ಪುಸ್ತಕ ಸಂಪದ

  • ಗಿರಿಮನೆ ಶ್ಯಾಮರಾವ್ ಅವರ “ಮಲೆನಾಡಿನ ರೋಚಕ ಕತೆಗಳು” ಸರಣಿಯ ಹದಿಮೂರನೇ ಪುಸ್ತಕವೇ “ಮೃಗ ಬೇಟೆ". ಈಗಾಗಲೇ ೧೨ ಪುಸ್ತಕಗಳು ಈ ಸರಣಿಯಲ್ಲಿ ಪ್ರಕಟವಾಗಿದ್ದರೂ ಎಲ್ಲಿಯೂ ರೋಚಕತೆಗೆ ಕಡಿಮೆಯಾಗದಂತೆ ಓದುಗರನ್ನು ಮುಂದಿನ ಸರಣಿ ಪುಸ್ತಕಕ್ಕೆ ಕಾಯುವಂತೆ ಮಾಡುವುದೇ ಗಿರಿಮನೆಯವರ ಬರವಣಿಗೆಯ ಹೆಗ್ಗಳಿಕೆ ಎಂದರೆ ತಪ್ಪಾಗಲಾರದು. ಕಾಡಿನ ಪರಿಸರದಲ್ಲೇ ಬಹಳಷ್ಟು ವರ್ಷಗಳನ್ನು ಕಳೆದ ಗಿರಿಮನೆಯವರಿಗೆ ಅಲ್ಲಿಯ ಕಥೆಗಳನ್ನು ಬಹಳ ಸೊಗಸಾಗಿ, ರಸವತ್ತಾಗಿ ಹೇಳುವ ಕಲೆ ಕರತಲಾಮಲಕವಾಗಿದೆ. 

    ‘ಮೃಗಬೇಟೆ' ಬಗ್ಗೆ ಅವರೇ ಬೆನ್ನುಡಿಯಲ್ಲಿ ಹೇಳುವಂತೆ “ ಇವರು ದುಷ್ಟರು, ಇವರು ಶಿಷ್ಟರು ಎಂದೇನೂ ನೋಡದೆ ಪ್ರಕೃತಿ ಎಲ್ಲರಿಗೂ ಆಶ್ರಯ ಕೊಡುತ್ತದೆ. ಆದರೆ ದುಷ್ಟರು ಕೂಡಾ ಮಾಡಿದ್ದನ್ನು…

  • "ಒಬ್ಬರು ಇನ್ನೊಬ್ಬರನ್ನು ಪ್ರೀತಿಸಿ, ಆದರೆ ಪ್ರೇಮವನ್ನು ಬಂಧನವಾಗಿಸಿಕೊಳ್ಳಬೇಡಿ; ಬದಲಿಗೆ ಅದು ನಿಮ್ಮಿಬ್ಬರ ಆತ್ಮಗಳ ದಂಡೆಗಳ ನಡುವೆ ಹರಿದಾಡುವ ಸಾಗರವಾಗಿರಲಿ" -ಖಲೀಲ್ ಗಿಬ್ರಾನ್

    ಶಿವಶಂಕರ ಕಡದಿನ್ನಿ ಇವರು ಬಹಳ ಸೊಗಸಾದ ಗಜಲ್ ಗಳನ್ನು ಒಟ್ಟುಗೂಡಿಸಿ ‘ಒಡಲು ಉರಿದಾಗ' ಎಂಬ ಸಂಕಲನವಾಗಿ ಹೊರತಂದಿದ್ದಾರೆ. ಈ ೮೪ ಪುಟಗಳ ಪುಟ್ಟ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಮಲ್ಲಿನಾಥ ಎಸ್ ತಳವಾರ ಇವರು. ಅವರ ಮುನ್ನುಡಿಯಲ್ಲಿ ವ್ಯಕ್ತವಾದ ಭಾವಗಳು ಹೀಗಿವೆ...

