ಪುಸ್ತಕ ಸಂಪದ

  • ‘Red ವೈನ್ ‘ ಎಂಬ ೧೭೨ ಪುಟಗಳ ಕವನ ಸಂಕಲನವನ್ನು ಹೊರತಂದಿದ್ದಾರೆ ಭರವಸೆಯ ಕವಯತ್ರಿ ವಿ ನಿಶಾ ಗೋಪಿನಾಥ್ ಅವರು. ಅವರ ಕವನ ಸಂಕಲನಕ್ಕೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ಡಾ. ಡಿ ಎಸ್ ಚೌಗಲೆ ಇವರು. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ ಇಲ್ಲಿದೆ...

    “ನೀಲಿನಕ್ಷತ್ರ' ಕವನ ಸಂಕಲನದ ಮೂಲಕ ಭರವಸೆ ಮೂಡಿಸಿದ ಕವಿ ವಿ.ನಿಶಾ ಗೋಪಿನಾಥ್ ಅರವತ್ತು ಪ್ರೇಮ ಕವಿತೆಗಳ 'ರೆಡ್ ವೈನ್' ಕೃತಿ ಮೂಲಕ ಕಾವ್ಯ ಕ್ಷೇತ್ರದಲ್ಲಿ ತಮ್ಮ ಗಟ್ಟಿ ಹೆಜ್ಜೆಗಳನ್ನು ಊರಿದ್ದಾರೆ. ಖರೇ ಅರ್ಥದ ಭಾವ ಜಗತ್ತು ಅಭಿವ್ಯಕ್ತಗೊಳ್ಳುವುದು ಮನುಷ್ಯನ ಅಮೂರ್ತರೂಪದ ವಿಕ್ಷಿಪ್ತ, ಪ್ರೇಮ, ವಿರಹ, ತಳಮಳ, ಖಿನ್ನತೆ, ಸೂಕ್ಷ್ಮ- ಇಂಥ ಉತ್ಕರ್ಷಗಳ ಮಧ್ಯೆ ಇಲ್ಲಿ ಹುಟ್ಟುವ…

  • ೧೪೦ ಪುಟಗಳ ಸೊಗಸಾದ ಕವನಗಳ ಸಂಕಲನವೇ ಕಾವ್ಯ ದೀವಿಗೆ. ವರುಣ್ ರಾಜ್ ಮತ್ತು ಧನುಷ್ ಶೇಖರ್ ಎಂಬವರು ಈ ಸಂಕಲನದ ಕವನಗಳನ್ನು ಸಂಪಾದಿಸಿದ್ದಾರೆ. ಬಹಳಷ್ಟು ಉದಯೋನ್ಮುಖ ಕವಿಗಳ ಕವನಗಳು ಈ ಸಂಕಲನ ಒಳಗೊಂಡಿದೆ. ಸ್ವತಃ ಕವಿಗಳಾಗಿರುವ ಅಮರ್ ಬಿ ಎನ್ನುವವರು ಸುದೀರ್ಘವಾದ ಮುನ್ನುಡಿಯನ್ನು ಬರೆದಿದ್ದಾರೆ. ಹಲವು ಕವನಗಳನ್ನು ಸತ್ವಭರಿತವಾಗಿ ವಿಮರ್ಶೆ ಮಾಡಿದ್ದಾರೆ. ಅವರು ಬರೆದ ಮುನ್ನುಡಿಯ ಆಯ್ದ ಭಾಗ ನಿಮ್ಮ ಓದಿಗಾಗಿ...

    “ವರುಣ್‌ ರಾಜ್ ಜಿ ಮತ್ತು ಧನುಷ್ ಎಚ್ ಶೇಖರ್ ಅವರ ಸಂಪಾದಕತ್ವದಲ್ಲಿ ‘ಕಾವ್ಯ ದೀವಿಗೆ’ ಕವನ ಸಂಕಲನ ಹೊರಬರುತ್ತಿದೆ. ಹೊಸ ತಲೆಮಾರಿನ, ಉದಯೋನ್ಮುಖ ಕವಿಗಳ, ಕವಿತೆಗಳ ಆಗರವಿದು. ಹೆಸರು ಮಾಡಿದ, ಪಳಗಿದ ಕವಿಗಳಿಂದ ಕವನಗಳನ್ನು ಸಂಗ್ರಹಿಸಿ ಪ್ರಕಟಿಸುವುದು…

