ಪುಸ್ತಕ ಸಂಪದ

  • ಖ್ಯಾತ ಉದ್ಯಮಿಯೂ, ಅಂಕಣಕಾರರೂ ಆಗಿರುವ ಎಸ್ ಷಡಾಕ್ಷರಿಯವರ ‘ಕ್ಷಣ ಹೊತ್ತು ಆಣಿಮುತ್ತು' ಕೃತಿಯ ೯ನೇ ಭಾಗ ‘ಕತ್ತೆಗಳು-ಕುದುರೆಗಳು' ಎಂಬ ಹೆಸರಿನಲ್ಲಿ ಬಿಡುಗಡೆಯಾಗಿದೆ. ಈ ಸರಣಿಯ ಹಿಂದಿನ ೮ ಪುಸ್ತಕಗಳು ಈಗಾಗಲೇ ಮಾರಾಟದಲ್ಲಿ ದಾಖಲೆಯನ್ನು ಬರೆದಿದೆ. ಖ್ಯಾತ ಲೇಖಕರಾದ ಎಸ್ ಎಲ್ ಭೈರಪ್ಪನವರು ಮೊದಲ ಭಾಗಕ್ಕೆ ಬರೆದ ಮುನ್ನುಡಿಯನ್ನೇ ಈ ಪುಸ್ತಕದಲ್ಲೂ ಬಳಸಿಕೊಂಡಿದ್ದಾರೆ. 

    ಲೇಖಕರಾದ ಷಡಕ್ಷರಿಯವರು ತನ್ನ ‘ನನ್ನುಡಿ' ಯಲ್ಲಿ ಬರೆದದ್ದು ಹೀಗೆ “ ‘ಕ್ಷಣ ಹೊತ್ತು ಆಣಿಮುತ್ತು' ಎಂಬ ಹೆಸರಿನ ಅಂಕಣ ೨೦೦೭ರ ಮೇ ತಿಂಗಳ ೨೯ರಂದು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಆರಂಭವಾಯಿತು. ಪ್ರತಿದಿನ ಪ್ರಕಟವಾಗುತ್ತಿದ್ದ ಈ ಅಂಕಣ ಜನರ ಮೆಚ್ಚುಗೆಯನ್ನು ಗಳಿಸಿತು. ಈ ಅಂಕಣ ಮಾಲಿಕೆಯ ಮೊದಲ…

  • “ಮಜೇದಾರ್ ಮೈಕ್ರೋಸ್ಕೋಪು" ಎನ್ನುವ ವಿಭಿನ್ನ ಹೆಸರಿನ ಪುಸ್ತಕವನ್ನು ಬರೆದವರು ಖ್ಯಾತ ವಿಜ್ಞಾನ ಲೇಖಕರಾದ ಕೊಳ್ಳೇಗಾಲ ಶರ್ಮ ಇವರು.  “ವಿಜ್ಞಾನ ಜಗತ್ತನ್ನು ಕೆಲವರು ಐವರಿ ಟವರ್ (ದಂತಗೋಪುರ) ಎನ್ನುವುದೂ ಉಂಟು. ಅಲ್ಲಿನ ನಡವಳಿಕೆಗಳು, ಅಲಿಖಿತ ನೀತಿ, ನಿಯಮಾವಳಿಗಳು, ಸಂಬಂಧಗಳು ಹಾಗೂ ಸಾಧನಗಳೆಲ್ಲವೂ ಬಳಸುವ ಭಾಷೆ, ಹೊರಗಿನವರಿಗೆ ವಿಚಿತ್ರ ಎನ್ನಿಸುವುದುಂಟು" ಎನ್ನುತ್ತಾರೆ ಕೊಳ್ಳೇಗಾಲ ಶರ್ಮರು. ಇವರು  "ಮಜೇದಾರ್ ಮೈಕ್ರೋಸ್ಕೋಪು" ಕೃತಿಗೆ ಬರೆದ ಲೇಖಕರ ನುಡಿಯ ಪ್ರಮುಖ ಮಾತುಗಳು ಹೀಗಿವೆ... 

