ಕೇವಲ ೫೨ ಪುಟಗಳಲ್ಲಿ ಬಹಳ ಸೊಗಸಾದ ಕವಿತೆಗಳನ್ನು ಕಟ್ಟಿಕೊಟ್ಟಿದ್ದಾರೆ ಉದಯೋನ್ಮುಖ ಕವಯತ್ರಿ ಡಿ. ಅರುಂಧತಿ. ಇವರು ಬರೆದ ಕವನಗಳ ಸಂಕಲನ “ಜೀವಜಾಲದ ಸಗ್ಗ” ದ ಬಗ್ಗೆ ಲೇಖಕರಾದ ಜಿ ವಿ ಆನಂದಮೂರ್ತಿ ತಮ್ಮ ಮುನ್ನುಡಿಯಲ್ಲಿ ಹೀಗೆ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ...
“ಸಾರ್ವಜನಿಕ ಜೀವನ, ದಲಿತ ಮತ್ತು ರೈತ ಚಳವಳಿಗಳೊಂದಿಗಿನ ನಿರಂತರ ಸಂಪರ್ಕ, ಮಹಿಳಾ ಸಂಘಟನೆ, ಸಾಹಿತಿ ಕಲಾವಿದರೊಂದಿಗೆ ಬೆರೆವ ಗುಣ, ನಿರ್ಲಕ್ಷಿತ ಸಮುದಾಯಗಳಿಗೆ ತೋರುವ ಕಾರುಣ್ಯ ಹಾಗೂ ವೈದ್ಯ ವೃತ್ತಿಯಲ್ಲಿ ಹಲವಾರು ದಶಕಗಳಿಂದ ತಮ್ಮನ್ನು ಇಡಿಯಾಗಿ ತೊಡಗಿಸಿಕೊಂಡಿರುವ ಡಾ. ಅರುಂಧತಿ ತುಮಕೂರಿನ ಪ್ರಗತಿಪರ ವಲಯದಲ್ಲಿ ಕೇಳಿಬರುವ ಗೌರವದ ಹೆಸರು. ಸಂಕೋಚ ಹಾಗೂ ಸದಾ ಮೌನದಲ್ಲೇ ಸಾರ್ವಜನಿಕವಾಗಿ…