  • ಇದೊಂದು ಅಪರೂಪದ ಪುಸ್ತಕ. ಇದರಲ್ಲಿವೆ ನಮ್ಮ ಬದುಕನ್ನು ಬೆಳಗಿಸಬಲ್ಲ ನೀತಿಯ ಮಾತುಗಳು. ಇದರ 10,000 ಪ್ರತಿಗಳನ್ನು 10 ಸಪ್ಟಂಬರ್ 1973ರಲ್ಲಿ ಮುದ್ರಿಸಲಾಗಿತ್ತು ಎಂದರೆ ನಂಬುತ್ತಿರಾ? ಈಗ ಕನ್ನಡದ ಹಲವು ಪುಸ್ತಕಗಳ ಕೇವಲ 500 ಪ್ರತಿಗಳನ್ನು ಮುದ್ರಿಲಾಗುತ್ತಿದೆ. ಇದನ್ನು ಗಮನಿಸಿದಾಗ, ಐವತ್ತು ವರುಷಗಳ ಮುಂಚೆ, ಕನ್ನಡ ಪುಸ್ತಕಗಳನ್ನು ಓದುವವರ ಸಂಖ್ಯೆ ಹಲವು ಪಟ್ಟು ಜಾಸ್ತಿಯಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ, ಅಲ್ಲವೇ?

    ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯ ಗ್ರಂಥಗಳಿಂದ ಆಯ್ದ ನೈತಿಕ ದೃಷ್ಟಿಯಿಂದ ಅರ್ಥಪೂರ್ಣವಾದ ಉಕ್ತಿಗಳನ್ನು ಓದುವವರು ಸಂಖ್ಯೆಯೂ ಐವತ್ತು ವರುಷಗಳ ಮುಂಚೆ ಸಾಕಷ್ಟು ಇತ್ತು ಎಂಬುದೂ ಇದರಿಂದ ಸ್ಪಷ್ಟವಾಗುತ್ತದೆ.

    ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟು ಇಂತಹ ಪುಸ್ತಕದ ರಚನೆಗಾಗಿ ಈ…

  • ವಿಭಿನ್ನ ಭಾಷಾ ಪ್ರಯೋಗದ ‘ಕಾವ್ಯುತ್ಯೋಗರ' ಎಂಬ ಕೃತಿಯನ್ನು ಬರೆದಿದ್ದಾರೆ ಲೇಖಕರಾದ ಬಸವರಾಜ ಕೋಡಗುಂಟಿ ಇವರು. ತಮ್ಮ ೧೩೪ ಪುಟಗಳ ಈ ಪುಟ್ಟ ಪುಸ್ತಕದೊಳಗೆ ಏನಿದೆ ಎಂಬ ಬಗ್ಗೆ ಅವರ ಮಾತುಗಳಲ್ಲೇ ಓದೋಣ ಬನ್ನಿ...

    “ಬೇಂದ್ರೆ ಶಬ್ದಗಾರುಡಿಗನೆಂದು ಕನ್ನಡದೊಳಗೆ ಪ್ರಸಿದ್ದ. ಹಾಗೆಯೆ ಬೇಂದ್ರೆ ಅರ್ತಗಾರುಡಿಗನೂ ಹವುದು. ಶಬ್ದಗಳ ಜೋಡಣೆಯೆ ಕುಶಲತೆಯೆಂದು ಅಲ್ಲಿಗೆ ನಿಲ್ಲುವುದು ಮಾತಿನ ಮೋಡಿಯೊ, ಮಾಟವೊ ಆಗಬಹುದು. ಅದರಾಚೆಗೆ ಹೋಗಿ ಅರ್ತಗಳನೊಡೆದೊಡೆದು ಎಲ್ಲವನು ಚೆಲ್ಲಾಪಿಲ್ಲಿಯಾಗಿ ಚೆಲ್ಲಿ ಎಲ್ಲರಿಗೂ ಎಲ್ಲವೂ ದಕ್ಕುವ ಬ್ರಮೆಯನ್ನು ತರುವುದು ಅರ್ತಮಾಂತ್ರಿಕತೆ. ಆದರೆ ಇದು ಬ್ರಮೆಯಂತೆ ಕಾಣುವುದು. ತುಸು ನಿಂತು ಓದಿದಾಗ ಸ್ಪಶ್ಟತೆಗಳಿಗಿಂತ ಅಸ್ಪಶ್ಟತೆಗಳೆ, ಅರ್ತಗಳಿಗಿಂತ…

