ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೪೧ನೇ ಪುಸ್ತಕವೇ ಬಜೆ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ ಮೆಚ್ಚತಕ್ಕದ್ದು. ಈಗಾಗಲೇ ೭೦ ಸಸ್ಯಗಳ (ಹಣ್ಣು, ತರಕಾರಿ) ಬಗ್ಗೆ ಮಾಹಿತಿ ನೀಡುವ ಪುಸ್ತಕಗಳು ಹೊರಬಂದಿವೆ. ಬೇಗದಲ್ಲೇ ಈ ಸಂಖ್ಯೆ ನೂರು ತಲುಪಲಿದೆ.
ಬಜೆ ಎನ್ನುವುದು ಬಹು ಆರೋಗ್ಯಕರ ಸಸ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. “ಪುಟ್ಟ ಮಕ್ಕಳ ನಾಲಿಗೆಗೆ ತೇಯ್ದ ಬಜೆಯನ್ನು ಲೇಪಿಸುವ ಸಂಪ್ರದಾಯ ನಮ್ಮಲ್ಲಿ ಇದೆ. ಇದರಿಂದ ಮಕ್ಕಳ ಮಾತನಾಡುವ ಶಕ್ತಿ ಮತ್ತು ಬುದ್ಧಿ ಬೆಳವಣಿಗೆಗೆ ನೆರವಾಗುತ್ತದೆಂಬ ನಂಬಿಕೆ ಇದೆ. ಆಯುರ್ವೇದದ ಅನೇಕ ಔಷಧಿಗಳಲ್ಲಿ ಬಳಕೆಯಾಗುವ ಬಜೆ…