    “ವಿಜ್ಞಾನ ಲೇಖನಗಳಲ್ಲಿ ಹಲವು ಬಗೆಗಳಿವೆ. ಸುದ್ದಿ, ವಿಚಾರ, ನುಡಿಚಿತ್ರಗಳ ಬಗ್ಗೆಯಲ್ಲ ಈ ಮಾತು, ಉದ್ದೇಶಕ್ಕೆ ಅನುಗುಣವಾಗಿ ಕನಿಷ್ಟ ಮೂರು ಬಗೆಯನ್ನು ನೋಡಬಹುದು.…

  • ಈ ಪುಸ್ತಕದ 2ನೇ ಭಾಗದಲ್ಲಿಯೂ ನಾಲ್ಕು ಕತೆಗಳಿವೆ. ಮೊದಲ ಕತೆ "ಪ್ರಸಿದ್ಧ ಬೌದ್ಧ ವಿಹಾರ ಕಾರ್ಲಾ". ಎರಡು ಸಾವಿರ ವರುಷ ಹಿಂದೆ ಭಾರತದ ಪಶ್ಚಿಮ ಕರಾವಳಿಯ ಸಾಲಿನಲ್ಲಿದ್ದ ಬೆಟ್ಟ ಕಾರ್ಲಾ. ಅದರ ಬುಡದಲ್ಲಿದ್ದ ಹಳ್ಳಿಯ ವಾಸಿ ಜೀಮೂತನೆಂಬ ಕುರುಬ (ಕ್ರಿಸ್ತಶಕ ಎರಡನೇ ಶತಮಾನದಲ್ಲಿ). ಆತ ತಬ್ಬಲಿ. ತನ್ನ ಚಿಕ್ಕಪ್ಪ - ಚಿಕ್ಕಮ್ಮನ ಆಸರೆಯಲ್ಲಿ ಅವನ ಜೀವನ. ಕುರಿಮೇಕೆಗಳನ್ನು ಬೆಟ್ಟಕ್ಕೆ ಬೆಳಗ್ಗೆ ಒಯ್ದರೆ ಅವನು ಮನೆಗೆ ಹಿಂತಿರುಗುವುದು ಕತ್ತಲಾಗುವಾಗ. ಉಗ್ರಕೋಪಿಯಾದ ಚಿಕ್ಕಮ್ಮ ಅವನಿಗೆ ಇಡೀ ದಿನದಲ್ಲಿ ತಿನ್ನಲು ಕೊಡುತ್ತಿದ್ದದ್ದು ಒಂದು ರೊಟ್ಟಿ!  ಆಗಲೇ ಚಕ್ರವರ್ತಿ ಅಶೋಕ ತೀರಿಕೊಂಡು ನಾಲ್ನೂರು ವರುಷ ದಾಟಿದ್ದವು. ಬೌದ್ಧಧರ್ಮ ಎಲ್ಲ ಕಡೆಯೂ ವ್ಯಾಪಿಸಿತ್ತು. ಎಲ್ಲೆಲ್ಲೂ ಬೌದ್ಧಮತೀಯರ ಸಂಘಗಳು. ಕಾರ್ಲಾದ ಗುಹಾಂತರ ದೇವಾಲಯ ಆಗ ದಕ್ಷಿಣ…

  • ಪುರಾತನ ಕಾಲದ ಕತೆಗಳನ್ನು ಮಕ್ಕಳಿಗಾಗಿ ಸಾದರ ಪಡಿಸಿದ್ದಾರೆ ಎಂ. ಚೋಕ್ಸಿ ಮತ್ತು ಪಿ. ಎಂ. ಜೋಷಿಯವರು. ಆ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಎಂ.ವಿ. ನಾರಾಯಣ ರಾವ್. ಕತೆಗಳಿಗೆ ಚಂದದ ಚಿತ್ರಗಳನ್ನು ಬರೆದಿದ್ದಾರೆ ಪುಲಕ್ ಬಿಶ್ವಾಸ್. ಇದು ಎರಡು ಭಾಗಗಳಲ್ಲಿ ಮುದ್ರಣವಾಗಿರುವ ಪುಸ್ತಕ.

