“ಇಲ್ಲಿಯ ಕಥೆಗಳಲ್ಲಿ ಬಲಿಯಾಗುವ ಯಾರೊಬ್ಬರೂ ತಪ್ಪಿತಸ್ತರಲ್ಲ ಎನ್ನುವುದು ಕೇಡಿನ ಭೀಕರತೆಯನ್ನು ಹೆಚ್ಚು ಮಾಡುತ್ತದೆ. ಕತೆಗಾರ ಮಲ್ಲಿಕಾರ್ಜುನ ಅವರು ಸಹಜವಾಗಿ ಕಟ್ಟಿದ ಕಥೆಗಳು ನಮ್ಮ ಅಂತರಂಗಕ್ಕೆ ಇಳಿಯುತ್ತವೆ. ಆದರೆ ಕೆಲವು ಸಲ ಅವರು ಮಹತ್ವಾಕಾಂಕ್ಷಿಯಿಂದ ಕಥೆಗಳಲ್ಲಿ ಇಣುಕಿದಾಗ ಕಥೆ ಓದುಗರ ಪರಿಧಿಯಿಂದ ದೂರ ಹೋಗುತ್ತದೆ ಎನ್ನಿಸುತ್ತದೆ” ಲೇಖಕ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ದೀಡೆಕೆರೆ ಜಮೀನು ಪುಸ್ತಕಕ್ಕೆ ನಾನು ಬರೆದ ಮುನ್ನುಡಿ ನಿಮ್ಮ ಓದಿಗಾಗಿ...
ಕನ್ನಡದಲ್ಲಿ ಗ್ರಾಮೀಣ ಸಂವೇದನೆಯ ಕತೆಗಳಿಗೆ ಬರ ಎಂಬುದಿಲ್ಲ. ನಮ್ಮ ಕತೆಗಳ ಜೀವ ಚೈತನ್ಯಕ್ಕೆ ಗ್ರಾಮ ಜಗತ್ತಿನ ಹಲವಾರು ಗೋಜಲುಗಳು, ದ್ವಂದ್ವಗಳು, ಹರಾಹರಿಗಳೇ ಮೂಲದ್ರವ್ಯವಾಗಿವೆ. ಹೊರ ಜಗತ್ತಿನಲ್ಲಿ…