ಪುಸ್ತಕ ಸಂಪದ

  • "ಕಿತ್ತೂರು ರಾಣಿ ಚೆನ್ನಮ್ಮಳ ಉನ್ನತೋನ್ನತ ಬಹುಮುಖಿ ವ್ಯಕ್ತಿತ್ವದ ಆಯಾಮವನ್ನು ಬಿಂಬಿಸುವ ಕಥೆ, ಕಾದಂಬರಿ, ಕವನ, ಲೇಖನ, ಸಂಶೋಧನ ಗ್ರಂಥ ಸಾಕಷ್ಟು ಬಂದಿದೆ. ಅವುಗಳಿಗೆ ಮುಡಿಯ ಮಾಣಿಕ್ಯವಾಗಿ 'ಸ್ವಾತಂತ್ರ್ಯದ ಕಿಚ್ಚು ಕಿತ್ತೂರು ರಾಣಿ ಚೆನ್ನಮ್ಮ' ಎಂಬ ಬೃಹತ್ ಚಾರಿತ್ರಿಕ ಕಾದಂಬರಿಯನ್ನು ತಂಗಿ ವಿಜಯಲಕ್ಷ್ಮಿ ಶಿವಕುಮಾರ ಕೌಟಗೆ ರಚಿಸಿದ್ದಾರೆ.

    ದಾನಚಿಂತಾಮಣಿ ಅತ್ತಿಮಬ್ಬೆ, ಪಟ್ಟ ಮಹಿಷಿ ಶಾಂತಲಾ ದೇವಿ, ತಪಸ್ವಿನಿ ಅಕ್ಕಮಹಾದೇವಿ, ತೇಜಸ್ವಿನಿ ಕೆಳದಿ ಚೆನ್ನಮ್ಮ ಮೊದಲಾದವರ ಉದಾತ್ತ ಚರಿತೆಯನ್ನು ಮೈಗೂಡಿಸಿಕೊಂಡು ಬೆಳೆದು ಬಾಳಿದ ಕಿತ್ತೂರು ರಾಣಿ ಚೆನ್ನಮ್ಮಳ ಸಾಹಸಗಾಥೆಯ ಯಶೋಗೀತೆ ಈ ಕೃತಿಯಲ್ಲಿ ಮಾರ್ಮೊಳಗಿದೆ.

    ಅತ್ತ ಪ್ರಬಲ…

  • ತೆಲುಗು ಭಾಷೆಯಲ್ಲಿ ಕರುಣಾಕರ್ ಸುಗ್ಗುನ ಬರೆದಿರುವ 'ಲೋಕ ಮೆರುಗನಿ ಏಸು ಮರೋರೂಪಂ' (Other side of Jesus) ಪುಸ್ತಕವನ್ನು ಕನ್ನಡಕ್ಕೆ ತಂದಿದ್ದಾರೆ ಬೆಂಗಳೂರಿನ ಎಸ್. ಅಶ್ವತ್ಥ ನಾರಾಯಣ ಇವರು. ವಿಶ್ವ ಹಿಂದು ಪರಿಷದ್ ಇದರ ಧರ್ಮ ಪ್ರಸಾರ ವಿಭಾಗದ ಕೃಷ್ಣಮೂರ್ತಿ ಇವರು ಪುಸ್ತಕದ ಮೊದಲ ಮಾತು ಬರೆದಿದ್ದಾರೆ. ಅದರಲ್ಲಿ ಅವರು "ಕ್ರೈಸ್ತ ಮತ ವಿಚಾರಗಳಲ್ಲಿನ ಅಸಂಬದ್ಧತೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಿದವರು ಕರುಣಾಕರ ಸುಗ್ಗುನರವರು. ತೆಲುಗು ಭಾಷೆಯ ಓದುಗರಿಗೆ ಅವರು ಪರಿಚಿತರು, ಅಷ್ಟೇ ಅಲ್ಲ ಅತ್ಯಂತ ಜನಪ್ರಿಯರು ಕೂಡಾ. ಅವರ ಪುಸ್ತಕಗಳು ಲಕ್ಷಾವಧಿ ಸಂಖ್ಯೆಯಲ್ಲಿ ಪುನರ್ಮುದ್ರಣಗೊಳ್ಳುತ್ತಿರುವುದೇ ಅದಕ್ಕೆ ಸಾಕ್ಷಿ. ಅಷ್ಟಾಗಿ ಅವರು ಹುಟ್ಟಿದ್ದು ಮತಾಂತರಿತ ಕ್ರೈಸ್ತ ಕುಟುಂಬದಲ್ಲಿ. ಬಾಲ್ಯದ ಮುಗ್ಧ…