    ಮೊದಲ ಕತೆ "ಆ ಪುರಾತನ ಮೊಹೆಂಜೊದಾರೋ ನಗರದಲ್ಲಿ”. ಐದು ಸಾವಿರ ವರುಷ ಹಿಂದಿನ ಕಾಲದಲ್ಲಿ ಅಲ್ಲಿನ ಜನಜೀವನ ಹೇಗಿತ್ತು ಎಂಬುದನ್ನು ಸರಳ ಭಾಷೆಯಲ್ಲಿ ತಿಳಿಸುವ ಕತೆ. ಹುಡುಗರ ತಂಡವೊಂದು ಕೆಲವರ ಮನೆಗೆ ಭೇಟಿ ನೀಡುತ್ತದೆ. ಆ ಮೂಲಕ ಮೊಹೆಂಜೊದಾರೋ ನಗರದಲ್ಲಿ ವಿವಿಧ ವೃತ್ತಿಯ ಜನರು ಏನೇನು ಮಾಡುತ್ತಿದ್ದರು ಎಂಬುದು ಓದುಗರಿಗೆ ತಿಳಿಯುತ್ತದೆ. ವೀರೋಚನನ ಮಗ ಹೈರಾಪ ತಂದೆಯ ಕಾರ್ಖಾನೆಗೆ ಹೋಗುತ್ತಾನೆ. ಅಲ್ಲಿ ಬಳಪದ ಕಲ್ಲುಗಳ ರಾಶಿ. ವೀರೋಚನ…

  • “ಸಾಮಾಜಿಕ ಜೀವನವನ್ನು ಆಧರಿಸಿ ವಾಸ್ತವದ ಜನಜೀವನವನ್ನೇ ಬಳಸಿ ಕಥೆಗಳನ್ನು ಹೆಣೆದಿರುವುದು ವಿಶೇಷ. ಪ್ರತಿ ಕಥೆಯಲ್ಲೂ ಒಂದು ಎಚ್ಚರದ ದನಿ ಇದೆ. ಹಳ್ಳಿ ಹಳ್ಳಿ ತಿರುಗುವ ಕಣಿ ಹೇಳುವವರು, ಸುಡುಗಾಡು ಸಿದ್ದರು ಇವರೆಲ್ಲರ ಮಾತು ಸತ್ಯವಾಗಲೂ ಹೇಗೆ ಸಾಧ್ಯ? ಎಂದು ಪ್ರಶ್ನಿಸುತ್ತಲೇ ಅವರ ಮಾತಿನ ಮೋಡಿಗೊಳಗಾಗಿ ಅವರು ಕೇಳಿದ್ದನ್ನೆಲ್ಲ ಕೊಡುವ ಹಳ್ಳಿಯ ಪರಿಸರದ ಮುಗ್ಧ ಹೆಣ್ಣು, ಕಣಿ ಹೇಳುವವರ ಚಾಲಾಕಿತನ, ಇವೆಲ್ಲವೂ ನಮ್ಮ ಸುತ್ತವೇ ನಡೆದಂತೆ ಭಾಸವಾಗುತ್ತದೆ'', ಎನ್ನುವುದು ನನ್ನ ಅನಿಸಿಕೆ. ಸುಧಾ ಎಂ. ಅವರ ‘ಅಪೂರ್ಣವಲ್ಲ’ ಕೃತಿಯ ಕುರಿತು ನಾನು ಬರೆದಿರುವ ವಿಮರ್ಶೆ ನಿಮ್ಮ ಓದಿಗಾಗಿ...

