ಪ್ರತಿಯೊಬ್ಬರ ಮನೆಯಲ್ಲಿ ಇರಲೇ ಬೇಕಾದ ಪುಸ್ತಕವಿದು. ಯಾಕೆಂದರೆ ಭಾರತದ ಪಾರಂಪರಿಕ ಮಹಾಕಾವ್ಯ ರಾಮಾಯಣದ ಪರಿಚಯವನ್ನು ಸರಳವಾಗಿ ಮಕ್ಕಳಿಗೆ ಮಾಡಿಕೊಡಬಲ್ಲ ಪುಸ್ತಕವಿದು.
ಈ ಪುಸ್ತಕದ ಎಡಭಾಗದ ಪುಟಗಳಲ್ಲಿ ರಾಮಾಯಣದ 60 ಘಟನೆಗಳ ವರ್ಣಚಿತ್ರಗಳಿವೆ; ಪ್ರತಿಯೊಂದು ಚಿತ್ರದ ಘಟನೆಯ ವಿವರಣೆ ಬಲಭಾಗದ 60 ಪುಟಗಳಲ್ಲಿವೆ. ಈ ಚಂದದ ಚಿತ್ರಗಳನ್ನು ಒಂದು ಶತಮಾನದ (1916) ಮುಂಚೆ ರಚಿಸಿದವರು ಭವಾನರಾವ್ ಶ್ರೀನಿವಾಸರಾವ್ ಊರ್ಫ ಬಾಳಸಾಹೇಬ ಪಂಡಿತ ಪಂತ ಪ್ರತಿನಿಧಿ, ಬಿ.ಎ., ಸಂಸ್ಥಾನ ಔಂಧ.
ಇದರ ನಿರೂಪಣೆಯನ್ನು ಬರೆದಿರುವ ಪ್ರೊ. ಜಿ. ವೆಂಕಟಸುಬ್ಬಯ್ಯ ಮುನ್ನುಡಿಯಲ್ಲಿ ಹೀಗೆಂದು ನಿವೇದಿಸಿಕೊಂಡಿದ್ದಾರೆ: “ನನಗೆ ಒಂದು ಹಳೆಯ ಪುಸ್ತಕ ಸಿಕ್ಕಿತು. ಅದರ ಹೆಸರು “ಚಿತ್ರ ರಾಮಾಯಣ.” 1916ರಲ್ಲಿ ಪ್ರಕಟವಾದ ಅದು ಬೊಂಬಾಯಿಯ ಬ್ರಿಟಿಷ್…