    ಒಡಲು ತಂಪಾಗಿರಲಿ...!! "ಈ ವೈಭವ, ಈ ಮರ್ಯಾದೆ, ಈ ವರ್ತನೆಯನ್ನು ಕಾಪಾಡಿಕೊಂಡಿರುವ ನಿಮ್ಮ ಆಸೆಗಳಿಂದ ಹೃದಯದಲ್ಲಿರುವ ಸಂತನನ್ನು ಕಾಪಾಡಿಕೊಂಡಿರು"

  • ರಾಷ್ಟ್ರಕವಿ ಕುವೆಂಪು ಅವರ ಎಂಟು ಕತೆಗಳ ಸಂಕಲನ ಇದು. ಎಂಟು ದಶಕಗಳ ಮುಂಚೆ ಬರೆದ ಸಣ್ಣ ಕತೆಗಳಾದರೂ ಇವು ಇಂದಿಗೂ ಪ್ರಸ್ತುತ.

    ಮೊದಲ ಕತೆ "ನನ್ನ ದೇವರು". ಮದುವೆಯಾಗಿ ಒಂದೇ ವರುಷದಲ್ಲಿ ತನ್ನ ಪತಿಯನ್ನು ಕಳೆದುಕೊಂಡ ಯುವತಿಯೊಬ್ಬಳ ಮನದ ತುಮುಲಗಳ ಕತೆಯಿದು. ಭೀಷಣ ಜ್ವರದಿಂದ ಅವಳ ಪತಿ ತೀರಿಕೊಂಡರು. ಅವಳ ಸ್ವಗತ ಆ ಸಂದರ್ಭದ ದಾರುಣತೆಯನ್ನು ಹೀಗೆ ತಿಳಿಸುತ್ತದೆ:  “ಮರುದಿನದಲ್ಲಿ ಶ್ಮಶಾನದಲ್ಲಿ ನನ್ನ ಕೈಬಳೆ ಒಡೆದರು. ನನ್ನ ಮೈಮೇಲಿದ್ದ ಆಭರಣಗಳನ್ನೆಲ್ಲ ತೆಗೆದರು. ಮಂಗಲಸೂತ್ರ ಬಿಚ್ಚಿದರು. … ನಾನು ಮಾವನ ಮನೆಗೆ ಬಂದ ಒಂದು ವರುಷದಲ್ಲಿಯೆ ನನ್ನ ಸಕಲ ಸೌಭಾಗ್ಯವೂ ಬದಿದಾಯಿತು. ನನಗಾಗ ಹದಿನೈದು ತುಂಬಿತ್ತು …" ಕ್ರಮೇಣ ಅವಳಲ್ಲಿ ಕೌಮಾರ್ಯ ತುಂಬಿ ತುಳುಕತೊಡಗಿತು. ಅವಳ ಭಾವನಿಗೆ ಆಗ 27 ವರುಷ ವಯಸ್ಸು. (ಅವಳ ಪತಿಗಿಂತ ಮೂರು ವರುಷ…

  • ಸಮಕಾಲೀನ ಕನ್ನಡ ಲೇಖಕರಲ್ಲಿ ಪ್ರಸಿದ್ಧರಾಗಿರುವ ವಿವೇಕ ಶಾನಭಾಗ ಅವರು ಕಳೆದ ಕೆಲವು ವರ್ಷಗಳಲ್ಲಿ ರಚಿಸಿದ ೬ ಕಥೆಗಳು ‘ಘಾಚರ್ ಘೋಚರ್' ಕಥಾ ಸಂಕಲನದಲ್ಲಿ ಕೂಡಿವೆ. ಘಾಚರ್ ಘೋಚರ್, ನಿರ್ವಾಣ, ಕೋಳಿ ಕೇಳಿ ಮಸಾಲೆ, ರಿಸ್ಕ್ ತಗೊಂಡು, ಸುಧೀರನ ತಾಯಿ, ವಿಚಿತ್ರ ಕತೆ – ಇವು ಈ ಸಂಕಲನದಲ್ಲಿರುವ ವಿವೇಕರ ಕಥೆಗಳು.