    “‘ಅಪೂರ್ಣವಲ್ಲ’ ಸುಧಾ ಎಂ. ಅವರ ಪ್ರಕಟಿತ ಕಥಾ ಸಂಕಲನ. ಸ್ವಸ್ತಿ ಪ್ರಕಾಶನದಿಂದ…

  • ರಾಜು ಹೆಗಡೆ ಇವರು ಬರೆದ ಕವಿತೆಗಳ ಸಂಕಲನೇ ‘ಕಣ್ಣಿನಲಿ ನಿಂತ ಗಾಳಿ' ನಮ್ಮ ಸಾವಧಾನ ಮತ್ತು ಅವಧಾನವನ್ನು ಉದ್ದಕ್ಕೂ ಬಯಸುವ ಈ ಪದ್ಯಗಳ ಸಂಕಲನದ ಕುರಿತು ಪ್ರೀತಿಯಿಂದ ನಾಲ್ಕು ಮಾತು ಬರೆದಿದ್ದಾರೆ ಪತ್ರಕರ್ತ, ಲೇಖಕ ‘ಜೋಗಿ’. ಅವರ ಹೇಳುವಂತೆ ರಾಜು ಹೆಗಡೆ ಕವಿತೆಗಳನ್ನು ಒಪ್ಪಿಸುತ್ತಾ ಹೋಗುತ್ತಾರೆ. ಒಪ್ಪಿಗೆಗಾಗಿ ಕಾಯುವುದಿಲ್ಲ. ಅವರ ಕವಿತೆಗಳೂ ಕೂಡ ತಮ್ಮನ್ನು ಪೂರ್ತಿಯಾಗಿ ಒಪ್ಪಿಸಿಕೊಂಡು ಸುಮ್ಮನುಳಿಯುತ್ತವೆ. ಜೋಗಿ ಅವರು “ಕಣ್ಣಿನಲಿ ನಿಂತ ಗಾಳಿ” ಕವಿತೆಗಳ ಕೃತಿಗೆ ಬರೆದ ಮುನ್ನುಡಿಯ ಆಯ್ದ ಭಾಗಗಳು ಇಲ್ಲಿವೆ...

    “ಕವಿತೆ ಹೇಗಿರಬೇಕು ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಏನೇ ಹೇಳಿದರೂ ಅದು ಉತ್ತರಿಸಿದವನ ಅಪೇಕ್ಷೆ ಮತ್ತು ಮಿತಿಯಷ್ಟೇ ಆಗಿರುತ್ತದೆ. ಆದರೆ ಕವಿತೆ…

  • ವಿದ್ಯಾಭಾರತಿ ಕರ್ನಾಟಕ ಇವರು “ನಮ್ಮ ರಾಷ್ಟ್ರ ನಿರ್ಮಾಪಕರು" ಎಂಬ ಪುಸ್ತಕದಲ್ಲಿ ಭಾರತ ಮಾತೆಯ ಹೆಮ್ಮೆಯ ಮಕ್ಕಳ ಬಗ್ಗೆ ವಿವರಗಳನ್ನು ನೀಡಿದ್ದಾರೆ. ಈ ಪುಸ್ತಕದ ಹಿಂದಿ ಮೂಲ ಡಾ॥ ಶ್ಯಾಮಸುಂದರ ತ್ರಿಪಾಠಿ ಮತ್ತು ಇದನ್ನು ಕನ್ನಡಕ್ಕೆ ಅನುವಾದ ಮಾಡಿದವರು ಶ್ರೀಮತಿ ಮಾಲತಿ ಎಂ. ಕಾನಿಟ್ಕರ್. ಈ ಬರಹಗಳನ್ನು ಸಂಪಾದಿಸಿದವರು ಡಾ॥ ಹಿಮ್ಮತ್ ಸಿಂಹ್ ಸಿನ್ಹಾ ಇವರು. 

