ಕನ್ನಡದ ಖ್ಯಾತ ಅಂಕಣಕಾರ, ಲೇಖಕ ಪ್ರೇಮಶೇಖರ ಇವರು ಬರೆದ ಪುಟ್ಟ ಕಾದಂಬರಿ ‘ಮಳೆ'. ಈ ಕಾದಂಬರಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಅನುರಾಧಾ ಪಿ ಎಸ್ ಇವರು. ಬೆನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಸಾಲುಗಳು ನಿಮ್ಮ ಓದಿಗಾಗಿ...
“ಕಥೆಗಾರ, ಅವನೊಳಗೊಬ್ಬ ಚಿತ್ರಗಾರ. ಅವನ ಕಥೆಗಳ ಅಪೂರ್ವ ಅಭಿಮಾನಿ ಚಾರುಲತಾಳಿಂದ ತನ್ನ ಪೋರ್ಟ್ ರೇಟ್ ಮಾಡಿಕೊಡುವಂತೆ ಬರುವ ಕೋರಿಕೆ. ಅವಳ ವಿಶಿಷ್ಟ ವ್ಯಕ್ತಿತ್ವ ಹಾಗೂ ತನ್ನ ಕಥನಕ್ರಮದ ಮೇಲೆ ಅವಳ ಅಭಿಪ್ರಾಯ, ಸಲಹೆಗಳಿಂದಾದ ಸತ್ಪರಿಣಾಮಗಳ ದೆಸೆಯಿಂದ ಮೋಡಿಗೊಳಗಾದವನಂತೆ ಅವಳನ್ನು ಕಾಣಲು ಅತೀವ ಆತುರದಲ್ಲಿ ಅವಳೂರಿನೆಡೆಗೆ ಹೊರಡುವ ಕಥೆಗಾರ, ಮಳೆ ಕಾಡೀತೆಂದು ಅವಳು ಎಚ್ಚರಿಸಿದರೂ ಲೆಕ್ಕಿಸದೇ ಬೈಕ್ ನಲ್ಲಿ ಹೊರಟು,…