    ಈ ಪುಸ್ತಕದ ಮುನ್ನುಡಿ ‘ಒಂದೆರಡು ಮಾತು' ಇಲ್ಲಿ ವಿವೇಕರು ತಮ್ಮ ಅನಿಸಿಕೆಗಳನ್ನು ಬಿಚ್ಚಿಟ್ಟಿದ್ದಾರೆ. ಅವರ ಪ್ರಕಾರ “ಪ್ರಸ್ತುತ ಸಂಕಲನದ ಕತೆಗಳು ಕಳೆದ ಏಳು ವರ್ಷಗಳ ಅವಧಿಯಲ್ಲಿ ಬರೆದವು. ಇವುಗಳನ್ನು ಬರೆದಂತೆಲ್ಲ ಪ್ರಕಟನೆಯ ಮುನ್ನವೇ ಓದಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ಆತ್ಮೀಯರು ಹಲವರು. ಇವರ ವಿಮರ್ಶೆಯ ಓರೆಗಲ್ಲನ್ನು ನೆಚ್ಚಿ ನಾನು ಬರೆಯುತ್ತೇನೆ.…

  • ‘ನಿಗೂಢ ನಾಣ್ಯ' ಕೃತಿಯ ಲೇಖಕರಾದ ವಿಠಲ್ ಶೆಣೈ ಇವರು ಮತ್ತೊಂದು ಕುತೂಹಲ ಭರಿತ ಕಾದಂಬರಿಯನ್ನು ಹೊರತಂದಿದ್ದಾರೆ. ಈ ಕಾದಂಬರಿಯ ಬಗ್ಗೆ ಲೇಖಕರಾದ ವಿಠಲ್ ಶೆಣೈ ಅವರು ತಮ್ಮ ಮಾತುಗಳಲ್ಲಿ ಹೇಳುವುದು ಹೀಗೆ…

    “ಇದು ಪ್ರಾಯಶಃ ಬಲು ಚಿಕ್ಕ ಮುನ್ನುಡಿ- ನನ್ನುಡಿ! ನನ್ನ ಮೂರನೇ ಕಾದಂಬರಿ ಬರೆಯಲು ಪ್ರೇರಣೆ ಯೂಟ್ಯೂಬ್ ನಲ್ಲಿ ನಾನು ನೋಡಿದ ಒಂದು ವಿಡಿಯೋದಲ್ಲಿ ಗಮನಿಸಿದ ಒಂದು ಕುತೂಹಲಕಾರಿ ಅಂಶ. ಅದರ ಬಗ್ಗೆ ಹೆಚ್ಚು ಹೇಳಲು ಹೋದರೆ ಈ ಕತೆಯ ಒಂದು ಮುಖ್ಯ ಸಾರವೇ ಹೊರಬೀಳಬಹುದು. ೨೦೨೦ರ ಕೊರೋನಾ ಲಾಕ್ ಡೌನಿನ ಕಾರಣದಿಂದ ಸಿಕ್ಕಿದ ಬಿಡುವು, ಈ ಕಾದಂಬರಿಯನ್ನು ಬರೆಯುವ ವೇಗವನ್ನು ಐದು ಪಟ್ಟು ಹೆಚ್ಚಿಸಿತು. ಈ ಕಾದಂಬರಿಯ ಬಾಲ ನಾಯಕ ಕಿಟ್ಟಿ ನಮ್ಮ ದೇಶದಲ್ಲಿ ನಿಜವಾಗಿಯೂ ಹುಟ್ಟಿ…