    ಲೇಖಕರಾದ ಶ್ಯಾಮಸುಂದರ ತ್ರಿಪಾಠಿ ಇವರು ತಮ್ಮ ನುಡಿಯಲ್ಲಿ “ನಮ್ಮ ರಾಷ್ಟ್ರ ನಿರ್ಮಾಪಕರ ಸಂಕ್ಷಿಪ್ತ ಪರಿಚಯ ನೀಡುವಂತಹ ಒಂದು ಪುಸ್ತಕವನ್ನು ಬರೆಯಬೇಕೆಂಬ ಇಚ್ಛೆ ಅನೇಕ ದಿನಗಳಿಂದ ಮನದಲ್ಲಿತ್ತು. ಮಾನನೀಯ ಲಜ್ಜಾರಾಮ ತೋಮರರು ಜಯಪುರದಲ್ಲಿನ ವಿಶಾಲವಾದ ಸಂಶೋಧನಾ ಕೊಠಡಿಯಲ್ಲಿ ನಡೆಸಿದ ಬೈಠಕ್ ನನ್ನನ್ನು ಈ…

  • “ಅನಗತ್ಯ ಮತ್ತು ಕುತೂಹಲ ಇಲ್ಲದ ಸಾಕಷ್ಟು ಸಂಗತಿಗಳನ್ನು ಬಿಟ್ಟು ಮಂಡೇಲಾ ಅವರ ಬದುಕಿನ ಎಲ್ಲ ಮುಖ್ಯ ಘಟ್ಟಗಳನ್ನು ಮತ್ತು ಸ್ವಾರಸ್ಯಕರವಾದ ವಿಷಯಗಳನ್ನು ಇಲ್ಲಿ ತೆಗೆದುಕೊಳ್ಳಲಾಗಿದೆ. ಮಂಡೇಲಾ ಅವರು ಬರೆದಿರುವ ಆತ್ಮಕಥೆಯ ಶೈಲಿ ಅಸಾಧಾರಣವಾಗಿದೆ. ಅವರ ಬದುಕು ಕೂಡ ಕತ್ತಲ ಖಂಡ ಆಫ್ರಿಕಾದ ಇತಿಹಾಸದ ಒಂದು ಮುಖ್ಯ ಅಧ್ಯಾಯವಾಗಿದೆ,” ಎನ್ನುತ್ತಾರೆ ಲೇಖಕ ಎಂ. ವೆಂಕಟಸ್ವಾಮಿ. ಅವರು ತಮ್ಮ ‘ನೆಲ್ಸನ್ ಮಂಡೇಲಾ ಜೀವನಚರಿತ್ರೆ’ ಕೃತಿಗೆ ಬರೆದಿರುವ ಲೇಖಕರ ಮಾತು ನಿಮ್ಮ ಓದಿಗಾಗಿ...

    “ನೆಲ್ಸನ್ ಮಂಡೇಲಾ ಅವರ ಆತ್ಮಕಥೆ ಜಗತ್ತಿನ ಪ್ರಖ್ಯಾತ ಆತ್ಮಕಥೆಗಳ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಯೂರೋಪ್ ಅಥವಾ ಬಿಳಿಯ ಜನರು ದಕ್ಷಿಣ ಆಫ್ರಿಕಾದ ನೋಡಬಹುದಾಗಿದೆ. ಅದು ಆಫ್ರಿಕಾ,…

  • ಕಪ್ಪು ವರ್ಣದ ಚೂಪು ಹಲ್ಲುಗಳ ವ್ಯಕ್ತಿಯೊಬ್ಬನ ಮುಖಪುಟವನ್ನು ಹೊಂದಿರುವ ‘ಓಟಾ ಬೆಂಗ' ಎಂಬ ಪುಸ್ತಕವು ಹಲವು ಬರಹಗಳ ಸಂಕಲನ. ಲೇಖಕರಾದ ರೋಹಿತ್ ಚಕ್ರತೀರ್ಥ ಇವರು ಬೇರೆ ಬೇರೆ ಸಂದರ್ಭಗಳಲ್ಲಿ ವಿವಿಧ ಪತ್ರಿಕೆಗಳಿಗೆ ಬರೆದ ಚುಟುಕು ಬರಹಗಳು ಪುಸ್ತಕದ ರೂಪದಲ್ಲಿ ಹೊರಬಂದಿವೆ. ಈ ಬರಹಗಳಲ್ಲಿ ಸುಖಕ್ಕಿಂತ ಅಧಿಕ ದುಃಖದ ಛಾಯೆ ಇದೆ. 

