ಗೋವಾದ ಮೀನುಗಾರ ದಂಪತಿಗಳ ಮಗ ಜುಜೆ ಎಂಬಾತನ ಬದುಕಿನ ಘಟನೆಗಳ ಮೂಲಕ ಗೋವಾದ ಸ್ವಾತಂತ್ರ್ಯ ಹೋರಾಟದ ಕತೆ ಹೇಳುವ ಪುಸ್ತಕ ಇದು. ಸುರೇಖಾ ಪನಂಡಿಕರ್ ಬರೆದಿರುವ ಕತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಕೆ. ಸುಧಾ ರಾವ್.
ಅಲ್ಲಿನ ಸಮುದ್ರತೀರದಲ್ಲಿ ಆಟವಾಡುತ್ತಾ, ಅಪ್ಪ ಪೆಡ್ರೊ ಮತ್ತು ಅಮ್ಮ ಮರಿಯಾಳಿಗೆ ಬೆಳಗ್ಗೆ ಮೀನು ವಿಂಗಡಿಸುವ ಕೆಲಸದಲ್ಲಿ ಸಹಾಯ ಮಾಡುತ್ತಾ ದಿನಗಳೆಯುತ್ತಿದ್ದ ಜುಜೆ. ಶಾಲೆಗೆ ಹೋಗಬೇಕೆಂಬುದು ಅವನ ಕನಸು. ಅದು ಕನಸಾಗಿಯೇ ಉಳಿಯಲು ಕಾರಣ ಅವನ ಹೆತ್ತವರ ಬಡತನ. ಹತ್ತಿರದ ಶಾಲೆಯ ಶುಲ್ಕ ಪಾವತಿಸಲು ಅವರಿಗೆ ಸಾಧ್ಯವಿರಲಿಲ್ಲ.
ಒಮ್ಮೆ ವಯಸ್ಕರೊಬ್ಬರು ಸಮುದ್ರತೀರಕ್ಕೆ ಬರುತ್ತಾರೆ. ಅಲ್ಲಿ ಅಡ್ಡಾಡುತ್ತಿದ್ದ ಜುಜೆಗೆ ವಿವಿಧ ಸಮುದ್ರ ಚಿಪ್ಪುಗಳ ಬಗ್ಗೆ ತಿಳಿಸಿ, ಅವನ್ನು ಸಂಗ್ರಹಿಸಬೇಕೆಂದೂ ಅವನ್ನೆಲ್ಲ…