ಸಿಗಬಹುದು ಇಲ್ಲವೇ ಸಿಗದಿರಬಹುದು. ಹುಡುಕುತ್ತಿದ್ದುದು ದೊರೆತಾಗ, ಕೆಲವರಿಗೆ ಸಂತೋಷವಾಗಬಹುದು; ಮತ್ತೆ ಕೆಲವರಿಗೆ, ಈವರೆಗೂ ನಾವು ಹುಡುಕುತ್ತಿದ್ದುದು ಅರ್ಥಹೀನವಾಗಿ ಕಾಣಿಸಿ, ಹುಡುಕಾಟವೇ ನಿರರ್ಥಕವೆನ್ನಿಸಿ ನಿರಾಶೆಯಾಗಬಹುದು. ಹಲವರಿಗೆ ತಾವು ಏನನ್ನು…