  • 'ಫ್ಲವರ್ಸ್ ಆಫ್ ಹಿರೋಶಿಮಾ' ಕಾದಂಬರಿಯ ಮೂಲಕ ಜಗತ್ತಿನ ೩೯ ಭಾಷೆಗಳಿಗೆ ಅನುವಾದವಾಗಿರುವ ಈ ಕಾದಂಬರಿಯು, ಕನ್ನಡಕ್ಕೆ ಬಹಳ ತಡವಾಗಿಯಾದರೂ ಡಾ. ವಿಜಯ್ ನಾಗ್ ಅವರಿಂದ ಬರುತ್ತಿರುವುದು ಬಹಳ ಸಂತೋಷದ ವಿಷಯ. ಅಣುದಾಳಿ, ವಿಕಿರಣದ ಪರಿಣಾಮದಿಂದ ಉಂಟಾದ ನೋವು, ಹತಾಷೆಗಳನ್ನೇ ಕೇಂದ್ರವಾಗಿಟ್ಟುಕೊಂಡು ರಚನೆಯಾದ ಕಾದಂಬರಿಗಳ ಪಟ್ಟಿ ಹೇಗೆ ದೊಡ್ಡದಿದೆಯೋ, ಹಾಗೆಯೇ ಮನುಷ್ಯ ಪ್ರಕೃತಿಯ ಮೇಲೆ, ಕೊನೆಗೆ ತನ್ನೊಡನೆ ಇರುವ ಮನುಷ್ಯನ ಮೇಲೆಯೇ ಏಕಸ್ವಾಮ್ಯತೆಯನ್ನು ಸ್ಥಾಪಿಸಲು ಹವಣಿಸಿ ಮಾಡಿಕೊಂಡ ಅಪಾಯಗಳ ಕುರಿತು ರಚನೆಯಾದ ಕಾದಂಬರಿಗಳ ಪಟ್ಟಿಯೂ ಅಷ್ಟೇ ಇದೆ. 'ಹಿರೋಶಿಮಾದ ಹೂವುಗಳು' ಈ ಪಟ್ಟಿಗೆ ಬರುವ ಕಾದಂಬರಿ. ಮನುಜಕುಲ ಎದುರಿಸಿದ, ಇಂದೂ ಭಯದಲ್ಲೇ ಇರುವ ಬಹುದೊಡ್ಡ ಅಪಾಯಗಳು, ಅಣುಬಾಂಬ್ ಮತ್ತು ಜೈವಿಕ ಅಸ್ತ್ರಗಳು,…