  • “ಕೋಡಗನ ಕೋಳಿ ನುಂಗಿ"ಯ ಲೇಖಕ ಮಹಾದೇವ ಬಸರಕೋಡ ಅವರ ಕೃತಿಯ ಲೇಖನಗಳಲ್ಲಿ ಒಂದು ಸ್ಪಷ್ಟ ಚಿಂತನೆಯಿದೆ. ಅವರ ಯೋಚನೆಗಳಲ್ಲಿ ದ್ವಂದ್ವ, ತರ್ಕ ಕಾಣುವುದಿಲ್ಲ. ಲೇಖಕರ ದೃಷ್ಟಿಕೋನವು ಜನರ ಬದುಕಿನ ಯೋಚನೆಗಳ ಕಡೆ ಗಮನ ಹರಿಸದೇ, ಅವರ ಅಂತರಂಗದ ಕಲ್ಮಷಗಳಿಗೆ ಕನ್ನಡಿ ಇಟ್ಟು ಅದರ ಪರಿಶುದ್ಧತೆಯ ಕಡೆಗೆ ಗಮನ ಹರಿಸಿದೆ. ನಮ್ಮಲ್ಲಿನ ಅಂಧತ್ವ, ಮೂಢನಂಬಿಕೆಗಳು, ಆಚರಣೆಗಳು ತೊಲಗಿ ಸಮಾಜಮುಖಿ ಜಾಗೃತಿಯ ಚಿಂತನೆಯಲ್ಲಿ ಮುಳುಗಬೇಕು ಎಂಬ ತಿಳಿಮಾತನ್ನು ಅವರು ಈ ಕೃತಿಯ ಮೂಲಕ ಮನವರಿಕೆ ಮಾಡಿ ಕೊಟ್ಟಿದ್ದಾರೆ" ಎನ್ನುತ್ತಾರೆ ಲೇಖಕ ಶ್ರೀಧರ ಬನವಾಸಿ. ಅವರು ಲೇಖಕ ಮಹಾದೇವ ಬಸರಕೋಡ ಅವರ 'ಕೋಡಗನ ಕೋಳಿ ನುಂಗಿ' ಕೃತಿಗೆ ಬರೆದಿರುವ ಮುನ್ನುಡಿ ನಿಮ್ಮ ಓದಿಗಾಗಿ ಇಲ್ಲಿ ನೀಡಲಾಗಿದೆ...

    “…

  • ಸಾವಯವ ಕೃಷಿಕ, ಗ್ರಾಹಕ ಬಳಗ ಇವರು ಈಗಾಗಲೇ ಎರಡು ಪುಟ್ಟದಾದ ಮಾಹಿತಿ ಪೂರ್ಣ ಪುಸ್ತಕಗಳನ್ನು ಹೊರತಂದಿದ್ದಾರೆ. ಇದೇ ಮಾಲಿಕೆಯ ಮೂರನೆ ಪುಸ್ತಕ ಸವಿತಾ ಎಸ್ ಭಟ್ ಅಡ್ವಾಯಿ ಅವರ ‘ಮರೆತು ಹೋಗುತ್ತಿರುವ ಪೌಷ್ಟಿಕ ಅಡುಗೆಗಳು'. ರಾಜ್ಯದ ಬಹುತೇಕ ಪತ್ರಿಕೆಗಳಲ್ಲಿ ಸವಿತಾ ಎಸ್ ಭಟ್ ಅವರ ಅಡುಗೆಯ ಬಗ್ಗೆ ಬರೆದ ಬರಹಗಳು ಬೆಳಕು ಕಂಡಿವೆ. ಅಡುಗೆ ಪುಸ್ತಕಗಳು ಬಿಡುಗಡೆಯಾಗಿವೆ. ಆದರೆ ಇಲ್ಲಿರುವ ಪುಟ್ಟ ಪುಸ್ತಕದಲ್ಲಿ ಅವರು ಪೌಷ್ಟಿಕ ಆಹಾರದ ಅಗತ್ಯತೆಯನ್ನು ಪೂರೈಸುವ ಅಡುಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. 