  • "ಡುಮಿಂಗ" ಎಂಬ ಕಚಗುಳಿಯಿಕ್ಕುವ ಹೆಸರು ಹೊತ್ತ ಶಶಿ ತರೀಕೆರೆಯವರ ಮೊದಲ ಕಥಾಸಂಕಲನ ಇದು. ಈ ಕತೆಗಳನ್ನು ಓದುವಾಗ ಶಶಿ ತರೀಕೆರೆಯವರು ಕಥೆಗಳಿಗೆ ಹೊಸಬರೆನ್ನುವುದು(?) ನಂಬಲಾಗದ ವಿಷಯ. ಇಲ್ಲಿರುವ ಕತೆಗಳನ್ನು ಹೊಸ ಮನಸ್ಥಿತಿಯಿಂದ ಧ್ಯಾನಿಸಿ ಬರೆದಂತಿವೆ. ಇಂದಿನ ಪೀಳಿಗೆಯ ಮಾನಸಿಕ ತಲ್ಲಣಗಳು ಮತ್ತು ದಿನೇ ದಿನೇ ದ್ವೀಪವಾಗುತ್ತಾ ಜಟಿಲಗೊಳ್ಳುತ್ತಿರುವ ಅವರ ಭಾವನಾಜಗತ್ತಿನ ಇಣುಕು ನೋಟವಿದೆ.

    ಈ ಸಂಕಲನದ ಬಗ್ಗೆ ಮೂರು ವಿಷಯಗಳನ್ನು ಹೇಳಬೇಕು. ಒಂದು ಕತೆಗಳ ಭಾಷೆ ಮತ್ತು ನಿರೂಪಣಾ ಶೈಲಿ. ಜೇಡಿ ಮಣ್ಣನ್ನು ಬೇಕಾದ ಆಕಾರಕ್ಕೆ ತಿಕ್ಕಿ, ತೀಡಿ ಬಳಸಬಹುದಾದಷ್ಟೇ ಲೀಲಾಜಾಲವಾಗಿ ಭಾಷೆಯನ್ನು ದುಡಿಸಿಕೊಂಡಿರುವ ಪರಿ ಹೊಸದು. ಅದೇ ಹಸಿ ಮಣ್ಣಿಗೆ ಹರಳು ಎಸೆದಂತೆ ಕತೆಗಳೂ ಸಹ…

  • “ಜಿನ್ನ್ ಮತ್ತು ಪರ್ಷಿಯನ್ ಕ್ಯಾಟ್" ಎಂಬ ವಿಭಿನ್ನ ಹೆಸರಿನ ಕಥಾ ಸಂಕಲನವನ್ನು ಹೊರ ತಂದಿದ್ದಾರೆ ಭರವಸೆಯ ಕಥೆಗಾರರಾದ ಮುನವ್ವರ್ ಜೋಗಿಬೆಟ್ಟು ಇವರು. ಸುಮಾರು ೧೧೦ ಪುಟಗಳ ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಮತ್ತೊರ್ವ ಕತೆಗಾರ ಕೇಶವ ಮಳಗಿ ಇವರು. ಇವರು ಬರೆದ ಮುನ್ನುಡಿಯ ಆಯ್ದ ಸಾಲುಗಳು ನಿಮಗಾಗಿ...

    “ತಮ್ಮ ‘ಇಶ್ಖಿನ ಒರತೆಗಳು’ ಕವನ ಸಂಕಲನದಿಂದ ಕೆಲವು ಓದುಗರಿಗಾದರೂ ಪರಿಚಿತರಾದ ಮುನವ್ವರ್ ಜೋಗಿಬೆಟ್ಟು ಇದೀಗ ಹೊಸ ಕಥಾ ಸಂಕಲನದ ಮೂಲಕ ಓದುಗರನ್ನು ಮತ್ತೊಮ್ಮೆ ಮುಖಾಮುಖಿಯಾಗುತ್ತಿದ್ದಾರೆ. ಕಥಾ ಓದುಗರಿಗೂ ಅವರೇನು ಅಪರಿಚಿತರಲ್ಲ. ಈ ಸಂಕಲನದ ಎಂಟೂ ಕಥೆಗಳು ಬೇರೆ ಬೇರೆಡೆ ಪ್ರಕಟವಾಗಿವೆ. ಸಂಕಲನದ ಉತ್ತಮ ಕಥೆಗಳಲ್ಲಿ ಒಂದಾದ ‘ಜಿನ್ನ್’ ಪ್ರಜಾವಾಣಿ…