  • ಡಾ. ಗೀತಾ ವಸಂತ ಇವರು 'ಅವಳ ಅರಿವು' ಎಂಬ ಲೋಕಾಂತ ಮತ್ತು ಏಕಾಂತದ ಟಿಪ್ಪಣಿಗಳನ್ನು ಬರೆದು ಕೃತಿಯಾಗಿ ಹೊರತಂದಿದ್ದಾರೆ. ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದು ಲೇಖಕಿಯನ್ನು ಹುರಿದುಂಬಿಸಿದ್ದಾರೆ ಸಾಹಿತಿ ಬರಗೂರು ರಾಮಚಂದ್ರಪ್ಪ ಇವರು. ಬರಗೂರು ಇವರು ತಮ್ಮ ಬೆನ್ನುಡಿಯಲ್ಲಿ " ಡಾ. ಗೀತಾ ವಸಂತ ಇವರು ಸಮಕಾಲೀನ ಕನ್ನಡ ಸಾಹಿತ್ಯ ಸಂದರ್ಭದ ಒಬ್ಬ ಗಂಭೀರ ವಿಶ್ಲೇಷಕಿ ಮತ್ತು ಕವಿಯಾಗಿ ಸಾಕಷ್ಟು ಗಮನೀಯರಾಗಿದ್ದಾರೆ. ಅವರು ಕವಿತೆ ಬರೆಯಲಿ ಅಥವಾ ಗದ್ಯ ಬರಹ ರಚಿಸಲಿ ಅಲ್ಲಿ ಅವರದೇ ಆದ ಒಂದು ವಿಶಿಷ್ಟ ನಿರೂಪಣಾ ಶೈಲಿ ಇರುತ್ತದೆ. ಅವರು ಸಹಜವೆಂಬಂತೆ ಬಳಸುವ ಭಾಷೆಯ ಬೆಡಗು ಮತ್ತೊಂದು ವಿಶೇಷ. ಗೀತಾ ಅವರ ಸಾಹಿತ್ಯ ಭಾಷೆಯಲ್ಲಿ ಹುರಿಗೊಂಡ ಹೃದಯವೇ ಮಾತನಾಡುತ್ತದೆ. ಕೆಲವೊಮ್ಮೆ ಹುರಿಕೊಂಡ ಭಾಷೆಯು ಉರಿಗೊಂಡದ್ದು…

  • 'ಸಾರಮತಿ' ಪುಸ್ತಕವು ಸಂಗೀತಕ್ಕೆ ಸಂಬಂಧಿಸಿದ ಕೃತಿ. ಇದರ ಬೆನ್ನುಡಿಯಲ್ಲಿ "ಕಲಾವಿದರಲ್ಲಿ ಶೋಧಿಸುದಕ್ಕಿರುವ ತುಡಿತದ ಕಾರಣವೇನು? ಸಂಪ್ರದಾಯ ಎನ್ನುವಂಥದ್ದು ಕೇವಲ ಅನುಕರಣೆಯಾದಾಗ ಆಗುವ ಸಮಸ್ಯೆ ಎಂಥದ್ದು? ಸೃಷ್ಟಿಶೀಲಮನಸ್ಸುಳ್ಳ, ಪ್ರತಿಭೆಯುಳ್ಳ ಕಲಾವಿದನಲ್ಲಿ ಏಕೆ ಅದು ಪ್ರಶ್ನೆಗಳನ್ನು ಎಬ್ಬಿಸುತ್ತದೆ ಎನ್ನುವುದನ್ನು ಗಮನಿಸಬೇಕಾಗುತ್ತದೆ. ಕಳೆದ ಶತಮಾನ ಕಂಡ ಶ್ರೇಷ್ಟ ಸಂಗೀತಗಾರರಲ್ಲಿ ಒಬ್ಬರು ಆಂಧ್ರದ ವೋಲೇಟಿ ವೆಂಕಟೇಶ್ವರಲು, ನಮ್ಮ ಕರ್ನಾಟಕ ಶಾಸ್ತ್ರೀಯ ಸಂಗೀತದ ಸಂಪ್ರದಾಯಕ್ಕೊಂದು ವ್ಯಕ್ತಿರೂಪವೆಂದು ಪರಿಗಣಿಸಬಹುದಾದ ಡಾ. ಶ್ರೀಪಾದ ಪಿನಾಕಪಾಣಿಯವರ ಶಿಷ್ಯ. ಇಷ್ಟಾಗಿಯೂ ವೋಲೇಟಿಯವರ ಸಂಗೀತ ತಮ್ಮ ಗುರುಗಳ ಬಾಣಿಗಿಂತ ಭಿನ್ನ ಮತ್ತು ಸ್ವತಂತ್ರ. ಒಂದು ರೈಲು ಪ್ರಯಾಣವನ್ನು ಗಮನಿಸುವುದಾದರೆ, ಅಲ್ಲಿ…