    ಸವಿತಾ ಎಸ್ ಭಟ್ ಅವರು ತಮ್ಮ ‘ಅಡುಗೆಯೆಂಬ ಅದ್ಭುತ' ಎಂಬ ಮಾತಿನಲ್ಲಿ ವ್ಯಕ್ತ ಪಡಿಸಿದ ಭಾವನೆಗಳು ಹೀಗಿವೆ. “ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ"…

  • ಭಾರತದ ಜನಪ್ರಿಯ ಮಕ್ಕಳ ಪುಸ್ತಕಗಳ ಲೇಖಕರಾದ ರಸ್ಕಿನ್ ಬಾಂಡ್ ಅವರ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದವರು ಅಹಲ್ಯಾ ಚಿಂತಾಮಣಿ. ರಸ್ಕಿನರ  ಹಲವಾರು ಇಂಗ್ಲಿಷ್ ಪುಸ್ತಕಗಳು ಭಾರತದ ಅನೇಕ ಭಾಷೆಗಳಿಗೆ ಅನುವಾದವಾಗಿವೆ.

    ಚಿತ್ರಗಳಿರುವ ಈ ಪುಸ್ತಕದಲ್ಲಿವೆ ಎರಡು ಭಾಗಗಳು: ಅಂಕಲ್ ಕೆನ್ ಮತ್ತು ಪಲಾಯನದ ಸಾಹಸ ಯಾತ್ರೆ. ಮೊದಲ ಭಾಗದ ಆರು ಅಧ್ಯಾಯಗಳಲ್ಲಿ ಲೇಖಕರು ತನ್ನ ಮಾವ ಕೆನ್ ಅವರ ವಿಚಿತ್ರ ಸ್ವಭಾವಗಳನ್ನು ಪರಿಚಯಿಸುತ್ತಾರೆ. "ಸೋಮಾರಿ ಅಂಕಲ್ ಕೆನ್” ಅಧ್ಯಾಯದಲ್ಲಿ, ಆ ಆಸಾಮಿಯ ಬಗ್ಗೆ ಅವರು ಬರೆದಿರುವ ಕೆಲವು ಮಾತುಗಳು: (ಬೆಟ್ಟದ ತಾಣಕ್ಕೆ ಹೋಗಿದ್ದ ಕೆನ್ ಅಂಕಲ್‌ಗೆ ದಾರಿ ತಪ್ಪಿ, ಒಯ್ದ ಆಹಾರ ಮುಗಿದು, ಸುಸ್ತಾಗಿ ಮನೆಗೆ ಮರಳಿದ ಬಳಿಕ ಎರಡು ದಿನ ರಸ್ಕಿನ್ ಮತ್ತು ಅಜ್ಜಿ  ಅಂಕಲ್ ಮನೆಗೆ ಊಟ ಒಯ್ದು ಕೊಡುತ್ತಿದ್ದರು. ಆ…