  • ಕವಿತಾ ಸಾಲಿಮಠ ಅವರ ಗಝಲ್ ಗಳ ಸಂಗ್ರಹವೇ “ದರ್ದಿಗೆ ದಾಖಲೆಗಳಿಲ್ಲ". ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಹೈದರ್ ಹೈ. ತೋರಣಗಲ್ಲು ಇವರು. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳು ಹೀಗಿವೆ…

    ಭಾವಕ್ಕೆ ಜೀವ ಕೊಟ್ಟ ಕವಿತ
    ತನ್ ಉಜಲಾ ಮನ್ ಮೈಲಾ
    ಸಾಧು ನಾಮ್ ಅನೇಕ್
    ಹಮ್ ಸೆ ತೋ ಕಾಲಾ ಕವ್ವ ಭಲಾ
    ಜೋ ಅಂದರ್ ಬಹಾರ್ ಏಕ್

    ಶತಮಾನಗಳ ಹಿಂದೆ ಬರೆದ ಸಂತ ಕಬೀರ ದಾಸರ ಈ ದೋಹ ಅಂತರಂಗದ ಮಲೀನತೆಯನ್ನ ತೊಳೆದು ಒಳ ಹೊರದ ಆತ್ಮ ಶುದ್ದಿಗೆ ಅನುವಾಗಲು ಎಚ್ಚರಿಸುವ ದ್ವಿಪದಿಯಾಗಿದೆ. ಕಾಗೆ ಒಳಗೂ ಹೊರಗೂ ಒಂದೇ ತೆರನಾದ ಗುಣ ಸ್ವಭಾವದ ಪಕ್ಷಿಯಾಗಿದೆ. ಮನುಷ್ಯ ಹಾಗಲ್ಲ.…

  • ‘ಕುಟುಂಬ' ಎಂಬ ಕಥಾ ಸಂಕಲನವನ್ನು ಸಂಪಾದಿಸಿದ್ದಾರೆ ಶೈಲಜಾ ಸುರೇಶ್ ಇವರು. ೧೬೦ ಪುಟಗಳ ಈ ಸಂಕಲನದ ಪ್ರಾರಂಭದ ಕತೆಗಳಾದ ಮಮತಾಮಯಿ, ವರ್ಜಿನ್ ಬೇಬಿ ಇಂತಹ ದಿಟ್ಟ ಮನೋಭಾವದ ಮುಟ್ಟುವಿಕೆಯಾಗಿದೆ. ಯೋಧನ ಮಡದಿ, ಕಡಲಿನಾಚೆಯ ಕುಡಿಗಳು... ಮೊದಲಾದವು ಪ್ರಸ್ತುತ ವಿಷಯಗಳೇ, ಉಳಿದ ಕೆಲವು ಕತೆಗಳಲ್ಲೂ ಪ್ರಕೃತಿ ವರ್ಣನೆ ಸೂರೆಯಾಗಿರುವುದನ್ನು ನೋಡಿದರೆ ಮಹಿಳಾ ಸಾಹಿತ್ಯಕ್ಕಿದ್ದ ಒಂದು ಅಪವಾದ ದೂರವಾದಂತೆನಿಸಿತು" ಎನ್ನುತ್ತಾರೆ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ ಲೇಖಕಿ ಎಸ್‌.ವಿ. ಪ್ರಭಾವತಿ. ಅವರು ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ...