  • ಒಂದು ಸಮಯದಲ್ಲಿ ಪತ್ತೇದಾರಿ ಕಾದಂಬರಿಯನ್ನು ಬರೆಯುವವರ ಸಂಖ್ಯೆ ಬಹಳವಿತ್ತು. ಅವುಗಳನ್ನು ಪ್ರಕಾಶಿಸಲು ಹಾಗೂ ಪ್ರಕಟವಾದ ಬಳಿಕ ಖರೀದಿಸಿ ಓದಲು, ಓದುಗರ ಸಂಖ್ಯೆಯೂ ಸಾಕಷ್ಟಿತ್ತು. ಪತ್ತೇದಾರಿ ಕಾದಂಬರಿಗಳನ್ನು ಪ್ರಕಟ ಮಾಡಲೆಂದೇ ಹಲವಾರು ಮಾಸ ಪತ್ರಿಕೆಗಳಿದ್ದವು, ಕ್ರೈಂ ಕಾದಂಬರಿ, ಸ್ಪೈ, ಡಿಟೆಕ್ಟಿವ್ ಥ್ರಿಲ್ಲರ್ ಮೊದಲಾದ ಪುಸ್ತಕಗಳಿಗೆ ಬಹಳ ಬೇಡಿಕೆ ಇತ್ತು. ಕಾಲಕ್ರಮೇಣ ಮೊಬೈಲ್ ಪ್ರತಿಯೊಬ್ಬರ ಕೈಗೆ ಬಂದಾಗ ಈ ಓದುವ ಹವ್ಯಾಸ ಕಡಿಮೆಯಾಗತೊಡಗಿತು. ಈಗಂತೂ ಮಾರುಕಟ್ಟೆಯಲ್ಲಿ ಒಂದೇ ಒಂದು ಪತ್ತೇದಾರಿ ಕಥೆಗಳಿಗೆ ಮೀಸಲಾದ ಪತ್ರಿಕೆಗಳಿಲ್ಲ. ಆದರೆ ಪತ್ತೇದಾರಿ ಕಾದಂಬರಿ, ಕಥೆಗಳು ಆಗೊಮ್ಮೆ ಈಗೊಮ್ಮೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಲೇ ಇವೆ. 

    ಈ ನಿಟ್ಟಿನಲ್ಲಿ…

  • ತೆಲುಗು ಭಾಷೆಯಿಂದ ಅನುವಾದಗೊಂಡಿರುವ ಈ 'ಮೌನಸಾಕ್ಷಿ' ಕಥಾ ಸಂಕಲನದಲ್ಲಿ ಹನ್ನೊಂದು ವೈವಿಧ್ಯಮಯ ಬದುಕಿನ ಕಥೆಗಳಿವೆ. ಇಲ್ಲಿ ಜಟಿಲವಾದ ಘಟ್ಟದಲ್ಲಿ ಮಧ್ಯಮ ವರ್ಗದ ಹೆಣ್ಣೊಬ್ಬಳು ತನ್ನ ಜೀವನದ ಗಮ್ಯವನ್ನು ರೂಪಿಸಿಕೊಳ್ಳುವ ಗಟ್ಟಿನಿಲುವಿನ ಕಥೆ, ಒಂದು ಸಾಮಾಜಿಕ ಧ್ಯೇಯ ಸಾಧನೆಗೆ ಹೋರಾಡುವ ನಿಸ್ವಾರ್ಥ ಮತ್ತು ಸ್ವಾರ್ಥ ಹೋರಾಟಗಾರರ ಭಿನ್ನ ನಿಲುವುಗಳನ್ನು ಅನಾವರಣಗೊಳಿಸುವ, ಮಕ್ಕಳ ಭವಿಷ್ಯತ್ತಿಗಾಗಿ ಭಾರತೀಯ ಮತ್ತು ಅನಿವಾಸಿ ಭಾರತೀಯ ಪೋಷಕರ ಚಿಂತನೆಗೆ ಕನ್ನಡಿ ಹಿಡಿಯುವ, ನಾಗರಿಕತೆ ಮತ್ತು ಮಾನವೀಯತೆಯ ವ್ಯಾಖ್ಯಾನವನ್ನು ಪ್ರಶ್ನಿಸುವ ಹಾಗೂ ಸಾಮಾಜಿಕ ತುಡಿತದ ಎಳೆಯುಳ್ಳ ಕಥೆಗಳಿವೆ. ಅವು ಕಣ್ಣಿಗೆ ಕಟ್ಟುವಂತೆ ನಿರೂಪಣೆಗೊಂಡಿವೆ.

