“ದಿಬ್ಬದಿಂದ ಹತ್ತಿರ ಆಗಸ”ಕ್ಕೆ ಎನ್ನುವುದು ಕರ್ಕಿ ಕೃಷ್ಣಮೂರ್ತಿ ಅವರ ಕಥಾ ಸಂಕಲನ. ಸುಮಾರು ೧೫೦ ಪುಟಗಳ ಈ ಸಂಕಲನದ ಒಂದು ಕಥೆ ‘ದಿ ಗ್ರೇಟ್ ವಾಲ್ ಆಫ್ ಚೈನಾ’ ಇದರ ಆಯ್ದ ಭಾಗ ಇಲ್ಲಿದೆ…
“ಜೊಂಪು ಜೊಂಪಾಗಿ ಬೆಳೆದಿದ್ದ ಗಿಡಗಂಟಿಗಳನ್ನು ಕೈಯ್ಯಿಂದ ಅತ್ತಿತ್ತ ತಳ್ಳುತ್ತ ಮಣ್ಣಿನ ಸಣ್ಣ ಗುಡ್ಡವೊಂದನ್ನು ಏರಿ ಉಧ್ಗರಿಸಿದ ಸ್ಯಾಂಡಿ.
ಅವನ ಹಿಂದೆಯೇ ಎದುರುಸಿರು ಬಿಡುತ್ತ ಬಂದು, ದಿಬ್ಬದ ತುದಿಯಲ್ಲಿ ಸೊಂಟದ ಮೇಲೆ ಕೈಯ್ಯಿಟ್ಟು ನಿಂತ ಸದಾಶಿವ. ಸುತ್ತಲೂ ಕಣ್ಣಾಡಿಸಿದ. ಅಂಥಾ ದಟ್ಟ ಕಾಡಲ್ಲದಿದ್ದರೂ, ಮರ ಗಿಡಗಳಿಂದ ತುಂಬಿದ ಪ್ರದೇಶದಲ್ಲಿ ತಾನು ನಿಂತಿರುವುದಂತೂ ಸ್ಪಷ್ಟವಿತ್ತು. 'ಗ್ರೇಟ್ ವಾಲ್' ಅಂತಾ ಕರೆಯಬಹುದಾದ ಯಾವುದೂ ಅಲ್ಲಿ ಗೋಚರಿಸಲಿಲ್ಲ. ಹಸಿರು ಗಿಡಗಳ…