  • ಇತ್ತೀಚೆಗೆ ಯೋಗ ಶಿಕ್ಷಣದ ಬಗ್ಗೆ ಜನರಲ್ಲಿ ಕುತೂಹಲ ಮತ್ತು ಆಸಕ್ತಿ ಹೆಚ್ಚಾಗುತ್ತಿದೆ. ಈ ವಿಷಯದಲ್ಲಿ ಈಗಾಗಲೇ ಹಲವಾರು ಮಹತ್ವಪೂರ್ಣ ಕೃತಿಗಳು ಹೊರಬಂದಿವೆ. ಅದೇ ಸಾಲಿಗೆ ಸೇರುವ ಮತ್ತೊಂದು ಮಹತ್ವದ ಕೃತಿ ‘ಯೋಗರತ್ನ'  ನಾಗರಾಜ ಇವರು “ಪ್ರಸನ್ನ ಕಾಯ, ಮನ, ಇಂದ್ರೀಯ ಮತ್ತು ಆತ್ಮವೇ ಆರೋಗ್ಯ ಎನ್ನುವ ಚರಕ ಮಹರ್ಷಿಯ ಮಾತುಗಳನ್ನು ಉಲ್ಲೇಖಿಸಿದ್ದಾರೆ. ತಮ್ಮ ಬರವಣಿಗೆಯಲ್ಲಿ ವಚನಕಾರರ ಅನೇಕ ವಚನಗಳನ್ನು, ಸರ್ವಜ್ಞ ಕವಿಯ ತ್ರಿಪದಿಗಳನ್ನು ಸಾಂದರ್ಭಿಕವಾಗಿ ಬಳಸಿದ್ದಾರೆ. ಯೋಗ-ವ್ಯಾಯಾಮಗಳ ನಡುವಿನ ವ್ಯತ್ಯಾಸಗಳನ್ನು ವಿವರಿಸಿದ್ದಾರೆ. ಇದು ಇವರ ಚೊಚ್ಚಲ ಕೃತಿ ಎಂದರೆ ನಂಬುವುದಕ್ಕೆ ಆಗದಷ್ಟು ಪರಿಣಿತಿಯನ್ನು ತೋರಿದ್ದಾರೆ" ಎನ್ನುತ್ತಾರೆ ಕೃತಿಗೆ ಮುನ್ನುಡಿಯನ್ನು ಬರೆದ ಖ್ಯಾತ ಮನೋವೈದ್ಯ ಸಿ.ಆರ್.ಚಂದ್ರಶೇಖರ್…

  • “ಪುಸ್ತಕದ ಉದ್ದಕ್ಕೂ ಸಾಕಷ್ಟು ಭೌಗೋಳಿಕ ವಿವರಗಳಿದ್ದು, ಬರೆಯುವ ಮುನ್ನ ಇವರು ಮಾಡಿರಬಹುದಾದ ತತ್ಸಂಬಂಧಿ ಅಧ್ಯಯನ ಸ್ಪಷ್ಟವಾಗಿ ಗೋಚರಿಸುತ್ತದೆ. ಓದುಗನಿಗೆಷ್ಟು ಗೊತ್ತಾದೀತು ಮಹಾ ಎಂಬ ಉದಾಸೀನ, ಉಡಾಫೆಯಿಂದ ಬರೆಯುವವರ ನಡುವೆ ಇವರು ಭಿನ್ನವಾಗಿ ನಿಲ್ಲುತ್ತಾರೆ. ಬಹಳ ಕಡಿಮೆ ಓದಿರುವ ನನ್ನ ಜ್ಞಾನದ ಪರಿಧಿಯನ್ನು ಈ ಪುಸ್ತಕ ವಿಸ್ತರಿಸಿದೆ” ಎನ್ನುವುದು ನನ್ನ ಅನಿಸಿಕೆ. ಲೇಖಕ ಮಂಜುನಾಥ್‌ ಕುಣಿಗಲ್‌ ಅವರ ಕುಣಿಗಲ್‌ ಟು ಕಂದಹಾರ್‌ ಕೃತಿಗೆ ಬರೆದಿರುವ ನಾನು ಬರೆದ ವಿಮರ್ಶೆ ನಿಮ್ಮ ಓದಿಗಾಗಿ...

    “ಶಾಲೆ ಕಾಲೇಜು ಓದುತ್ತಿದ್ದ ಹೊತ್ತಿನಲ್ಲಿ ಓದಿದ ಇತಿಹಾಸದ ತುಂಬೆಲ್ಲ ದಿನಾಂಕ ಇಸವಿಗಳೇ ತುಂಬಿ ಓದುವ ಆಸಕ್ತಿ ಕುಂದಿಸಿತ್ತು. ಚರಿತ್ರೆಯೆಂದರೆ ಬರೀ ಅವಷ್ಟೇ ಅಲ್ಲ ಎಂದು…