    “ಪ್ರಗತಿಶೀಲ ಪಂಥದ ಒಂದು ಹಂತದಲ್ಲಿ ಒಂದು ಉದ್ದೇಶದಿಂದ ಅನಕೃ ಪ್ರಾರಂಭಿಸಿದ 'ಕನ್ನಡ ಕಾದಂಬರಿ ಓದುವ…

  • ‘ನೀ ದೂರ ಹೋದಾಗ’ ಇದು ಫೌಝಿಯಾ ಸಲೀಂ ಅವರ ಕಾದಂಬರಿ. ಕಾದಂಬರಿ ಬರೆಯುವವರೇ ಅಪರೂಪವಾಗಿರುವಾಗ ಇವರು ಬರೆದ ಕಾದಂಬರಿಯು ಹೊಸ ಆಕಾಂಕ್ಷೆಯನ್ನು ಹುಟ್ಟುಹಾಕುತ್ತದೆ. ಹೆಣ್ಣು ಮಗಳೊಬ್ಬಳು ಕಷ್ಟ ಪಟ್ಟು ದುಡಿದು, ಯಾರ ಸಹಾಯವನ್ನೂ ಕೋರದೆ ಹಣ ಗಳಿಸಿ ದೂರದ ದುಬೈಗೆ ಹೋಗುವ ಸಂಗತಿಯನ್ನು ಕಾದಂಬರಿಯಲ್ಲಿ ರೋಚಕವಾಗಿ ವರ್ಣಿಸಿದ್ದಾರೆ. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಮೋಹನ್ ಕುಮಾರ್ ಟಿ. ಇವರು. ಇವರ ಮುನ್ನುಡಿಯ ಕೆಲವು ಸಾಲುಗಳು ನಿಮ್ಮ ಓದಿಗಾಗಿ...

    “ಫೌಝಿಯಾ ಸಲೀಂ(ದುಬೈ)ರವರ ನಾಲ್ಕನೆಯ ಕಾದಂಬರಿ 'ನೀ ದೂರ ಹೋದಾಗ...' ಇದು ಹೆಣ್ಣೂಬ್ಬಳು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಜೀವನದ ಕಥನ ಎಂದರೆ ತಪ್ಪಾಗಲಾರದು. ತನಗಾಗಿ ತನ್ನ ತನಕ್ಕಾಗಿ ಪ್ರತಿಕ್ಷಣವೂ ಹೋರಾಡುತ್ತ…

  • ಶಿವಕುಮಾರ ಮಾವಲಿ ಅವರ ಮೊದಲ ಕಥಾ ಸಂಕಲನ `ದೇವರು ಅರೆಸ್ಟ್ ಆದ’. ಇಲ್ಲಿಯ ಕತೆಗಳ ನವೀನ ನಿರೂಪಣೆ, ಸೃಜನಾತ್ಮಕತೆ, ನವಿರಾದ ಹಗುರ ಭಾವಗಳು ಓದಿನೊಂದಿಗೆ ನಮ್ಮದಾಗುತ್ತದೆ. ತಮ್ಮ ತಾಜಾತನದ ಕತೆಯ ಎಳೆಯೊಂದಿಗೆ ಸಮ್ಮೋಹನಗೊಳಿಸುವಲ್ಲಿ ಯಶಸ್ವಿಯಾಗುತ್ತವೆ. ೧೦೪ ಪುಟಗಳ ಈ ಪುಟ್ಟ ಕಥಾ ಸಂಕಲನದ ಎಲ್ಲಾ ಕತೆಗಳು ಓದುವಂತಿವೆ.

    'ದೇವರು ಅರೆಸ್ಟ್ ಆದ’ ಕತೆಯು ಬರಹಕ್ಕೂ ಬದುಕಿಗೂ ಸಂಬಂಧವಿಲ್ಲದೆ ನಾಡಿಗೆ ಬುದ್ಧಿ ಹೇಳುವ ಆಷಾಡಭೂತಿಗಳ ಬಣ್ಣ ಬಯಲು ಮಾಡುತ್ತದೆ. ಮೇಲ್ನೋಟಕ್ಕೆ ಸರಳವಾದ ಕತೆ ಎನಿಸಿಕೊಂಡರೂ ಆಳದಲ್ಲಿ ವಿಶೇಷ ಅನುಭವಗಳನ್ನು ಕಟ್ಟಿಕೊಡುತ್ತದೆ. ಶಿವಕುಮಾರ ಮೂಲತಃ ರಂಗಭೂಮಿಯವರಾದ್ದರಿಂದ ಅವರು ಬಳಸಿರುವ ವ್ಯಂಗ್ಯ ಮಿಶ್ರಿತ ಮಾತುಗಳು, ಕೊಟ್ಟು ತೆಗೆದುಕೊಳ್ಳುವ…