    ಪುಸ್ತಕದ ಪುಟ ತೆರೆದಂತೆ ‘ಓಟಾ ಬೆಂಗ' ಸೇರಿ ೧೧ ಅಧ್ಯಾಯಗಳಿವೆ. ಪ್ರತಿಯೊಂದು ಅಧ್ಯಾಯವನ್ನು ಓದಿದಾಗಲೂ ನೋವು ಸಹಜವಾಗಿ ಕಾಡುತ್ತದೆ. ಒಂದಿಷ್ಟು ಅದೃಷ್ಟ ಕೈ ಹಿಡಿದಿದ್ದರೆ ಈ ಅಧ್ಯಾಯದಲಿನ ವ್ಯಕ್ತಿಗಳ ಬದುಕು ಇನ್ನೇನೋ ಆಗಿ ಬಿಡುತ್ತಿತ್ತು ಎಂದು ಅನಿಸುತ್ತದೆ. ಪುಸ್ತಕದ…

  • ನಿನ್ನೆ ಪ್ರಕಟವಾದ ಭಾಗ-1ರಲ್ಲಿ ಈ ಪುಸ್ತಕದ “ಮಕ್ಕಳಿಗಾಗಿ" ಮತ್ತು “ದೊಡ್ಡವರಿಗಾಗಿ" ಎಂಬ 2 ಭಾಗಗಳ ಮಾಹಿತಿ ನೀಡಲಾಗಿತ್ತು.

    "ಕಲಿಯುವುದು" ಎಂಬ ಕೊನೆಯ ಅಧ್ಯಾಯ ಹೀಗೆ ಆರಂಭವಾಗುತ್ತದೆ: "ಮಕ್ಕಳು ಏಕೆ ಶಾಲೆಗೆ ಹೋಗುತ್ತಾರೆ? ಅವರು ಏಕೆ ತರಗತಿಯಲ್ಲಿ ಕುಳಿತುಕೊಳ್ಳಬೇಕು? ಅವರು ಏಕೆ ಟೀಚರ್ ಹೇಳಿಕೊಡುವ ಪಾಠಗಳನ್ನು ಕೇಳಿಸಿಕೊಳ್ಳಬೇಕು? ಶಾಲೆಗೆ ಹೋಗುವುದಕ್ಕಿಂತ ಇಡೀ ದಿನ ಆಡುತ್ತಾ ಓಡುತ್ತಾ ಕಳೆಯುವುದೇ ಎಷ್ಟೋ ಚೆನ್ನಾಗಿರುತ್ತದೆ ಎಂದು ಬಹಳ ಮಕ್ಕಳಿಗೆ ಅನ್ನಿಸಬಹುದು." ಮುಂದುವರಿದು, ಪ್ರಾಣಿಗಳು ಮತ್ತು ಮನುಷ್ಯರಿಗೆ ಒಂದು ದೊಡ್ಡ ಶಕ್ತಿ ಇದೆ. ಅದೇ ಕಲಿಕೆಯ ಶಕ್ತಿ. ಹೊಸತನ್ನು ತಿಳಿಯುವ ನಿರಂತರ ಕ್ರಿಯೆಯೇ ಕಲಿಕೆ; ಅದು ಈಗಾಗಲೇ ತಿಳಿದಿರುವ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವ ಕ್ರಿಯೆಯೂ ಹೌದು ಎಂದು ವಿವರಿಸಲಾಗಿದೆ.…