    ತೆಲುಗು ಭಾಷೆಯ ಮೂಲ ಲೇಖಕರಾದ…

  • ಪತ್ರಕರ್ತ ಗಣೇಶ್ ಕಾಸರಗೋಡು ಇವರ ' ಬೆಳ್ಳಿ ತೆರೆಯ ಬಂಗಾರದ ಗೆರೆ' ಪುಸ್ತಕವು ಸಿನೆಮಾ ರಂಗದ ಅಪರೂಪದ ಕಥೆಗಳನ್ನು ನಮ್ಮ ಮುಂದೆ ಹರಡುತ್ತದೆ. ಬಹಳ ಮುದ್ದಾದ ಮುಖಪುಟದೊಂದಿಗೆ ಮೂಡಿ ಬಂದಿರುವ ಪುಸ್ತಕವು ಅತ್ಯಂತ ಸುಂದರವಾಗಿ ಕನ್ನಡ ಚಿತ್ರರಂಗದ ಅಂತರಾಳವನ್ನು ಬಿಚ್ಚಿಡುತ್ತಾಹೋಗುತ್ತದೆ. ಪತ್ರಕರ್ತರಾದ ಡಾ। ಶರಣು ಹುಲ್ಲೂರು ಇವರು ಬೆನ್ನುಡಿಯನ್ನು ಬರೆದಿದ್ದಾರೆ. ತಮ್ಮ ನುಡಿಯಲ್ಲಿ ಅವರು "ದೂರದಿಂದ ಇವರು ಸಂಜೆ ಆಕಾಶ. ಹಲವು ರೀತಿಯ ಆಕಾರ. ಆಕರ, ಚಿತ್ತಾರ. ಕೆಲವರಿಗೆ ಉರಿವ ಜಮದಗ್ನಿ. ಹಿಡಿದರೆ ಬಿಡದ ವಿಶ್ವಾಮಿತ್ರ. ಬಲ್ಲವರಿಗೆ ಹಿರಿಯಣ್ಣ ಮಾರ್ಗದರ್ಶಿ. ಉರಿವ ದೀಪದಲ್ಲಿನ ಬೆಳಗು. ಬೆಳಕು ಆಯ್ಕೆ ನಿಮ್ಮದು. 

    ಸಿನೆಮಾ ಪತ್ರಕರ್ತರಿಗೆ ಗಾಸಿಪ್. ಗ್ಲಾಮರ್ ಹೊರತಾಗಿ…

  • ಕೃಷಿ ಪತ್ರಕರ್ತರಾದ ರಾಧಾಕೃಷ್ಣ ಹೊಳ್ಳ ಇವರು ತಾವು ಬಾಳೆ ಬೆಳೆಯ ಬಗ್ಗೆ ಬರೆದ ಲೇಖನಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಇವರ ಈ ಪ್ರಯತ್ನಕ್ಕೆ ಸಹಕಾರ ನೀಡಿದ್ದಾರೆ ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರಾದ ಪಿ ವಿ ಹೇರಳೆ ಇವರು. ಬಾಳೆ ಬೆಳೆಯ ಬಗ್ಗೆ ಸಮಗ್ರವಾದ ವಿಷಯವನ್ನು ತಿಳಿಸಿಕೊಡುವ ಒಂದು ಕೈಪಿಡಿ ಈ ಪುಸ್ತಕ ಎಂದರೆ ತಪ್ಪಾಗಲಾರದು. 

    ಬಾಳೆ ಬೆಳೆಯ ಪರಿಚಯದಿಂದ ಪ್ರಾರಂಭಿಸಿ ಅದರ ತಳಿ ವೈವಿಧ್ಯಗಳು, ಬೇಸಾಯ ಕ್ರಮ, ನೆಡು ಸಾಮಾಗ್ರಿ, ಅಧಿಕ ಇಳುವರಿಗೆ ಗೊಬ್ಬರಗಳ ಬಳಕೆ, ಸುಧಾರಿತ ಬಾಳೆ ಬೇಸಾಯದ ಕ್ರಮ, ಬಾಳೆಯೊಂದಿಗೆ ಬೆಳೆಯಬಹುದಾದ ಮಿಶ್ರ ಬೆಳೆಗಳು, ಅಧಿಕ ಸಾಂದ್ರ ಬೇಸಾಯ, ಬಾಳೆ ಬೆಳೆಯ ಆರ್ಥಿಕತೆ, ನೀರಾವರಿ, ಬೆಳೆಯನ್ನು ಸಂರಕ್ಷಿಸುವ…

  • ವಿಶಿಷ್ಟ, ವಿನೂತನ ಪುಸ್ತಕಗಳ ಸರಮಾಲೆಗಳನ್ನು ಹೊರತರುತ್ತಿರುವ ಅಯೋಧ್ಯಾ ಪ್ರಕಾಶನವು ರೋಹಿತ್ ಚಕ್ರತೀರ್ಥ ಅವರ 'ನೂರಾರು ಯಹೂದಿ ಕಥೆಗಳು' ಎಂಬ ಪುಟ್ಟ ಪುಸ್ತಕವನ್ನು ಹೊರತಂದಿದೆ. ಯಹೂದಿ ಕಥೆಗಳನ್ನು ನೀವು ಅಲ್ಲೊಂದು ಇಲ್ಲೊಂದು ಓದಿರಬಹುದು. ಆದರೆ ಒಂದೇ ಗುಕ್ಕಿಗೆ ಇಷ್ಟೊಂದು ಕಥೆಗಳನ್ನು ಓದುವ ಅವಕಾಶ ಸಿಗುವುದು ಅಪರೂಪ. ನೂರ ಆರು ಕಥೆಗಳನ್ನು 'ಮಂದಹಾಸ ಮಿನುಗಿಸುವ ನಗೆಮಿಂಚುಗಳು' ಎಂದು ಲೇಖಕರು ಕರೆದಿದ್ದಾರೆ.

    ರೋಹಿತ್ ಚಕ್ರತೀರ್ಥ ಇವರು ತಮ್ಮ ಮುನ್ನುಡಿಯಲ್ಲಿ ಯಹೂದ್ಯರ ಜನಪದ ಕತೆಗಳ ಹಾಸ್ಯ - ಹಾಲಿನ ಮೇಲೆ ತೇಲುವ ತಿಳಿ ಕೆನೆಯ ಮಾದರಿಯದು. ಅಲ್ಲಿ ಧರ್ಮಗುರುವಿನ ಪೀಠದಲ್ಲಿ ಕೂತರೂ ಅದರ ಬಿಗುಮಾನವಿಲ್ಲದೆ ಹಾಸ್ಯ ಚಟಾಕಿ ಹಾರಿಸುವ, ತನ್ನ ಪೆದ್ದುತನದಿಂದಲೇ ಜನಕ್ಕೆ ಹತ್ತಿರವಾಗುವ ರಬೈ ಇದ್ದಾನೆ. ಪೆದ್ದು ಶಿಖಾಮಣಿಗಳ ನಡುವೆ…